ಜೈಸಲ್ಮೇರ್ (ರಾಜಸ್ಥಾನ): ಜಿಲ್ಲೆಯ ಪೋಕರನ್ ಗ್ರಾಮದಲ್ಲಿ ವ್ಯಕ್ತಿಯೊಬ್ಬನಿಗೆ ಹಿಗ್ಗಾಮುಗ್ಗಾ ಥಳಿಸಿ ಕೂದಲು ಕಟ್ ಮಾಡಿದ್ದಲ್ಲದೇ ವಿವಸ್ತ್ರಗೊಳಸಿದ್ದಾರೆ. ಅಷ್ಟೇ ಅಲ್ಲ ಗ್ರಾಮದ ಯುವಕರು ಆತನ ಕಾರನ್ನು ಸಹ ಧ್ವಂಸಗೊಳಿಸಿರುವುದು ಕಂಡು ಬಂದಿದೆ. ಪ್ರೇಮ ವಿಚಾರಕ್ಕೆ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ಸದರ್ ಪೊಲೀಸ್ ಠಾಣಾಧಿಕಾರಿ ದೇವಕಿಶನ್ ಪ್ರಕಾರ, ವಿವಾಹೇತರ ಸಂಬಂಧದ ವಿಷಯ ಹೇಳಲಾಗುತ್ತಿದೆ. ಸಂತ್ರಸ್ತೆ ಪ್ಯಾರಾ ಟೀಚರ್ ಆಗಿದ್ದು, ಇವರಿಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಈತ ಚಂದನ್ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ. ಅದೇ ಗ್ರಾಮದ ಮಹಿಳೆಯ ಮನೆಗೆ ಶಿಕ್ಷಕ ಆಗಾಗ ಭೇಟಿ ನೀಡುತ್ತಿದ್ದ. ಕಳೆದ ಹಲವು ದಿನಗಳಿಂದ ಆ ಗ್ರಾಮದ ಯುವಕರು ಶಿಕ್ಷಕರನ್ನು ಗಮನಿಸುತ್ತಿದ್ದರು. ಇತ್ತೀಚೆಗೆ ಶಿಕ್ಷಕ ಮಹಿಳೆಯನ್ನು ಭೇಟಿಯಾಗಿ ಹಿಂತಿರುಗುತ್ತಿದ್ದಾಗ ಸುಮಾರು 15 ಯುವಕರು ಶಿಕ್ಷಕರನ್ನ ಸುತ್ತುವರೆದಿದ್ದರು.
ಓದಿ: ನಡುರಸ್ತೆಯಲ್ಲೇ ಸಾರ್ವಜನಿಕರ ಮೇಲೆ ಹಲ್ಲೆಗೆ ಮುಂದಾದ ಗ್ರಾ.ಪಂ ಅಧ್ಯಕ್ಷೆ!
ಯುವಕರು ಸಂತ್ರಸ್ತ ಶಿಕ್ಷಕನ ಮೇಲೆ ಹಲ್ಲೆ ನಡೆಸಿ ವಿವಸ್ತ್ರಗೊಳಿಸಿದ್ದಾರೆ. ಬಳಿಕ ಸಂತ್ರಸ್ತನ ಕೂದಲನ್ನು ಕತ್ತರಿಸಿದ್ದಾರೆ. ನನ್ನನ್ನು ಬಿಟ್ಟು ಬಿಡಿ ಎಂದು ಸಂತ್ರಸ್ತ ಶಿಕ್ಷಕ ಅಂಗಲಾಚಿ ಬೇಡಿಕೊಂಡ್ರು ಆರೋಪಿಗಳು ನಿರಂತರವಾಗಿ ಹಲ್ಲೆ ಮಾಡುತ್ತಿದ್ದರು. ಬಳಿಕ ಸಂತ್ರಸ್ತನ ಕಾರನ್ನು ಸಹ ಭಾರಿ ಪ್ರಮಾಣದಲ್ಲಿ ಧ್ವಂಸಗೊಳಿಸಿದರು.
ಈ ಘಟನೆ ಕುರಿತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಯುವಕರು ಹರಿಯಬಿಟ್ಟಿದ್ದಾರೆ. ವಿಡಿಯೋ ವೈರಲ್ ಆದ ನಂತರ ಪೊಲೀಸರು ಕ್ರಮಕೈಗೊಂಡಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿ ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.