ಪಂಜಾಬ್ : ಸಂಗ್ರೂರ್‌ನ ಆಮ್ ಆದ್ಮಿ ಪಕ್ಷದ ಶಾಸಕಿ ನರಿಂದರ್ ಕೌರ್ ಭಾರಜ್ ಅವರು ಪಕ್ಷದ ಸ್ವಯಂಸೇವಕ ಮನ್‌ದೀಪ್ ಸಿಂಗ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪಟಿಯಾಲದ ರೋಡೆವಾಲ್ ಗ್ರಾಮದಲ್ಲಿ ಸರಳವಾಗಿ ಶಾಸಕಿ ವಿವಾಹವಾದರು. ಈ ಮದುವೆಯ ಸಮಾರಂಭಕ್ಕೆ ಸಿಎಂ ಭಾಗವಂತ್ ಮಾನ್ ಅವರ ಪತ್ನಿ ಡಾ.ಗುರುಪ್ರೀತ್ ಕೌರ್ ಸಾಕ್ಷಿಯಾದರು.
ನರಿಂದರ್ ಕೌರ್ ಭರಾಜ್ ಅವರು ಪಂಜಾಬ್‌ನ ಅತಿ ಕಿರಿಯ ಶಾಸಕಿಯಾಗಿದ್ದು, ಸಂಗ್ರೂರ್ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಗೆದ್ದಿದ್ದಾರೆ. ಇದೇ ಮಾರ್ಚ್ನಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ನ ವಿಜಯೀಂದ್ರ ಸಿಂಗ್ಲಾ ಅವರನ್ನು 36 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ನರಿಂದರ್ ಕೌರ್ ಸೋಲಿಸಿದ್ದರು.
ಅಲ್ಲದೇ, ಸಂಗ್ರೂರಿನಲ್ಲಿ ಬಾರಿಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಜಯ ಗಳಿಸಿದ್ದಾರೆ. ಕೇವಲ 27 ವರ್ಷದ ವಯಸ್ಸಿನ ಶಾಸಕಿ ನರಿಂದರ್ ಕೌರ್ ರೈತ ಕುಟುಂಬದಿಂದ ಬಂದಿದ್ದಾರೆ. ಪಂಜಾಬ್ ವಿಶ್ವವಿದ್ಯಾನಿಲಯದಿಂದ ಎಲ್‌ಎಲ್‌ಬಿ ಪದವಿ ಪಡೆದಿರುವ ಅವರು, ಜಿಲ್ಲಾ ಯುವ ಅಧ್ಯಕ್ಷರಾಗಿ ಎರಡು ಬಾರಿ ಸೇವೆ ಸಲ್ಲಿಸಿದ್ದಾರೆ.
2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸಾಕಷ್ಟು ಬೆಳಕಿಗೆ ಬಂದಿದ್ದ ಅವರು, ತಮ್ಮ ಗ್ರಾಮದಲ್ಲಿ ಏಕಾಂಗಿಯಾಗಿ ಆಮ್ ಆದ್ಮಿ ಪಕ್ಷದ ಬೂತ್ ಸ್ಥಾಪಿಸಿದ್ದರು. ನಂತರ ಭಗವಂತ್ ಮಾನ್ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದರು. ನರೀಂದರ್ ಕೌರ್ ಅವರ ಜೀವನ ಸಂಗಾತಿಯಾದ ಮನ್‌ದೀಪ್ ಸಿಂಗ್ ಕೂಡ ಸಾಮಾನ್ಯ ರೈತ ಕುಟುಂಬಕ್ಕೆ ಸೇರಿದ್ದಾರೆ. ಎಎಪಿಯ ಸ್ವಯಂಸೇವಕರಾಗಿ ಮನದೀಪ್ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ : ಭಾರತ್ ಜೋಡೋ ಯಾತ್ರೆ.. ರಾಹುಲ್ ಗಾಂಧಿ ಜತೆ ಹೆಜ್ಜೆ ಹಾಕಿದ ಇಂದಿರಾ - ಕವಿತಾ ಲೋಕೇಶ್