ETV Bharat / bharat

ಪ್ರೀತಿಯ ನಾಟಕವಾಡಿ ದೈಹಿಕ ಸಂಪರ್ಕ... ಮದುವೆ ಮಾತು ಬಂದಾಗ ಯುವತಿ ಕೊಲೆಗೈದ! - ಯುವತಿ ಕೊಲೆಗೈದ ಯುವಕ

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್​ ಆಗಿ ಕೆಲಸ ಮಾಡ್ತಿದ್ದ ಯುವತಿ ಜೊತೆ ಪ್ರೀತಿಯ ನಾಟಕವಾಡಿ, ದೈಹಿಕ ಸಂಪರ್ಕ ಬೆಳೆಸಿ ಆಕೆಯ ಕೊಲೆ ಮಾಡಿರುವ ಯುವಕನೋರ್ವ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

YOUNG WOMAN MURDERED BY HER BOYFRIEND
YOUNG WOMAN MURDERED BY HER BOYFRIEND
author img

By

Published : Oct 27, 2021, 3:09 AM IST

ಪ್ರಕಾಶಂ(ಆಂಧ್ರಪ್ರದೇಶ): ಪ್ರೀತಿಯ ಹೆಸರಲ್ಲಿ ಯುವತಿ ಜೊತೆ ದೈಹಿಕ ಸಂಪರ್ಕ ಬೆಳೆಸಿರುವ ಯುವಕನೋರ್ವ, ಮದುವೆ ಮಾತು ಬರುತ್ತಿದ್ದಂತೆ ಆಕೆಯ ಕೊಲೆಗೈದು ಆತ್ಮಹತ್ಯೆಯ ನಾಟಕವಾಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಆರೋಪಿಯ ಬಂಧನ ಮಾಡುವಲ್ಲಿ ಯಶಸ್ವಿಯಾಗಿರುವ ಪೊಲೀಸರು ವಿಚಾರಣೆಗೊಳಪಡಿಸಿದಾಗ ನಡೆದ ಘಟನೆಯ ಬಗ್ಗೆ ಎಳೆಎಳೆಯಾಗಿ ಮಾಹಿತಿ ಬಿಚ್ಚಿಟ್ಟಿದ್ದಾನೆ.

ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಕರವಾಡಿಯ ಯುವತಿ ನಾಗಚೈತನ್ಯ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್​ ಆಗಿ ಕೆಲಸ ಮಾಡ್ತಿದ್ದಳು. ಕೊಟ್ಟಿರೆಡ್ಡಿ ಎಂಬ ಗುಂಟೂರು ಜಿಲ್ಲೆಯ ಯುವಕ ವೈದ್ಯಕೀಯ ಪ್ರತಿನಿಧಿಯಾಗಿ ಕೆಲಸ ಮಾಡ್ತಿದ್ದನು. ಕೆಲಸದ ನಿಮಿತ್ಯ ನಾಗಚೈತನ್ಯ ಕೆಲಸ ಮಾಡ್ತಿದ್ದ ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಇಬ್ಬರು ಪರಿಚಯವಾಗಿದೆ. ತದನಂತರ ಅದು ಪ್ರೀತಿಗೆ ತಿರುಗಿದೆ.

