ETV Bharat / bharat

ಯುವತಿಯ ನಗ್ನ ವಿಡಿಯೋಗಳನ್ನು ತೋರಿಸಿ ಕಿರುಕುಳ ನೀಡಿದ ಆರೋಪ: ಆಪ್ತ ಸ್ನೇಹಿತನನ್ನೇ ಕೊಲೆ ಮಾಡಿದ ಪ್ರೇಮಿ - ಗೆಳತಿಯ ನಗ್ನ ವಿಡಿಯೋ

ಯುವತಿಯ ನಗ್ನ ವಿಡಿಯೋಗಳನ್ನು ಇಟ್ಟುಕೊಂಡು ಬ್ಲಾಕ್​ಮೇಲ್​ ಮಾಡುತ್ತಿದ್ದ ಯುವಕನನ್ನು ಆಕೆಯ ಲವರ್​ ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ಮಂಡಲ್​ನ ಬಾಲಜಿನಗರದಲ್ಲಿ ನಡೆದಿದೆ.

murder
ಕೊಲೆ
author img

By

Published : Feb 24, 2023, 1:27 PM IST

ಕರ್ನೂಲ್ (ಆಂಧ್ರಪ್ರದೇಶ): ತನ್ನ ಗೆಳತಿಯ ನಗ್ನ ವಿಡಿಯೋಗಳನ್ನು ಯುವಕನೊಬ್ಬ ಸೆಲ್ ಫೋನ್‌ನಲ್ಲಿ ಸಂಗ್ರಹಿಸಿಕೊಂಡಿದ್ದನು. ಈ ವಿಡಿಯೋಗಳನ್ನು ಆತನ ಸ್ನೇಹಿತ ಸಹ ತನ್ನ ಫೋನ್​ಗೆ ಡೌನ್​ಲೋಡ್​ ಮಾಡಿಕೊಂಡು ಯುವತಿಗೆ ಬೆದರಿಕೆ ಹಾಕಿದ್ದು, ಕಿರುಕುಳದಿಂದ ಮನನೊಂದ ಯುವತಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ಮಂಡಲ್​ನ ಬಾಲಜಿನಗರದಲ್ಲಿ ನಡೆದಿದೆ.

ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಕರ್ನೂಲ್ ಮಂಡಲ್​ನ ಬಾಲಜಿನಗರದ ನಿವಾಸಿ ಎರುಕಾಲಿ ದಿನೇಶ್ ಪದವಿ ವ್ಯಾಸಂಗ ಮಾಡುತ್ತಿದ್ದು, ಈತ ಫ್ಲವರ್​ ಡೆಕೊರೇಟರ್​ ಮಲ್ಲೆಪೋಗು ಮುರಳಿಕೃಷ್ಣ (22) ಎಂಬ ಆಪ್ತ ಸ್ನೇಹಿತನನ್ನು ಹೊಂದಿದ್ದರು. ದಿನೇಶ್ ತನ್ನ ಫೋನ್​ನಲ್ಲಿ ಪ್ರೀತಿಸಿದ ಹುಡುಗಿಯ ನಗ್ನ ವಿಡಿಯೋಗಳನ್ನು ಇಟ್ಟುಕೊಂಡಿದ್ದನು. ಈ ವಿಡಿಯೋಗಳನ್ನು ಮುರಳಿಕೃಷ್ಣ ಸಹ ನೋಡಿ, ತನ್ನ ಫೋನ್‌ಗೆ ಡೌನ್‌ಲೋಡ್ ಮಾಡಿಕೊಂಡಿದ್ದಾನೆ.

ನಂತರ, ದಿನೇಶ್​ ಪ್ರೀತಿಸುತ್ತಿದ್ದ ಹುಡುಗಿಯನ್ನು ಕರೆದು ಆಕೆಯ ನಗ್ನ ವಿಡಿಯೋಗಳನ್ನು ತೋರಿಸಿ ಕಿರುಕುಳ ನೀಡಲು ಪ್ರಾರಂಭಿಸಿದ್ದಾನೆ. ಅಷ್ಟೇ ಅಲ್ಲದೆ, ವಿಡಿಯೋಗಳನ್ನು ಆಕೆಯ ಕುಟುಂಬ ಸದಸ್ಯರು ಮತ್ತು ಸಂಬಂಧಿಕರಿಗೆ ಕಳುಹಿಸುವಂತೆ ಬೆದರಿಕೆ ಹಾಕಿದ್ದಾನೆ. ಈತನ ಕಿರುಕುಳ ಸಹಿಸಲು ಸಾಧ್ಯವಾಗದ ಯುವತಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದು, ಆಸ್ಪತ್ರೆಗೆ ದಾಖಲಾಗಿದ್ದಳು.

