ETV Bharat / bharat

ಪೊಲೀಸ್​ ಕಸ್ಟಡಿಯಲ್ಲಿ ಕತ್ತು ಕೊಯ್ದುಕೊಂಡ ಆರೋಪಿ ; ಘಟನೆ ಸುತ್ತ ಅನುಮಾನದ ಹುತ್ತ - ಅಪ್ರಾಪ್ತ ಬಾಲಕಿಯನ್ನ ಅಪಹರಿಸಿದ ಪ್ರಕರಣ

ಪೊಲೀಸ್​ ಕಸ್ಟಡಿಯಲ್ಲಿದ್ದ ಆರೋಪಿ ಕತ್ತು ಕೊಯ್ದುಕೊಂಡು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಪೊಲೀಸ್​ ಕಸ್ಟಡಿಯಲ್ಲಿ ಕತ್ತುಕೊಯ್ದುಕೊಂಡ ಆರೋಪಿ

author img

By

Published : Apr 11, 2023, 10:02 AM IST

ಕಾನ್ಪುರ (ಉತ್ತರಪ್ರದೇಶ): ಕಾನ್ಪುರದ ದೇಹತ್‌ನಲ್ಲಿಯ ಮಂಗಲ್‌ಪುರ ಪೊಲೀಸ್ ಠಾಣೆಯ ಕಸ್ಟಡಿಯಲ್ಲಿದ ಆರೋಪಿ ಕತ್ತು ಕುಯ್ದುಕೊಂಡು ಗಂಭೀರವಾಗಿ ಗಾಯಾಗೊಂಡಿರುವ ಘಟನೆ ನಡೆದಿದೆ. ಅಲೋಕ್ ಗುಪ್ತಾ ಗಾಯಗೊಂಡಿರುವ ಆರೋಪಿ. ಸದ್ಯ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಧಿತ ಅಲೋಕ್​ ಗುಪ್ತಾನನ್ನು ಅಪ್ರಾಪ್ತ ಬಾಲಕಿಯನ್ನ ಅಪಹರಿಸಿದ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದರು. ಸೋಮವಾರ ಪೊಲೀಸ್​ ಕಸ್ಟಡಿಯಲ್ಲಿ ಕತ್ತು ಕೊಯ್ದುಕೊಂಡಿದ್ದಾನೆ. ಇದಕ್ಕೆ ಸೂಕ್ತ ಕಾರಣ ತಿಳಿದು ಬಂದಿಲ್ಲ. ಪೊಲೀಸ್​ ಕಸ್ಟಡಿಯಲ್ಲಿರುವ ಅಲೋಕ್​ಗೆ ಹರಿತವಾದ ವಸ್ತು ಹೇಗೆ ಸಿಕ್ಕಿತು? ಮತ್ತು ಸ್ವತಃ ಆರೋಪಿಯೇ ಕತ್ತು ಕುಯ್ದುಕೊಂಡಿದ್ದಾ ಅಥವಾ ಬೇರೆಯವರ ಕೈವಾಡವಿದೆಯಾ ಎಂಬ ಪ್ರಶ್ನೆಗಳು ಹುಟ್ಟುಕೊಂಡಿವೆ. ಘಟನೆ ಬಳಿಕ ಪೊಲೀಸ್​ ಅಧಿಕಾರಿಗಳು ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆ ಕುರಿತು ಮಾಹಿತಿ ನೀಡಿರುವ ಹೆಚ್ಚುವರಿ ಪೊಲೀಸ್​​​ ವರಿಷ್ಠಾಧಿಕಾರಿ, ಮಧ್ಯಪ್ರದೇಶದ ಸತ್ನಾ ಟಿಕುರಿಯಾ ಟೋಲಾ ನರ್ವಾನ್ ಇಂಟರ್‌ಸೆಕ್ಷನ್ ಬಳಿ ವಾಸಿಸುತ್ತಿದ್ದ 32 ವರ್ಷದ ಅಲೋಕ್ ಗುಪ್ತಾ ಎಂಬ ಯುವಕ 15 ವರ್ಷದ ಬಾಲಕಿಯನ್ನು ಆಮಿಷಕ್ಕೆ ಒಳಪಡಿಸಿ ಅಪಹರಿಸಿದ್ದ ಎಂದು ಮಂಗಳಪುರ ಪೊಲೀಸ್ ಠಾಣೆಯಲ್ಲಿ ಬಾಲಕಿಯ ತಂದೆ ಆರೋಪಿ ಅಲೋಕ್​ ಗುಪ್ತಾ ವಿರುದ್ಧ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಸಿಕೊಂಡಿದ್ದರು. ಸುಮಾರು 15 ದಿನಗಳ ನಂತರ ಮಂಗಳಾಪುರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಅಲೋಕ್ ಗುಪ್ತಾನನ್ನು ಬಂಧಿಸಿದ್ದಾರೆ.

