ETV Bharat / jagte-raho

ಉತ್ತರ ಪ್ರದೇಶದಲ್ಲಿ ಪ್ರತ್ಯೇಕ ರಸ್ತೆ ಅಪಘಾತ: 32 ವಲಸೆ ಕಾರ್ಮಿಕರಿಗೆ ಗಾಯ - ಅಯೋಧ್ಯೆಯಲ್ಲಿ ರಸ್ತೆ ಅಪಘಾತ

accident news
ರಸ್ತೆ ಅಪಘಾತ
author img

By

Published : May 18, 2020, 9:34 AM IST

Updated : May 18, 2020, 8:03 PM IST

09:13 May 18

ಉತ್ತರ ಪ್ರದೇಶದಲ್ಲಿ ಪ್ರತ್ಯೇಕ ರಸ್ತೆ ಅಪಘಾತ: 32 ವಲಸೆ ಕಾರ್ಮಿಕರಿಗೆ ಗಾಯ

ಉತ್ತರ ಪ್ರದೇಶ: ಇಂದು ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ 32 ಮಂದಿ ವಲಸೆ ಕಾರ್ಮಿಕರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.  

ಅಯೋಧ್ಯೆಯಲ್ಲಿ ವಲಸೆ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಟ್ರಕ್​ಗೆ ಪಿಕಪ್ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ 20 ವಲಸೆ ಕಾರ್ಮಿಕರು ಗಾಯಗೊಂಡಿದ್ದಾರೆ. ಇವರೆಲ್ಲರೂ ಮುಂಬೈನಿಂದ ಉತ್ತರ ಪ್ರದೇಶದ ಸಿದ್ದಾರ್ಥ ನಗರಕ್ಕೆ ಬರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಉತ್ತರ ಪ್ರದೇಶದಿಂದ ಬಿಹಾರಕ್ಕೆ ವಲಸೆ ಕಾರ್ಮಿಕರು ತೆರಳುತ್ತಿದ್ದ ಬಸ್​ಗೆ ಖುಷಿನಗರ್​ನಲ್ಲಿ ಟ್ರಕ್​ವೊಂದು ಡಿಕ್ಕಿ ಹೊಡೆದ ಪರಿಣಾಮ 12 ಮಂದಿ ಗಾಯಗೊಂಡಿದ್ದು, 8 ಜನರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಆರೋಗ್ಯ ಕೇಂದ್ರ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಎರಡು ದಿನಗಳಿಂದ ಹಿಂದೆ ಔರಾಯ ಜಿಲ್ಲೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ 24 ವಲಸೆ ಕಾರ್ಮಿಕರು ಮೃತಪಟ್ಟ ಬಳಿಕ ಸಿಎಂ ಯೋಗಿ ಆದಿತ್ಯನಾಥ್​, ಜಿಲ್ಲಾಡಳಿತಗಳಿಗೆ ಅಸುರಕ್ಷಿತವಾಗಿ ವಾಹನಗಳಲ್ಲಿ ಬರುವ ಕಾರ್ಮಿಕರಿಗೆ ಅವಕಾಶ ನೀಡಬೇಡಿ ಎಂದು ಸೂಚನೆ ನೀಡಿದ್ದರು.

Last Updated : May 18, 2020, 8:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.