ಇದನ್ನೂ ಓದಿ: ಪ್ರತ್ಯೇಕ ಪ್ರಕರಣ: ಹಣಕ್ಕಾಗಿ ತಂದೆ ಕೊಲೆ ಮಾಡಿದ ಮಗ.. ಹೊಲಕ್ಕೆ ತಂದೆ ಭೇಟಿಗೆ ಹೋದ ಪುತ್ರ ಕಾಲುವೆಯಲ್ಲಿ ಬಿದ್ದು ಸಾವು

ತನ್ನ ಪ್ರಿಯತಮೆಯ ದುಃಖವನ್ನು ನೋಡಿದ ದಿನೇಶ್, ಮುರಳಿಕೃಷ್ಣನನ್ನು ದ್ವೇಷಿಸಲು ಪ್ರಾರಂಭಿಸಿದ್ದು, ಆತನನ್ನು ಕೊಲ್ಲಲು ಪ್ಲಾನ್​ ಮಾಡಿದ್ದ. ಇದಕ್ಕೆ ಕಿರಣ್ ಕುಮಾರ್ ಎಂಬ ಇನ್ನೊಬ್ಬ ಸ್ನೇಹಿತನ ಸಹಾಯ ಪಡೆದುಕೊಂಡಿದ್ದ. ಜನವರಿ 25 ರಂದು ದಿನೇಶ್ ಮತ್ತು ಕಿರಣ್ ಕುಮಾರ್ ಶಿವಮಾಲೆ ಧರಿಸಿದ್ದ ಮುರುಳಿಕೃಷ್ಣನನ್ನು ನಗರದ ಹೊರವಲಯದಲ್ಲಿರುವ ಪಂಚಲಿಂಗಲಾ ಪ್ರದೇಶಕ್ಕೆ ಬೈಕ್‌ನಲ್ಲಿ ಕರೆದೊಯ್ದ, ಚೂರಿ ಇರಿದು ಕೊಲೆ ಮಾಡಿದ್ದರು. ನಂತರ ಶವವನ್ನು ನಾನುರು ಟೋಲ್ ಪ್ಲಾಜಾ ಬಳಿಯ ಹೆಚ್‌ಎನ್‌ಎಸ್ಎಸ್ ಕಾಲುವೆಗೆ ಎಸೆದಿದ್ದಾರೆ.

ಇದನ್ನೂ ಓದಿ: ಹಾಸನ​​: ಐಫೋನ್​ಗಾಗಿ ಕೊರಿಯರ್​ ಬಾಯ್​ ಕೊಲೆ, 3 ದಿನ ಮನೆಯ ಬಾತ್​ರೂಮ್​ನಲ್ಲಿ ಶವ ಇಟ್ಟಿದ್ದ ಆರೋಪಿ

ಮೃತ ಮರಳಿಯ ಮೊಬೈಲ್ ಫೋನ್ ಮತ್ತು ಬಟ್ಟೆಗಳನ್ನು ಬೇರೆ ಬೇರೆ ಸ್ಥಳಗಳಲ್ಲಿ ಬಿಟ್ಟು ಊರಿಗೆ ಬಂದಿದ್ದಾರೆ. ಇತ್ತ ತಮ್ಮ ಮಗ ನಾಪತ್ತೆಯಾಗಿರುವ ಕುರಿತು ಮುರಳಿಕೃಷ್ಣನ ಪೋಷಕರು ಇದೇ ತಿಂಗಳ 16 ರಂದು ಕರ್ನೂಲ್ ತಾಲೂಕು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ದಿನೇಶ್ ವಿಚಾರಿಸಿದಾಗ ಸತ್ಯ ಬಯಲಾಗಿದೆ.

ಇದನ್ನೂ ಓದಿ: ಮದ್ಯ ಸೇವೆನೆಗೆ ಹಣ ನೀಡುವಂತೆ ಪೀಡಿಸಿದ್ದಕ್ಕೆ ಕೊಲೆ - ಆರೋಪಿ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.