2008 ಮಾರ್ಚ್ 2 ರಂದು ನಡೆದ ಪಂದ್ಯದಲ್ಲಿ ಅಂಡರ್-19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಕ್ರಿಕೆಟ್ ತಂಡ ಟಾಸ್ ಸೋತು ಬ್ಯಾಟಿಂಗ್ ನಡೆಸಿತ್ತು. 45.4 ಓವರ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕೆಳೆದುಕೊಂಡ ಭಾರತ 159 ರನ್ಗಳ ಸಾಧಾರಣ ಮೊತ್ತವನ್ನು ಕಲೆ ಹಾಕಿತ್ತು.
ಇನ್ನು ಈ ಪಂದ್ಯಕ್ಕೆ ವರುಣನ ಕಾಟ ಶುರುವಾಗಿತ್ತು. ಭಾರತ ತಂಡ ನಸೀಬ್ ಮತ್ತಷ್ಟು ಕುಗ್ಗಿತ್ತು. ಡಿಎನ್ ಪ್ರಕಾರ 25 ಓವರ್ಗಳಿಗೆ ಕೇವಲ 116 ರನ್ಗಳ ಟಾರ್ಗೆಟ್ ಹೊಂದಿತ್ತು ಸೌತ್ ಆಫ್ರಿಕಾ ತಂಡ.
116 ರನ್ಗಳ ಬೆನ್ನತ್ತಿದ್ದ ಸೌತ್ ಆಫ್ರಿಕಾ ಕಿರಿಯರ ತಂಡ ಆರಂಭದಿಂದಲೇ ಕುಸಿತ ಕಂಡಿತು. ಕೇವಲ 25 ಓವರ್ಗಳಿಗೆ 8 ವಿಕೆಟ್ಗಳ ನಷ್ಟಕ್ಕೆ 103 ರನ್ಗಳನ್ನು ಕಲೆ ಹಾಕಿ 12 ರನ್ಗಳ ಸೋಲು ಕಂಡಿತು. ಅಜಿತೇಶ್ ಅರ್ಗಲ್, ರವೀಂದ್ರ ಜಡೇಜಾ ಮತ್ತು ಎಸ್ ಕೌಲ್ ತಲಾ ಎರಡು ವಿಕೆಟ್ಗಳನ್ನು ಪಡೆದು ತಂಡಕ್ಕೆ ಆಸರೆ ಆಗಿದ್ದರು.
ಮ್ಯಾಚ್ ಹೀರೋಗೆ ಇನ್ನು ಚಾನ್ಸ್ ಇಲ್ಲ...
ಭಾರತ ತಂಡದ ಪರ ಎಕೆ ಅರ್ಗಲ್ ಉತ್ತಮ ದಾಳಿ ನಡೆಸಿದ್ದರು. ಕೇವಲ 5 ಓವರ್ಗಳನ್ನು ಎಸೆದಿರುವ ಅರ್ಗಲ್ 2 ಮೆಡನ್ ಮತ್ತು 7 ರನ್ಗಳನ್ನು ನೀಡಿ 2 ವಿಕೆಟ್ಗಳನ್ನು ಪಡೆದು ಮಿಂಚಿದ್ದರು. ಅಂಡರ್-19 ವಿಶ್ವಕಪ್ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದರು. ಮ್ಯಾನ್ ಆಫ್ ದಿ ಮ್ಯಾಚ್ ಸಹ ಪಡೆದಿದ್ದರು. ಆದ್ರೆ ಇವರಿಗೆ ಭಾರತ ತಂಡದಲ್ಲಿ ಇನ್ನು ಅವಕಾಶ ದೊರೆತಿಲ್ಲ. ಸದ್ಯ ಇವರು ಬರೋಡಾ ರಣಜಿ ತಂಡದಲ್ಲಿ ಆಡುತ್ತಿದ್ದು, ಅಲ್ಲಿಯೂ ಸಹ ಅವರಿಗೆ ಚಾನ್ಸ್ಗಳು ಸಿಗುತ್ತಿರುವುದು ಕಡಿಮೆಯೇ ಆಗಿವೆ.