ETV Bharat / bharat

ಮದ್ಯ ನೀಡಲು ನಿರಾಕರಿಸಿದ್ದಕ್ಕೆ ವೈನ್​​ ಶಾಪ್‌ಗೆ ಬೆಂಕಿಯಿಟ್ಟ ಯುವಕರು!

ಮದ್ಯಪಾನ ಮಾಡಲು ತಡರಾತ್ರಿಯಾದರೂ ಮದ್ಯ ಸಿಗದ ಕಾರಣ ಆಕ್ರೋಶಗೊಂಡಿರುವ ಯುವಕರ ಗುಂಪೊಂದು ವೈನ್​​ ಶಾಪ್​ಗೆ ಬೆಂಕಿ ಹಚ್ಚಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

bulandshahr wine shop gutted in fire
bulandshahr wine shop gutted in fire
author img

By

Published : Apr 15, 2022, 10:13 PM IST

ಬುಲಂದ್‌ಶಹರ್​(ಉತ್ತರ ಪ್ರದೇಶ): ಮದ್ಯ ನೀಡಲು ಅಂಗಡಿ ಮಾಲೀಕ ನಿರಾಕರಿಸಿದ್ದರಿಂದ ಆಕ್ರೋಶಗೊಂಡಿರುವ ಯುವಕರ ಗುಂಪೊಂದು ವೈನ್ ಶಾಪ್​ಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಉತ್ತರ ಪ್ರದೇಶದ ಬುಲಂದ್​ಶಹರ್​​ದ ಅರ್ನಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ.

ಮದ್ಯ ಸಿಗದ ಕಾರಣ ಆಕ್ರೋಶಗೊಂಡಿರುವ ಯುವಕರು ಈ ರೀತಿಯಾಗಿ ನಡೆದುಕೊಂಡಿದ್ದಾರೆಂದು ಹೇಳಲಾಗ್ತಿದ್ದು, ಮದ್ಯದಂಗಡಿಗೆ ಬೆಂಕಿ ಹಚ್ಚಿರುವ ಕಾರಣ ಬೈಕ್ ಮತ್ತು ಕಾರು ಸಹ ಸುಟ್ಟು ಕರಕಲಾಗಿವೆ. ಅಂಬೇಡ್ಕರ್ ಜಯಂತಿ ಅಂಗವಾಗಿ ಜಿಲ್ಲಾಡಳಿತದ ಸೂಚನೆ ಮೇರೆಗೆ ಮದ್ಯದ ಅಂಗಡಿ ಮುಚ್ಚಲಾಗಿತ್ತು. ಹೀಗಾಗಿ ಬುಲಂದ್​ಶಹರ್​ನಲ್ಲಿ ತಡರಾತ್ರಿಯಾದ್ರೂ ಮದ್ಯ ಸಿಕ್ಕಿಲ್ಲ. ಈ ವೇಳೆ ವೈನ್ ಶಾಪ್​ಗೆ ಬಂದು ವಿಸ್ಕಿ ನೀಡುವಂತೆ ಕೇಳಿಕೊಂಡಿದ್ದಾರೆ.

ಇದನ್ನೂ ಓದಿ: ಒಂದಲ್ಲ, ಎರಡಲ್ಲ, ಮೂರು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

ಅಂಗಡಿ ಬಂದ್ ಆಗಿರುವ ಕಾರಣ ನೀಡಲು ಸಾಧ್ಯವಿಲ್ಲ ಎಂದು ಮಾಲೀಕ ಹೇಳಿದ್ದಾನೆ. ಇದರಿಂದ ಆಕ್ರೋಶಗೊಂಡು ಅಲ್ಲಿನ ಸೇಲ್ಸ್​​ ಮನ್​ಗಳನ್ನು ಥಳಿಸಿರುವ ಅವರು, ಅಂಗಡಿ ಮುಂದೆ ನಿಲ್ಲಿಸಿದ ವಾಹನ ಧ್ವಂಸಗೊಳಿಸಿದ್ದಾರೆ. ಇದರ ಬೆನ್ನಲ್ಲೇ ಅಂಗಡಿಗೆ ಬೆಂಕಿ ಹಚ್ಚಿದ್ದಾರೆ. ಅಂಗಡಿ ಮಾಲೀಕ ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ಎಫ್​ಐಆರ್ ದಾಖಲು ಮಾಡಿಕೊಂಡಿದ್ದು, ನಾಲ್ವರು ಆರೋಪಿಗಳ ಬಂಧನ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.