ETV Bharat / bharat

ಬಂಡೆಗಳ ನಡುವೆ ಸಿಲುಕಿ 3 ಗಂಟೆ ಸಾವು-ಬದುಕಿನ ಹೋರಾಟ; ಪೊಲೀಸರಿಂದ ಯುವಕನ ರಕ್ಷಣೆ

ಬಂಡೆಗಳ ನಡುವೆ ಸಿಲುಕಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ ಯುವಕನನ್ನು ತಿರುಮಲಗಿರಿ ಪೊಲೀಸರು ಕಾಪಾಡಿದ್ದಾರೆ.

author img

By

Published : Jan 31, 2023, 10:44 AM IST

Etv a-young-man-stuck-between-rocks-dot-tirumalagiri-police-rescued
Etv 3 ಗಂಟೆಗಳ ಕಾಲ ಬಂಡೆಗಳ ನಡುವೆ ಸಿಲುಕಿದ ಯುವಕನನ್ನು ರಕ್ಷಿಸಿದ ಪೊಲೀಸರು

ಹೈದರಾಬಾದ್ : ಮೋಜಿಗಾಗಿ ಬೃಹತ್​ ಬಂಡೆ ಹತ್ತಿದ ಯುವಕನೋರ್ವ ಆ ಬಂಡೆಗಳ ನಡುವೆ ಸಿಲುಕಿರುವ ಘಟನೆ ತಿರುಮಲಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ. ಮಹಾರಾಷ್ಟ್ರ ಮೂಲದ ರಾಜು ಎಂಬಾತ ಬಂಡೆಗಳ ನಡುವೆ ಸಿಲುಕಿದ್ದ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಆತನನ್ನು ರಕ್ಷಿಸಿದ್ದಾರೆ.

ಮೋಜು ತಂದ ಪಜೀತಿ: ರಾಜು ಕೆಲಸ ಅರಿಸಿಕೊಂಡು ಹೈದರಾಬಾದ್​ಗೆ ಬಂದಿದ್ದ. ಸೋಮವಾರ ಸಂಜೆ ಇಲ್ಲಿನ ತಿರುಮಲಗಿರಿ ಕೆನ್​ ಕಾಲೇಜು ಬಳಿಯ ಖಾಲಿ ಜಾಗಕ್ಕೆ ಹೋಗಿದ್ದಾನೆ. ಅಲ್ಲಿ ಬೃಹತ್​ ಬಂಡೆಗಳನ್ನು ಕಂಡ ಆತ ಅದರ ಮೇಲೆ ಹತ್ತಿದ್ದಾನೆ. ಈ ವೇಳೆ ಕೈ ಜಾರಿ ಬಿದ್ದು ಎರಡು ಬಂಡೆಗಳ ನಡುವೆ ಸಿಲುಕಿದ್ದಾನೆ.

ಸಾವು-ಬದುಕಿನ ಹೋರಾಟ: ಸುಮಾರು ಮೂರು ಗಂಟೆಗಳ ಕಾಲ ಯುವಕ ಬಂಡೆಗಳ ನಡುವೆ ಸಿಲುಕಿ ಒದ್ದಾಡಿದ್ದಾನೆ. ಇದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ತಿರುಮಲಗಿರಿ ಠಾಣಾ ಪೊಲೀಸರು ಯುವಕನ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಕಾನ್​ಸ್ಟೇಬಲ್​ಗಳಾದ ರಾಂಬಾಬು, ಬಾಷಾ, ರಾಜು ಎಂಬವರು ಹರಸಾಹಸಪಟ್ಟು ಯುವಕನ ಪ್ರಾಣ ಕಾಪಾಡಿದ್ದಾರೆ.

ರಕ್ಷಣೆಯ ಬಳಿಕ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸೋಮವಾರ ರಾತ್ರಿ ಯುವಕ ಸ್ವಗ್ರಾಮಕ್ಕೆ ತೆರಳಿದ್ದಾನೆ ಎಂದು ತಿಳಿದುಬಂದಿದೆ. ರಾಜುವನ್ನು ರಕ್ಷಿಸಿದ ಕಾನ್​ಸ್ಟೇಬಲ್​ಗಳನ್ನು ಸಿಐ ಶ್ರವಣ್ ಕುಮಾರ್ ಅಭಿನಂದಿಸಿದ್ದಾರೆ.

ಇದನ್ನೂ ಓದಿ: ಲೈಟ್​ ಆನ್​ ಆಫ್​ ಮಾಡುತ್ತಿದ್ದ ಮಗನಿಗೆ ಬುದ್ಧಿವಾದ ಹೇಳಿದ ತಂದೆ: ಮಸಾಲೆ ರುಬ್ಬುವ ಕಲ್ಲಿನಿಂದ ಅಪ್ಪನ ಕೊಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.