ETV Bharat / bharat

ಗಾಳಿಯಲ್ಲಿ ಗುಂಡು ಹಾರಿಸಿದ ವ್ಯಕ್ತಿ.. ಪ್ರಕರಣ ದಾಖಲಿಸಿಕೊಂಡ ಪೊಲೀಸರು - ಗಾಳಿಯಲ್ಲಿ ಗುಂಡು ಹಾರಿಸಿದ ವ್ಯಕ್ತಿ

ಯುವಕನೋರ್ವ ಗಾಳಿಯಲ್ಲಿ ಗುಂಡು ಹಾರಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ವೈರಲ್​ ಆಗಿದ್ದು, ವಿಡಿಯೋ ಮಾಡಿ ಇನ್​​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಲಾಗಿದೆ. ತದನಂತರ ಡಿಲೀಟ್ ಮಾಡಲಾಗಿದೆ..

young man openly fired shots
young man openly fired shots
author img

By

Published : May 25, 2022, 3:31 PM IST

ಜಲಂಧರ್ (ಪಂಜಾಬ್) : ಪಂಜಾಬ್​​ನಲ್ಲಿ ಜಾರಿಯಲ್ಲಿರುವ ಗನ್​ ಸಂಸ್ಕೃತಿ ಕೊನೆಗಾಣಿಸಲು ಅಲ್ಲಿನ ಸರ್ಕಾರ ಅನೇಕ ಮಹತ್ವದ ನಿರ್ಧಾರ ಕೈಗೊಳ್ಳುತ್ತಿದೆ. ಇದರ ಮಧ್ಯೆ ಕೆಲವೊಂದು ಪ್ರದೇಶಗಳಲ್ಲಿ ಗಾಳಿಯಲ್ಲಿ ಗುಂಡು ಹಾರಿಸುವ ಪ್ರಕರಣಗಳು ದಾಖಲಾಗ್ತಿವೆ. ಇದೀಗ ಪಂಜಾಬ್​ನ ಜಲಂಧರ್​​ನಲ್ಲಿ ವ್ಯಕ್ತಿಯೋರ್ವ ಗುಂಡು ಹಾರಿಸಿರುವ ಘಟನೆ ನಡೆದಿದ್ದು, ಅದರ ವಿಡಿಯೋ ವೈರಲ್ ಆಗಿದೆ.

ಗಾಳಿಯಲ್ಲಿ ಗುಂಡು ಹಾರಿಸಿದ ವ್ಯಕ್ತಿ.. ಪ್ರಕರಣ ದಾಖಲಿಸಿಕೊಂಡ ಪೊಲೀಸರು..

ಪಂಜಾಬ್​ನ ಜಲಂಧರ್​​ನಲ್ಲಿ ಈ ಘಟನೆ ನಡೆದಿದೆ. ಶೇಖನ್​​ ಬಜಾರ್​ನ ವ್ಯಾಪಾರಿಯೋರ್ವ ಪರವಾನಿಗೆ ಪಡೆದ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿರುವ ವಿಡಿಯೋ ವೈರಲ್​​ ಆಗಿದೆ. ಈ ವಿಡಿಯೋ ಕಳೆದ ಕೆಲ ದಿನಗಳ ಹಿಂದೆ ನಡೆದಿರುವುದು ಎನ್ನಲಾಗ್ತಿದೆ. ವೈರಲ್​ ವಿಡಿಯೋ ಬಗ್ಗೆ ಜಲಂಧರ್ ಡಿಸಿಪಿ ಜಸ್ಕರನ್ ಸಿಂಗ್ ತೇಜಾ ಅವರನ್ನ ಪ್ರಶ್ನೆ ಮಾಡಿದಾಗ, ವಿಡಿಯೋದಲ್ಲಿ ಯುವಕನೋರ್ವ ಗುಂಡು ಹಾರಿಸುತ್ತಿರುವುದು ಕಂಡು ಬಂದಿದೆ.

ಆದರೆ, ಈ ವಿಡಿಯೋ ಯಾವ ಪ್ರದೇಶದ್ದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮೈದಾನದಲ್ಲಿ ಗುಂಡು ಹಾರಿಸುತ್ತಿರುವುದು ಕಂಡು ಬಂದಿದ್ದು, ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: ಮಾಜಿ ಕ್ರಿಕೆಟಿಗ, ರಾಜಕಾರಣಿ ನವಜೋತ್ ಸಿಂಗ್ ಸಿಧುಗೆ ಜೈಲಿನಲ್ಲಿ ಕೊಟ್ಟ ಕೆಲಸವೇನು ಗೊತ್ತಾ?

ಪ್ರಾಥಮಿಕ ಮಾಹಿತಿ ಪ್ರಕಾರ ಮದುವೆ ಸಮಾರಂಭದಲ್ಲಿ ಯುವಕನೋರ್ವ ಗುಂಡಿನ ದಾಳಿ ನಡೆಸಿದ್ದು, ವಿಡಿಯೋ ಮಾಡಿ ಇನ್​​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಲಾಗಿದೆ. ತದನಂತರ ಡಿಲೀಟ್ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.