ETV Bharat / bharat

ನಿಗೂಢ ಸಾವು ಪ್ರಕರಣ: ಅಧಿವೇಶನದಲ್ಲಿ ವೈಎಸ್‌ಆರ್‌ಸಿಪಿ - ಟಿಡಿಪಿ ಮಧ್ಯೆ ಭಾರಿ ಗಲಾಟೆ - ಜಂಗಾರೆಡ್ಡಿಗೂಡೆಮ್​ ಸಾವು ಪ್ರಕರಣ

ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಜಂಗಾರೆಡ್ಡಿಗುಡೆಮ್‌ನ ಸಾವುಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿವೇಶನದಲ್ಲಿ ವೈಎಸ್‌ಆರ್‌ಸಿಪಿ-ಟಿಡಿಪಿ ಮಧ್ಯೆ ಭಾರಿ ಗದ್ದಲ ನಡೆದಿದೆ.

YSRC and TDP in slugfest over deaths in Jangareddygudem, Andhra Pradesh session 2022, Jangareddygudem death case, Jangareddygudem news, ಜಂಗಾರೆಡ್ಡಿಗೂಡೆಮ್​ನಲ್ಲಿ ನಿಗೂಢ ಸಾವು ಪ್ರಕರಣ, ಜಂಗಾರೆಡ್ಡಿಗೂಡೆಮ್​ನಲ್ಲಿ ನಿಗೂಢ ಸಾವು ಸಂಬಂಧ ವೈಎಸ್​ಆರ್​ಸಿ ಮತ್ತು ಟಿಡಿಪಿ ನಡುವೆ ಗದ್ದಲ, ಆಂಧ್ರಪ್ರದೇಶ ಅಧಿವೇಶನ 2022, ಜಂಗಾರೆಡ್ಡಿಗೂಡೆಮ್​ ಸಾವು ಪ್ರಕರಣ, ಜಂಗಾರೆಡ್ಡಿಗೂಡೆಮ್​ ಸುದ್ದಿ,
ಅಧಿವೇಶನದಲ್ಲಿ ವೈಎಸ್‌ಆರ್‌ಸಿಪಿ-ಟಿಡಿಪಿ ಮಧ್ಯೆ ಭಾರೀ ಗಲಾಟೆ
author img

By

Published : Mar 15, 2022, 9:14 AM IST

Updated : Mar 15, 2022, 9:48 AM IST

ಅಮರಾವತಿ: ಕಳೆದ ಕೆಲವು ದಿನಗಳಿಂದ ಜಂಗಾರೆಡ್ಡಿಗುಡೆಮ್‌ನಲ್ಲಿ ಸುಮಾರು 18 ಮಂದಿ ಸಾವನ್ನಪ್ಪಿದ್ದಾರೆ. ಈ ಪ್ರಕರಣ ಅಧಿವೇಶನದಲ್ಲಿ ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಮತ್ತು ಪ್ರಮುಖ ಪ್ರತಿಪಕ್ಷ ತೆಲುಗು ದೇಶಂ ಪಕ್ಷದ ನಡುವೆ ಕೆಸರೆರಚಾಟಕ್ಕೆ ಕಾರಣವಾಯಿತು. ನಕಲಿ ಮದ್ಯ ಸೇವನೆಯಿಂದ ಸಾವು ಸಂಭವಿಸಿದೆ ಎಂದು ವಿರೋಧ ಪಕ್ಷ ಆರೋಪಿಸಿದರೆ, ಸರ್ಕಾರವು ಈ ಹೇಳಿಕೆಯನ್ನು ತಳ್ಳಿಹಾಕಿತು ಮತ್ತು ಸಹಜ ಸಾವುಗಳನ್ನು ಟಿಡಿಪಿ ವಿರೂಪಗೊಳಿಸುತ್ತಿದೆ ಎಂದು ಹೇಳಿತು.

ನಿಗೂಢ ಸಾವಿನ ಕುರಿತು ಸೋಮವಾರ ವಿಧಾನಸಭೆ ಅಧಿವೇಶನದಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಜಂಗಾರೆಡ್ಡಿಗುಡೆಮ್‌ನಲ್ಲಿ ನಡೆದ ಸಾವುಗಳು ಸಹಜ ಎಂದು ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ ಹೇಳಿದರು. ಈ ವೇಳೆ, ಸದನದಲ್ಲಿ ತೀವ್ರ ಗಲಾಟೆ ಉಂಟಾಗಿದ್ದು, ಐವರು ಟಿಡಿಪಿ ಸದಸ್ಯರನ್ನು ವಿಧಾನಸಭೆಯಿಂದ ಅಮಾನತುಗೊಳಿಸಲಾಯಿತು.

ಓದಿ: ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ 7 ಸಾವಿರಕ್ಕೂ ಹೆಚ್ಚು ಜನ ಟಕೆಟ್​ ರಹಿತ ಪ್ರಯಾಣ..!

