ETV Bharat / bharat

Zomato CEO: ಡೆಲಿವರಿ ಬಾಯ್​ ಆದ ಜೊಮ್ಯಾಟೊ ಸಿಇಒ ಗೋಯಲ್​, ಇದು ಗೆಳೆಯರ ದಿನದ ವಿಶೇಷ! - Zomato CEO turns delivery boy

Zomato CEO turns delivery boy: ಜೊಮ್ಯಾಟೊ ಸಿಇಒ ದೀಪಿಂದರ್ ಗೋಯಲ್ ಅವರು ಸಾಮಾನ್ಯ ಡೆಲಿವರಿ ಬಾಯ್​​ಯಂತೆ ಗ್ರಾಹಕರಿಗೆ ಆಹಾರದ ಪೊಟ್ಟಣ ವಿತರಿಸಿ ವಿಶೇಷ ರೀತಿಯಲ್ಲಿ ಗೆಳೆಯರ ದಿನಾಚರಿಸಿದರು.

ಡೆಲಿವರಿ ಬಾಯ್​ ಆಗಿ ಫುಡ್​ ಹಂಚಿದ ಜೊಮ್ಯಾಟೊ ಸಿಇಒ ಗೋಯಲ್

author img

By

Published : Aug 6, 2023, 5:15 PM IST

ಹೈದರಾಬಾದ್: ಜೊಮ್ಯಾಟೊ ಸಿಇಒ ದೀಪಿಂದರ್ ಗೋಯಲ್ ವಿನೂತನ ರೀತಿಯಲ್ಲಿ ಫ್ರೆಂಡ್‌ಶಿಪ್ ಡೇ ಆಚರಿಸಿದ್ದಾರೆ. ರೆಗ್ಯುಲರ್ ಡೆಲಿವರಿ ಬಾಯ್‌ಯಂತೆ ಕೆಂಪು ಟಿ-ಶರ್ಟ್‌ ಧರಿಸಿದ್ದ ಅವರು ಬೈಕ್‌ನಲ್ಲಿ ಗ್ರಾಹಕರಿಗೆ ಆಹಾರ ವಿತರಿಸಿ ಗಮನ ಸೆಳೆದರು. ಇದರ ಫೋಟೋಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ದೀಪಿಂದರ್ ಗೋಯಲ್ ಅವರು ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಮನೆ, ಮನೆಗಳಿಗೆ ತೆರಳಿ ಗ್ರಾಹಕರಿಗೆ ಆಹಾರದ ಪೊಟ್ಟಣಗಳನ್ನು ತಲುಪಿಸಿದ್ದಾರೆ. ಅಲ್ಲದೇ, ಕೈಯಲ್ಲಿ ಭಾನುವಾರ ಗೆಳೆಯರ ದಿನವಾದ ಕಾರಣ ಫ್ರೆಂಡ್‌ಶಿಪ್ ಬ್ಯಾಂಡ್‌ಗಳನ್ನು ಇಟ್ಟುಕೊಂಡಿದ್ದು, ಅವುಗಳನ್ನು ಫುಡ್​​ ವಿತರಣಾ ಪಾಲುದಾರರು, ಗ್ರಾಹಕರು ಮತ್ತು ರೆಸ್ಟೋರೆಂಟ್ ಮಾಲೀಕರಿಗೆ ಗೆಳೆತನದ ದ್ಯೋತಕವಾಗಿ ನೀಡಿದರು ಎಂದು ವರದಿಯಾಗಿದೆ. ಈ ಮೂಲಕ ಕಂಪನಿಗೆ ಸಂಬಂಧಿಸಿದ ಜನರೊಂದಿಗೆ 'ಫ್ರೆಂಡ್‌ಶಿಪ್ ಡೇ' ಆಚರಿಸಿದ್ದಾರೆ.

  • Going to deliver some food and friendship bands to our delivery partners, restaurant partners and customers. Best Sunday ever!! pic.twitter.com/WzRgsxKeMX

    — Deepinder Goyal (@deepigoyal) August 6, 2023 " class="align-text-top noRightClick twitterSection" data=" ">

