ಲಂಡನ್: ಸ್ಟಿವ್ ಸ್ಮಿತ್ ಹಾಗೂ ವಾರ್ನರ್ರನ್ನು ಇಂಗ್ಲೆಂಡ್ ಅಭಿಮಾನಿಗಳು ಮೋಸಗಾರರು ಎಂದು ಹೀಯಾಳಿಸಿದರೂ ಅದನ್ನು ಲೆಕ್ಕಿಸದೆ ಇಬ್ಬರು ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಬಾಲ್ ಟ್ಯಾಂಪರಿಂಗ್ ಆರೋಪದ ಮೇಲೆ ಒಂದು ವರ್ಷ ನಿಷೇಧಕ್ಕೊಳಗಾಗಿ ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳಿರುವ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟಿವ್ ಸ್ಮಿತ್ ಹಾಗೂ ವಾರ್ನರ್ರನ್ನು ಇಂಗ್ಲೆಂಡ್ ವಿರುದ್ಧ ನಡೆಯುತ್ತಿದ್ದ ಅಭ್ಯಾಸ ಪಂದ್ಯದ ವೇಳೆ ಅಲ್ಲಿನ ಅಭಿಮಾನಿಗಳು ಇಬ್ಬರನ್ನು ಚೀಟರ್ಸ್ ಚೀಟರ್ಸ್ ಎಂದು ಎಂದು ಹೀಯಾಳಿಸಿದ್ದಾರೆ. ಆದರೆ ಟೀಕೆ, ಅವಹೇಳನವನ್ನು ಲೆಕ್ಕಿಸದೆ ಇಬ್ಬರು ಕೇವಲ ಆಟದ ಕಡೆ ಮಾತ್ರ ಗಮನ ನೀಡಿ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಆರಂಭಿಕರಾಗಿ ಕಣಕ್ಕಿಳಿದಿದ್ದ ಡೇವಿಡ್ ವಾರ್ನರ್ 55 ಎಸೆತಗಳಲ್ಲಿ 43 ರನ್ ಗಳಿಸಿದರೆ ಸ್ಮಿತ್ 102 ಎಸೆತಗಳಲ್ಲಿ 116 ರನ್ ಸಿಡಿಸಿದರು. ಇವರಿಬ್ಬರ ಆಟದ ನೆರವಿನಿಂದ ಆಸೀಸ್ ಆಂಗ್ಲರ ವಿರುದ್ಧ 12 ರನ್ಗಳ ರೋಚಕ ಜಯ ಸಾಧಿಸಿತು.
ವಿಶ್ವಕಪ್ಗೂ ಮುನ್ನ ಆ ಇಬ್ಬರೂ ಆಟಗಾರರ ಮನೋಬಲವನ್ನು ಕುಗ್ಗಿಸುವ ಯತ್ನಕ್ಕೆ ಇಂಗ್ಲಿಷರು ಮುಂದಾಗಿರುವುದು ಕ್ರೀಡಾಸ್ಫೂರ್ತಿಗೆ ಧಕ್ಕೆ ಉಂಟಾಗಿದೆ. ಈ ಕಾರಣದಿಂದ ಇಂಗ್ಲಿಷ್ ಕ್ರಿಕೆಟಿಗ ಮೊಯಿನ್ ಅಲಿ ಎರಡು ದಿನಗಳ ಹಿಂದೆ ತಮ್ಮ ಅಭಿಮಾನಿಗಳಿಗೆ ದಯವಿಟ್ಟು ಸ್ಮಿತ್ ಹಾಗೂ ವಾರ್ನರ್ರ ಜೊತೆ ಸಂಯಮದಿಂದ ವರ್ತಿಸಿ ಎಂದು ಕೇಳಿಕೊಂಡಿದ್ದರು.