YOUNG WOMAN MURDERED BY HER BOYFRIEND
ಕೊಲೆಯಾಗಿರುವ ನರ್ಸ್​ ನಾಗಚೈತನ್ಯ

ನಾಗಚೈತನ್ಯ ಆಸ್ಪತ್ರೆಯ ಸಮೀಪದ ಹಾಸ್ಟೇಲ್​​ನಲ್ಲಿ ವಾಸವಾಗಿದ್ದಳು. ಮೇಲಿಂದ ಮೇಲೆ ಅಲ್ಲಿಗೆ ಬರುತ್ತಿದ್ದ ಕೊಟ್ಟಿರೆಡ್ಡಿ ನಾಗಚೈತನ್ಯಗೆ ಭೇಟಿಯಾಗುತ್ತಿದ್ದನು. ಈ ವೇಳೆ ದೈಹಿಕ ಸಂಪರ್ಕ ಸಹ ಬೆಳೆಸಿದ್ದನು. ಇಬ್ಬರು ಪ್ರೀತಿ ಮಾಡ್ತಿರುವ ವಿಷಯ ಯುವತಿಯ ಕುಟುಂಬಕ್ಕೆ ಗೊತ್ತಾಗುತ್ತಿದ್ದಂತೆ ಅದಕ್ಕೆ ಒಪ್ಪಿಕೊಂಡು, ಮದುವೆ ಪ್ರಸ್ತಾಪ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡಿರುವ ಯುವಕ ಆಕೆಯ ಜೊತೆ ಜಗಳವಾಡಿದ್ದಾನೆ.

ಕೊಲೆ ಮಾಡಲು ಯೋಜನೆ

ನಾಗಚೈತನ್ಯ ಕೊಲೆ ಮಾಡಲು ಮುಂದಾಗಿ ನಲಗೊಂಡದ ಲಾಡ್ಜ್​ವೊಂದಕ್ಕೆ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಆಕೆಯ ಕೊಲೆ ಮಾಡಿ, ಶವವನ್ನ ರೂಮಿನಲ್ಲಿಟ್ಟು ಬೀಗ ಹಾಕಿ ಹೊರಬಿದ್ದಿದ್ದಾನೆ. ಈ ವೇಳೆ ತನಗೂ ಗಾಯಮಾಡಿಕೊಂಡು ರಿಮ್ಸ್​​ ಆಸ್ಪತ್ರೆಗೆ ಬಂದು ದಾಖಲಾಗಿದ್ದಾನೆ. ಈ ವೇಳೆ ಸಂದೇಹ ಬಂದಿರುವ ಕಾರಣ ವೈದ್ಯರು ಪ್ರಶ್ನೆ ಮಾಡಿದಾಗ ವಿಭಿನ್ನವಾದ ಕಥೆ ಕಟ್ಟಿದ್ದಾನೆ.

ಇದನ್ನೂ ಓದಿರಿ: ಪಟಾಕಿ ಮಳಿಗೆಯಲ್ಲಿ ಅಗ್ನಿ ಅನಾಹುತ: ಐವರು ಸಾವು, 10 ಮಂದಿ ಸ್ಥಿತಿ ಗಂಭೀರ

ಈ ರೀತಿ ಕಥೆ ಕಟ್ಟಿದ ವ್ಯಕ್ತಿ

ತಾನು ಹುಡುಗಿಯೊಬ್ಬಳನ್ನ ಪ್ರೀತಿಸುತ್ತಿದ್ದು, ಅದಕ್ಕೆ ಕುಟುಂಬದವರು ಒಪ್ಪದ ಕಾರಣ ಇಬ್ಬರು ಆತ್ಮಹತ್ಯೆಗೆ ಯತ್ನಿಸಿರುವುದಾಗಿ ತಿಳಿಸಿದ್ದಾನೆ. ಈ ವೇಳೆ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಮತ್ತಷ್ಟು ಮಾಹಿತಿ ಪಡೆದುಕೊಂಡು ಲಾಡ್ಜ್​ಗೆ ತೆರಳಿ ನೋಡಿದಾಗ ಯುವತಿ ಶವ ಪತ್ತೆಯಾಗಿದೆ. ಮೃತದೇಹ ಗಾಂಧಿ ಆಸ್ಪತ್ರೆಗೆ ರವಾನೆ ಮಾಡಿದ್ದು, ತನಿಖೆ ನಡೆಸುತ್ತಿದ್ದಾರೆ. ಲಾಡ್ಜ್​ನಲ್ಲಿ ಸಿಸಿಟಿವಿ ಕ್ಯಾಮರಾ ಕಾರ್ಯನಿರ್ವಹಿಸದ ಕಾರಣಕ್ಕಾಗಿ ಮಾಲೀಕರ ವಿರುದ್ಧ ಸಹ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.