ಇದು ಬೆಸ್ಟ್​ ಫ್ರೆಂಡ್​ಶಿಪ್​ ಡೇ: ಫುಡ್​ ಡೆಲಿವರಿ ಬಾಯ್​ ವೇಷದಲ್ಲಿ ಬೈಕ್​ ಮೇಲೆ ತಾವಿರುವ ಚಿತ್ರಗಳನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿರುವ ದೀಪಿಂದರ್ ಗೋಯಲ್, "ಕೆಲ ಗ್ರಾಹಕರು, ರೆಸ್ಟೋರೆಂಟ್​ ಪಾಲುದಾರರು, ಡೆಲಿವರಿ ಬಾಯ್ಸ್​ಗೆ ಬ್ಯಾಂಡ್​ ಕಟ್ಟಲು ತೆರಳುತ್ತಿದ್ದೇನೆ. ಇದು ವಿಶೇಷ ಭಾನುವಾರ" ಎಂದು ಒಕ್ಕಣೆ ನೀಡಿದ್ದಾರೆ. ಇದಕ್ಕೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದು ಎಂದಿಗೂ "ಬೆಸ್ಟ್ ಫ್ರೆಂಡ್ ಶಿಪ್ ಡೇ ಸೆಲೆಬ್ರೇಷನ್" ಎಂದು ನೆಟ್ಟಿಗರೊಬ್ಬರು ಹರ್ಷ ವ್ಯಕ್ತಪಡಿಸಿದ್ದಾರೆ.

ಜೊಮ್ಯಾಟೊ ಷೇರು ಬೆಲೆ ಏರಿಕೆ: ಷೇರು ಮಾರುಕಟ್ಟೆ ವಹಿವಾಟಿನಲ್ಲಿ ಜೊಮ್ಯಾಟೊ ಲಿಮಿಟೆಡ್ ಕಂಪನಿಯ ಶೇರುಗಳು ಶೇಕಡಾ 14ರಷ್ಟು ಏರಿಕೆ ದಾಖಲಿಸಿವೆ. 2023-24ನೇ ಸಾಲಿನ ಏಪ್ರಿಲ್​ನಿಂದ ಜೂನ್ ತ್ರೈಮಾಸಿಕದಲ್ಲಿ ಇದೇ ಮೊದಲ ಬಾರಿಗೆ 2 ಕೋಟಿ ರೂಪಾಯಿ ತೆರಿಗೆಯ ನಂತರದ ಏಕೀಕೃತ ಲಾಭವಾಗಿದೆ ಎಂದು ಕಂಪನಿ ಘೋಷಿಸಿತ್ತು. ಇದರ ಬೆನ್ನಲ್ಲೇ ಷೇರು ಬೆಲೆಗಳಲ್ಲಿ ದೊಡ್ಡ ಮಟ್ಟದ ಏರಿಕೆ ಕಂಡು ಬಂದಿತ್ತು. ಬಿಎಸ್‌ಇಯಲ್ಲಿ ಜೊಮ್ಯಾಟೊ ಷೇರು ಮೌಲ್ಯ ಶೇ 14.11ರಷ್ಟು ಏರಿಕೆಯಾಗಿ 52 ವಾರಗಳ ಗರಿಷ್ಠ 98.39 ರೂ.ಗೆ ತಲುಪಿತ್ತು.

ಸ್ನೇಹಿತರ ದಿನದ ಬಗ್ಗೆ ಒಂದಿಷ್ಟು..: ಪ್ರತಿ ವರ್ಷ ಆಗಸ್ಟ್ 6ರಂದು ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ. ವಿಶ್ವಾದ್ಯಂತ ಜನರು ಜಾತಿ, ಧರ್ಮ ಅಥವಾ ಧರ್ಮವನ್ನು ಲೆಕ್ಕಿಸದೆ ಸ್ನೇಹಿತರನ್ನು ಮಾಡಿಕೊಳ್ಳಲು ಯಾವುದೇ ಅಡ್ಡಿಯಿಲ್ಲ ಎಂಬುದನ್ನು ಈ ದಿನ ಸಾರಿ ಹೇಳುತ್ತದೆ.

ನಮಗೆ ಶಾಲಾ ದಿನಗಳಲ್ಲಿ ಸ್ನೇಹ ಎಂದಿಗೂ ಗಾಢ. ನಮ್ಮ ಸಹಪಾಠಿಗಳು ಉತ್ತಮ ಸ್ನೇಹಿತರಾಗಿರುವುದರಿಂದ ಅವರೊಂದಿಗೆ ನಮ್ಮ ಬಾಂಧವ್ಯ ಬಿಡಿಸಲಾಗದ ನಂಟಾಗಿರುತ್ತದೆ. ಹಿರಿಯರಾದ ಮೇಲೂ ಶಾಲೆಯ ಆ ಗೆಳೆಯನೇ ನಮಗೆ ಇಂದಿಗೂ ಕುಚಿಕು ಫ್ರೆಂಡ್​​ ಆಗಿರುತ್ತಾನೆ. ಅವನೊಂದಿಗೆ ಕಳೆದ ದಿನಗಳು ನಮ್ಮ ಜೀವನದ ಅತ್ಯುತ್ತಮ ಸಮಯ ಎಂಬ ಭಾವವಿರುತ್ತದೆ.

ಇದನ್ನೂ ಓದಿ: Zomato ಆದಾಯ 2,416 ಕೋಟಿ; ಲಾಭ 2 ಕೋಟಿ ರೂ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.