ETV Bharat / briefs

ವಿಶ್ವಕಪ್​​​ 2019: ಕೊಹ್ಲಿಗೆ ಶುಭ ಕೋರಿದ ಜರ್ಮನ್​​​ ಫುಟ್​ಬಾಲ್​​ ಲೆಜೆಂಡ್​​​​​

ವಿಶ್ವಕಪ್​ನಲ್ಲಿ ಭಾರತ ತಂಡ ಹಾಗೂ ಕೊಹ್ಲಿಗೆ ಜರ್ಮನಿಯ ಫುಟ್​ಬಾಲ್ ತಾರೆ ಥಾಮಸ್​ ಮುಲ್ಲರ್​ ಟ್ವಿಟರ್​ನಲ್ಲಿ​ ಶುಭ ಕೋರಿದ್ದಾರೆ.

author img

By

Published : Jun 4, 2019, 8:19 AM IST

virat

ಲಂಡನ್​: ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ವಿಶ್ವಕಪ್​ನಲ್ಲಿ ಭಾರತ ತಂಡ ಹಾಗೂ ಕೊಹ್ಲಿಗೆ ಶುಭವಾಗಲಿ ಎಂದು ಭಾರತ ತಂಡದ ಜರ್ಸಿ ತೊಟ್ಟು ಜರ್ಮನಿಯ ಫುಟ್​ಬಾಲ್ ತಾರೆ ಥಾಮಸ್​ ಮುಲ್ಲರ್​ ಟ್ವಿಟರ್​ನಲ್ಲಿ ​ ಶುಭ ಕೋರಿದ್ದಾರೆ.

ಫುಟ್​ಬಾಲ್​ ಪ್ರೇಮಿಯಾಗಿರುವ ಕೊಹ್ಲಿ ಹಲವು ಬಾರಿ ಡೀ ಮನ್ಸ್​ಶಾಫ್ಟ್​ ತಂಡದ ಆಭಿಮಾನಿಯಾಗಿದ್ದು, 2016ರ ಯೂರೋ ಕಪ್​ ಸಂದರ್ಭದಲ್ಲಿ ಮುಲ್ಲರ್​ ತಂಡಕ್ಕೆ ಶುಭ ಕೋರಿದ್ದರು.

ಇದೀಗ ಜರ್ಮನಿಯ ಫಾರ್ವರ್ಡರ್​ ಭಾರತ ತಂಡದ ಜರ್ಸಿ ತೊಟ್ಟು ವಿಶ್ವಕಪ್​ನಲ್ಲಿ ಭಾಗವಹಿಸುವ ಎಲ್ಲ ತಂಡಗಳಿಗೂ ಶುಭವಾಗಲಿ ಎಂದಿದ್ದಾರೆ. ಅಲ್ಲದೆ ಭಾರತದ ನಾಯಕ ವಿರಾಟ್​ ಕೊಹ್ಲಿಗೆ ವಿಶೇಷವಾಗಿ ಶುಭ ಕೋರಿದ್ದಾರೆ. ಕೊಹ್ಲಿ ನಮ್ಮ ತಂಡಕ್ಕೆ ಹಲವು ಬಾರಿ ಬೆಂಬಲ ನೀಡಿದ್ದಾರೆ. ಹಾಗಾಗಿ ತಾವೂ ಭಾರತ ಹಾಗೂ ನಾಯಕ ಕೊಹ್ಲಿಗೆ ಬೆಂಬಲ ನೀಡುತ್ತಿರುವುದಾಗಿ ಬರೆದುಕೊಂಡಿದ್ದಾರೆ.

ಕೊಹ್ಲಿ ಇಂಗ್ಲೆಂಡ್​ಗೆ ತೆರಳಿದ ನಂತರ ಇಂಗ್ಲೆಂಡ್​ ತಂಡದ ನಾಯಕ ಹ್ಯಾರಿ ಕೇನ್​ರನ್ನ ಭೇಟಿ ಮಾಡಿದ್ದರು. ಇದಲ್ಲದೆ ಕಳೆದ ವರ್ಷ ಭಾರತ ಫುಟ್​ಬಾಲ್​ ತಂಡದ ನಾಯಕ ಸುನಿಲ್​ ಚೆಟ್ರಿ ಫುಟ್​ಬಾಲ್​ ಆಟವನ್ನು ನೋಡುವಂತೆ ಮಾಡಿದ್ದ ಭಾವನಾತ್ಮಕ ವಿಡಿಯೋಗೆ ಸ್ಪಂದಿಸಿದ್ದ ಕೊಹ್ಲಿ, ಎಲ್ಲ ಆಟವನ್ನು ಗೌರವಿಸುವಂತೆ ಕೋರಿ ಸ್ನೇಹಿತನ ನೆರವಿಗೆ ನಿಂತಿದ್ದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.