ಮಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ತಮಗೆ ದೊರಕಿರುವ ಈ ಸಾಲಿನ ಸಂಸದರ ಪ್ರದೇಶಾಭಿವೃದ್ಧಿಯ ಸಂಪೂರ್ಣ 2.50 ಕೋ.ರೂ. ಅನುದಾನದ ಹಣವನ್ನು ದ.ಕ. ಜಿಲ್ಲಾ ಕೋವಿಡ್ ಸೋಂಕಿನ ನಿರ್ವಹಣೆಗೆ ನೀಡಿದ್ದಾರೆ.
ದ.ಕ. ಜಿಲ್ಲೆಯಲ್ಲಿ ಕೋವಿಡ್ ಸಾಂಕ್ರಾಮಿಕ ರೋಗವನ್ನು ಎದುರಿಸಲು ಬೇಕಾದ ವೈದ್ಯಕೀಯ ಪರಿಕರಗಳು ಇತ್ಯಾದಿಗಳನ್ನು ಅಳವಡಿಸಲು ಈ ಅನುದಾನ ಉಪಯೋಗಿಸಿಕೊಳ್ಳಲು ನಳಿನ್ ಕುಮಾರ್ ಕಟೀಲು ಅವರು ಸೂಚಿಸಿದ್ದಾರೆ.