ಟಿಡಿಪಿ ಮಾತನಾಡುತ್ತಿರುವ 18 ಸಾವುಗಳು ಒಂದೇ ಸ್ಥಳದಲ್ಲಿ ಸಂಭವಿಸಿಲ್ಲ. ಸುಮಾರು 54,880 ಜನಸಂಖ್ಯೆ ಹೊಂದಿರುವ ಜಂಗಾರೆಡ್ಡಿಗುಡೆಮ್​ ಪುರಸಭೆಯ ವಿವಿಧ ಸ್ಥಳಗಳಲ್ಲಿ ಈ ಸಾವುಗಳು ಸಂಭವಿಸಿವೆ. ಎರಡು ಪ್ರತಿಶತದಷ್ಟು ಸಾವಿನ ಪ್ರಮಾಣವನ್ನು ಊಹಿಸಿದರೆ ವಿವಿಧ ಕಾರಣಗಳಿಗಾಗಿ ಪ್ರತಿ ತಿಂಗಳು ಇಲ್ಲಿ 60 ಜನರು ಸಾಯುತ್ತಾರೆ ಎಂದು ನಾವು ನೆನಪಿಸಿಕೊಳ್ಳಬೇಕು ಎಂದು ಸಿಎಂ ಇದೇ ವೇಳೆ ಗಮನಕ್ಕೆ ತಂದರು.

ಸ್ವಾಭಾವಿಕ ಸಾವುಗಳನ್ನು ಅಕ್ರಮ ಮದ್ಯದಿಂದ ಉಂಟಾದ ಸಾವು ಎಂದು ಟಿಡಿಪಿ ಬಿಂಬಿಸುವುದು ಸರಿಯಲ್ಲ. ರಾಜ್ಯದಲ್ಲಿ ಇನ್ನೂ ನಕಲಿ ಮದ್ಯ ತಯಾರಿಕೆ ನಡೆಯುತ್ತಿದೆ. ಆದರೆ ಹಿಂದಿನ ಟಿಡಿಪಿ ಆಡಳಿತದಲ್ಲಿಯೂ ಅಕ್ರಮ ಮದ್ಯ ತಯಾರಿಕೆ ನಡೆಯುತ್ತಿತ್ತು ಎಂದು ಜಗನ್​ ಟಿಡಿಪಿ ಆರೋಪವನ್ನು ತಳ್ಳಿ ಹಾಕಿದರು .

ಅಕ್ರಮ ಮದ್ಯವನ್ನು ತಯಾರಿಸುವವರನ್ನು ನಾವು ರಕ್ಷಿಸುವ ಅಗತ್ಯವಿಲ್ಲ. ಅಂತಹ ವ್ಯವಹಾರವನ್ನು ಹತ್ತಿಕ್ಕಲು ನಾವು ವಿಶೇಷ ಬ್ಯೂರೋವನ್ನು ಸ್ಥಾಪಿಸಿದ್ದೇವೆ. ಅಕ್ರಮ ಮದ್ಯದ ಮೇಲೆ ಎಸ್‌ಇಬಿ ಇದುವರೆಗೆ 13,000 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಸಿಎಂ ಜಗನ್​ ಅಂಕಿ- ಅಂಶಗಳ ಸಮೇತ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು

ಓದಿ: 362 ಗೆಜೆಟೆಡ್ ಅಧಿಕಾರಿಗಳ ನೇಮಕ ಸಿಂಧುಗೊಳಿಸುವ ಕಾಯ್ದೆ ಜಾರಿ ಮಾಡಿ ಅಧಿಸೂಚನೆ

ಪಶ್ಚಿಮ ಗೋದಾವರಿ ಜಿಲ್ಲೆಯವರಾದ ಉಪಮುಖ್ಯಮಂತ್ರಿ (ಆರೋಗ್ಯ) ಎ.ಕೆ.ಕೆ ಶ್ರೀನಿವಾಸ್ ಸತ್ತವರಲ್ಲಿ ಕೆಲವರು ಕುಡುಕರು ಎಂದು ಹೇಳಿದ್ದಾರೆ. ಒಬ್ಬ ವ್ಯಕ್ತಿ ಒಂದು ವಾರದವರೆಗೆ ಏನನ್ನೂ ತಿನ್ನದೇ ಮದ್ಯ ಸೇವಿಸಿ ಸಾವನ್ನಪ್ಪಿದ್ದಾನೆ. ಇದನ್ನು ಅವರ ಕುಟುಂಬದ ಸದಸ್ಯರೇ ಬಹಿರಂಗಪಡಿಸಿದ್ದಾರೆ. ಆದರೆ, ಇದನ್ನೂ ರಾಜಕೀಯ ಮಾಡುತ್ತಿದ್ದಾರೆ ಎಂದು ಶ್ರೀನಿವಾಸ್ ಇದೇ ವೇಳೆ ಟಿಡಿಪಿ ವಿರುದ್ಧ ಹರಿಹಾಯ್ದರು.

ಇನ್ನು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಜಂಗಾರೆಡ್ಡಿಗುಡೆಮ್​ಗೆ ಭೇಟಿ ನೀಡಿ ಸಂತ್ರಸ್ತರ ಕುಟುಂಬಗಳೊಂದಿಗೆ ಮಾತನಾಡಿದರು. ಮೃತರ ಕುಟುಂಬಕ್ಕೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ ಅವರು, ರಾಜ್ಯ ಸರ್ಕಾರ ಪ್ರತಿ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ನೀಡಬೇಕು ಎಂದು ಒತ್ತಾಯಿಸಿದರು.

Last Updated : Mar 15, 2022, 9:48 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.