ಸರನ್(ಬಿಹಾರ): ರಕ್ಷಾ ಬಂಧನದ ದಿನವೇ ಯುವಕನೊಬ್ಬ ಹಾವುಗಳಿಗೆ ರಾಖಿ ಕಟ್ಟುವ ಹುಚ್ಚಾಟಕ್ಕೆ ಮುಂದಾಗಿ ಪ್ರಾಣ ಕಳೆದುಕೊಂಡಿರುವ ಘಟನೆ ಬಿಹಾರದ ಸರನ್ದಲ್ಲಿ ನಡೆದಿದೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
25 ವರ್ಷದ ಮನಮೋಹನ್ ಕಳೆದ 10 ವರ್ಷಗಳಿಂದ ಹಾವು ಹಿಡಿಯುವುದು ಹಾಗೂ ಹಾವು ಕಚ್ಚಿದವರಿಗೆ ಔಷಧ ನೀಡುವ ಕೆಲಸ ಮಾಡುತ್ತಿದ್ದನು. ವಿಷಪೂರಿತ ಹಾವುಗಳಿಂದ ಕಚ್ಚಿಸಿಕೊಂಡಿರುವ ನೂರಾರು ಜನರಿಗೆ ಔಷಧ ನೀಡಿ, ಅವರ ಪಾಲಿನ ಪ್ರಾಣ ರಕ್ಷಕನಾಗಿದ್ದನು. ಆದರೆ, ಇದೀಗ ಹಾವಿನಿಂದ ಕಡಿತಕ್ಕೊಳಗಾಗಿ ಪ್ರಾಣ ಕಳೆದುಕೊಂಡಿದ್ದಾನೆ.
ಭಾನುವಾರ ಬೆಳಗ್ಗೆ ಈ ಘಟನೆ ನಡೆದಿದೆ. ಸರನ್ ಜಿಲ್ಲೆಯ ಸೀತಾಲಪುರ್ ಗ್ರಾಮದ ನಿವಾಸಿಯಾಗಿದ್ದ ಮನಮೋಹನ್ ಎರಡು ವಿಷಪೂರಿತ ಹಾವುಗಳಿಗೆ ರಾಖಿ ಕಟ್ಟುತ್ತಿದ್ದನು. ಈ ವೇಳೆ ಹಾವೊಂದು ದಿಢೀರ್ ಆಗಿ ಆತನ ಕಾಲಿಗೆ ಕಚ್ಚಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
-
बिहार के सारण में बहन से साप को राखी बंधवाना महंगा पड़ गया साप के डसने से भाई की चली गई जान pic.twitter.com/675xsgnZ6N
— Tushar Srivastava (@TusharSrilive) August 23, 2021 " class="align-text-top noRightClick twitterSection" data="
">बिहार के सारण में बहन से साप को राखी बंधवाना महंगा पड़ गया साप के डसने से भाई की चली गई जान pic.twitter.com/675xsgnZ6N
— Tushar Srivastava (@TusharSrilive) August 23, 2021बिहार के सारण में बहन से साप को राखी बंधवाना महंगा पड़ गया साप के डसने से भाई की चली गई जान pic.twitter.com/675xsgnZ6N
— Tushar Srivastava (@TusharSrilive) August 23, 2021
ಇದನ್ನೂ ಓದಿರಿ: LPG ಸಿಲಿಂಡರ್ ಬೆಲೆ ಮತ್ತಷ್ಟು ಏರಿಕೆ.. ಕೇಂದ್ರದ ವಿರುದ್ಧ ಪ್ರಿಯಾಂಕಾ ವಾಗ್ದಾಳಿ
ಕಳೆದ 10 ವರ್ಷಗಳಿಂದ ಸುತ್ತಮುತ್ತಲಿನ ಜನರು ಮನಮೋಹನ್ ಅವರನ್ನು ಹಾವುಗಳ ನಿಜವಾದ ಸ್ನೇಹಿತ ಎಂದು ಕರೆಯುತ್ತಿದ್ದರು. ಅನೇಕ ಸಲ ಹಾವು ಕಚ್ಚಿಸಿಕೊಂಡಿರುವವರಿಗೆ ಔಷಧ ನೀಡಿ, ಪ್ರಾಣಾಪಾಯದಿಂದ ಪಾರು ಮಾಡಿದ್ದನು. ಆದರೆ, ಇದೀಗ ಈತನೇ ಹಾವು ಕಡಿದು ಪ್ರಾಣ ಬಿಟ್ಟಿದ್ದಾನೆ. ಮನಮೋಹನ್ ಸಾವಿನ ಸುದ್ದಿ ಕೇಳಿ ಸುತ್ತಲಿನ ಗ್ರಾಮದ ಜನರು ಆಘಾತಕ್ಕೊಳಗಾಗಿದ್ದಾರೆ.