ETV Bharat / bharat

ಭರದಿಂದ ಸಾಗಿದ ಲಡಾಖ್‌ಗೆ ಸಂಪರ್ಕ ಕಲ್ಪಿಸುವ ಸುರಂಗ ಕಾಮಗಾರಿ

2026 ರ ಕೊನೆಯ ತ್ರೈಮಾಸಿಕದಲ್ಲಿ ಸಾರ್ವಜನಿಕರ ಪ್ರಯಾಣಕ್ಕೆ ಜೊಜಿಲಾ ಸುರಂಗವನ್ನು ತೆರೆಯಲಾಗುವುದು ಎಂದು ಮೇಘಾ ಕಂಪನಿಯ ಪ್ರಾಜೆಕ್ಟ್ ಮುಖ್ಯಸ್ಥ ಹರ್ಪಾಲ್ ಸಿಂಗ್ ಅವರು ತಿಳಿಸಿದರು.

ಜೊಜಿಲಾ ಸುರಂಗ
ಜೊಜಿಲಾ ಸುರಂಗ
author img

By

Published : Sep 26, 2022, 6:25 PM IST

ಸೋನಾಮಾರ್ಗ್ (ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದಿಂದ ಲಡಾಖ್‌ಗೆ ಸಂಪರ್ಕ ಕಲ್ಪಿಸುವ 13 ಕಿ. ಮೀ ಉದ್ದದ ಜೊಜಿಲಾ ಸುರಂಗದ ಕಾಮಗಾರಿಯು ಪ್ರಸ್ತುತ ಭರದಿಂದ ಸಾಗುತ್ತಿದ್ದು, 2026ರ ಕೊನೆಯ ತ್ರೈಮಾಸಿಕದಲ್ಲಿ ಸಾರ್ವಜನಿಕರಿಗೆ ಮುಕ್ತವಾಗಲಿದೆ.

ಜೊಜಿಲಾ ಸುರಂಗ ಮಾರ್ಗದ ಕಾಮಗಾರಿ ಬಗ್ಗೆ ಹರ್ಪಾಲ್ ಸಿಂಗ್ ಅವರು ಮಾತನಾಡಿದರು

ಮೇಘಾ ಕಂಪನಿಯ ಪ್ರಾಜೆಕ್ಟ್ ಮುಖ್ಯಸ್ಥ ಹರ್ಪಾಲ್ ಸಿಂಗ್ ಅವರು ಮಾತನಾಡಿ, '2026 ರ ಕೊನೆಯ ತ್ರೈಮಾಸಿಕದಲ್ಲಿ ಸಾರ್ವಜನಿಕರ ಪ್ರಯಾಣಕ್ಕೆ ಸುರಂಗವನ್ನು ತೆರೆಯಲಾಗುವುದು. ಆದರೆ, ವಿಭಾಗವನ್ನು ಸ್ಥಳೀಯ ಜನಸಂಖ್ಯೆ ಮತ್ತು ರಕ್ಷಣೆಗಾಗಿ ಮೊದಲೇ ತೆರೆಯಬಹುದು ಎಂದರು.

'2005ರಲ್ಲಿ ಸುರಂಗ ಮಾರ್ಗ ಘೋಷಣೆಯಾಗಿದ್ದರೂ ಯೋಜನೆ ವಿಳಂಬವಾಗಿತ್ತು. ಕೆಲಸ ಪಡೆದ ಕಂಪನಿ ದಿವಾಳಿಯಾಗಿ ಸುಮಾರು ಎರಡು ವರ್ಷಗಳ ಕಾಲ ಕಾಮಗಾರಿ ಸ್ಥಗಿತಗೊಂಡಿತ್ತು. ನಂತರ ಕೇಂದ್ರ ಸರ್ಕಾರ ಯೋಜನೆಯಲ್ಲಿ ಕೆಲ ಬದಲಾವಣೆ ಮಾಡಿ 2020ರಲ್ಲಿ ಯೋಜನೆಯನ್ನು ಪುನರಾರಂಭಿಸಿತು. ಮತ್ತು ಅದನ್ನು 2021 ರಲ್ಲಿ MIL ಗೆ ಟೆಂಡರ್ ಮಾಡಿದೆ' ಎಂದು ಅವರು ಹೇಳಿದರು.

ಋಣಾತ್ಮಕ ತಾಪಮಾನ: ಸುರಂಗದ ಕೆಲಸದ ಸಮಯದಲ್ಲಿ ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಮಾತನಾಡಿದ ಅವರು, ಕಾಶ್ಮೀರವು ತುಂಬಾ ಶೀತ, ಚಳಿಗಾಲ, ಋಣಾತ್ಮಕ ತಾಪಮಾನವನ್ನು ಹೊಂದಿದೆ. ಆದರೂ 1,000 ಜನರು ಈ ಯೋಜನೆಯಲ್ಲಿ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಸುಮಾರು 2,300 ಜನರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಹೆಚ್ಚಿನವರು ಅವರಲ್ಲಿ ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳು ಎಂದರು.

ನಾಲ್ಕು ಸುರಂಗಗಳು ಪೂರ್ಣ: ಇಲ್ಲಿಯವರೆಗೆ ಪೂರ್ಣಗೊಂಡಿರುವ ಕಾಮಗಾರಿಯ ಕುರಿತು ಮಾತನಾಡಿದ ಸಿಂಗ್, "ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಯೋಜನೆಯು ಒಟ್ಟು ಮೂರು ಸುರಂಗಗಳನ್ನು ಹೊಂದಿದೆ. ನೀಲಗರರ್ -1 ಮತ್ತು ನೀಲಗರರ್ -2 ನಲ್ಲಿ ತಲಾ ಎರಡು ಸುರಂಗಗಳು. ನಾಲ್ಕು ಸುರಂಗಗಳು ಈಗಾಗಲೇ ಪೂರ್ಣಗೊಂಡಿವೆ.

ಝೋಜಿಲಾ ಸುರಂಗ ಮಾರ್ಗ ನಿರ್ಮಾಣ: ಹೊರತಾಗಿ ಇಲ್ಲಿ ನಾಲ್ಕು ಪೂಲ್‌ಗಳಿವೆ. ಎಲ್ಲವುಗಳ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಮುಂದೆ 13 ಕಿ ಮೀ ಉದ್ದದ ಝೋಜಿಲಾ ಸುರಂಗ ಮಾರ್ಗ ನಿರ್ಮಾಣವಾಗಲಿದೆ. ಇದನ್ನೂ ಉತ್ತಮವಾಗಿ ಮಾಡಲಾಗಿದೆ. ನೀಲಗರರ್-1 ಮತ್ತು ನೀಲಗರಾರ್-2ರ ರಸ್ತೆ ಮತ್ತು ಸುರಂಗಗಳ ಪ್ಲ್ಯಾಸ್ಟರಿಂಗ್ ಇನ್ನೂ ಉಳಿದಿದೆ. ಅದನ್ನು ಪೂರ್ಣಗೊಳಿಸಲಾಗುವುದು ಎಂದು ಸುರಂಗ ನಿರ್ಮಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಓದಿ: ಭೂಮಿಗೆ ಅಪಾಯ ತಪ್ಪಿಸಲು ಕ್ಷುದ್ರಗ್ರಹಕ್ಕೆ ಅಪ್ಪಳಿಸಲಿದೆ ನಾಸಾ ನೌಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.