ETV Bharat / briefs

ಇಬ್ಬರು ಆಲ್​ರೌಂಡರ್​ಗಳಿಗೆ ಗಾಯ: ಚಿಂತೆಯಲ್ಲಿ ಟೀಂ ಇಂಡಿಯಾ - ವಿಶ್ವಕಪ್​

ನೆಟ್​ನಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ವಿಜಯ್ ಶಂಕರ್‌ ಹಾಗು ಕೇದಾರ್ ಜಾದವ್ ಗಾಯಗೊಂಡಿದ್ದಾರೆ.

vijay
author img

By

Published : May 25, 2019, 9:07 PM IST

ಲಂಡನ್​: ವಿಶ್ವಕಪ್​ಗೆ ಆಯ್ಕೆಯಾಗಿರುವ ಆಲ್​ರೌಂಡರ್​ಗಳಾದ ಕೇದಾರ್​ ಜಾಧವ್​ ಹಾಗೂ ವಿಜಯ್​ ಶಂಕರ್​ ಗಾಯಗೊಂಡಿದ್ದು ಬಿಸಿಸಿಐಗೆ ತಲೆ ನೋವು ತಂದಿದೆ.

ವಿಶ್ವಕಪ್​ ಆರಂಭಕ್ಕೆ ಇನ್ನೊಂದು ವಾರ ಬಾಕಿ ಇರುವಾಗ ಭಾರತ ತಂಡದ ಪ್ರಮುಖ ಆಲ್‌ರೌಂಡರ್‌ಗಳಾದ ಕೇದಾರ್​ ಜಾಧವ್​ ಹಾಗು​ ವಿಜಯ್​ ಶಂಕರ್ ಗಾಯಗೊಂಡಿದ್ದಾರೆ.

ನೆಟ್​ನಲ್ಲಿ ಖಲೀಲ್​ ಅಹ್ಮದ್ ಬೌಲಿಂಗ್​ನಲ್ಲಿ ಬ್ಯಾಟಿಂಗ್​ ನಡೆಸುತ್ತಿದ್ದಾಗ ಬಾಲ್​ ವಿಜಯ್​ ಮುಂದೋಳಿಗೆ ತಗುಲಿದೆ. ಇದರಿಂದ ಅಭ್ಯಾಸವನ್ನು ಮೊಟಕುಗೊಳಿಸಿದ ಅವರು​ ವಿಶ್ರಾಂತಿ ಪಡೆದುಕೊಂಡಿದ್ದು, ಇಂದಿನ ಆಭ್ಯಾಸ ಪಂದ್ಯದಲ್ಲಿ ಕಣಕ್ಕಿಳಿದಿಲ್ಲ.

  • UPDATE - Vijay Shankar was hit on his right forearm during practice on Friday. He underwent scans and no fracture has been detected. BCCI Medical Team is aiding him in his recovery pic.twitter.com/47ufzHtLX7

    — BCCI (@BCCI) May 25, 2019 " class="align-text-top noRightClick twitterSection" data=" ">

ಕೇದಾರ್ ಜಾಧವ್‌ಗೆ ಬಾಲ್​ ಎಸೆಯುವ ವೇಳೆ ಭುಜದ ನೋವು ಕಾಣಿಸಿಕೊಂಡಿತ್ತು. ಇವರಿಬ್ಬರೂ ಗಾಯಾಳುಗಳಾಗಿದ್ದು ಕೋಚ್​ ರವಿಶಾಸ್ತ್ರಿ ಹಾಗೂ ನಾಯಕ ಕೊಹ್ಲಿ ನಿದ್ದೆಗೆಡಿಸಿದೆ.

ಗಾಯಗೊಂಡ ವಿಜಯ್​ರನ್ನು ಸ್ಕ್ಯಾನಿಂಗ್‌ಗೆ​ ಒಳಪಡಿಸಲಾಗಿದ್ದು ಯಾವುದೇ ಮೂಳೆ ಮುರಿತವಾಗಿಲ್ಲ ಎಂದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ. ಅದೇ ರೀತಿ ವಿಜಯ್​ ಶೀಘ್ರ ಚೇತರಿಕೆ ಕಂಡುಕೊಳ್ಳಲಿದ್ದಾರೆ ಎಂಬ ವಿಶ್ವಾಸದಲ್ಲಿ ಭಾರತ ತಂಡ ಇದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.