ಸೋಮವಾರ ಆರೋಪಿಯ ವಿಚಾರಣೆ ನಡೆಸಿದ ನಂತರ ಅಲೋಕ್‌ನನ್ನು ಪೊಲೀಸ್​ ಕಸ್ಟಡಿಗೆ ಪಡೆಯಲಾಗಿತ್ತು. ಅಲ್ಲದೇ ಅಪ್ರಾಪ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ವೇಳೆ ಆರೋಪಿ ಅಲೋಕ್​ ಕತ್ತು ಕೊಯ್ದುಕೊಂಡು ಗಂಭೀರವಾಗಿ ಗಾಯಗೊಂಡಿದ್ದಾನೆ. ಕೂಡಲೇ ಗಾಯಾಳು ಆರೋಪಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕಾನ್ಪುರದ ಹಲಾತ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲೋಕ್​ ಕುತ್ತಿಗೆಯ ರಕ್ತನಾಳಗಳು ಕಟ್​ ಆಗಿದ್ದು ಚಿಕಿತ್ಸೆ ಮುಂದುವರೆದಿದೆ. ಇನ್ನು ಘಟನೆ ಕುರಿತು ವಿಧಿವಿಜ್ಞಾನ ತಂಡದ ಸಿಬ್ಬಂದಿ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮದುವೆ ಸಂಭ್ರಮದಲ್ಲಿ ರಿವಾಲ್ವರ್‌ನಿಂದ ನಾಲ್ಕು ಸುತ್ತು ಗುಂಡು ಹಾರಿಸಿ ವಧು ಪರಾರಿ!

ಕೃಷಿ ಭೂಮಿಯಲ್ಲಿ ಗ್ರೆನೇಡ್‌ಗಳು ಪತ್ತೆ ನವದೆಹಲಿ: ಉತ್ತರ ದೆಹಲಿಯ ಹೋಲಂಬಿ ಕಲಾನ್ ಪ್ರದೇಶದಲ್ಲಿ ಸುಮಾರು ಏಳರಿಂದ ಎಂಟು ಹ್ಯಾಂಡ್ ಗ್ರೆನೇಡ್‌ಗಳು ಪತ್ತೆಯಾಗಿರುವ ಘಟನೆ ಸೋಮವಾರ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಓರ್ವನನ್ನು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಿಕ್ಕಂತಹ ಗ್ರೆನೇಡ್‌ಗಳೆಲ್ಲವೂ ದೇಶಿ ನಿರ್ಮಿತವಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ದೆಹಲಿಯ ಹೊರವಲಯದ ಕೃಷಿ ಭೂಮಿಯಲ್ಲಿ ಗ್ರೆನೇಡ್‌ಗಳನ್ನು ಪತ್ತೆಯಾಗಿವೆ. ಮೆಟ್ರೋ ವಿಹಾರ್ ಪ್ರದೇಶದಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬರಿಗೆ ಸೇರಿದ ಹೊಲವೊಂದರಲ್ಲಿ ಹೆಚ್ಚಿನ ಸಂಖ್ಯೆಯ ಮಾರಕಾಸ್ತ್ರಗಳನ್ನು ಬಚ್ಚಿಟ್ಟಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ಶೋಧ ನಡೆಸಿದ್ದರು. ಈ ವೇಳೆ ಮಾರಕಾಸ್ತ್ರಗಳ ಬದಲಿಗೆ ದೇಶಿ ಗ್ರೆನೇಡ್‌ಗಳು ಪತ್ತೆಯಾಗಿವೆ. ತಕ್ಷಣ ಬಾಂಬ್​ ನಿಷ್ಕ್ರಿಯ ದಳಕ್ಕೆ ಈ ಕುರಿತು ಮಾಹಿತಿ ನೀಡಲಾಗಿದೆ. ಈ ಪ್ರದೇಶದಲ್ಲಿ ಮುಂಜಾಗೃತವಾಗಿ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ದೆಹಲಿಯ ಹೊರವಲಯದಲ್ಲಿ 7ಕ್ಕೂ ಹೆಚ್ಚು ಹ್ಯಾಂಡ್ ಗ್ರೆನೇಡ್‌ ಪತ್ತೆ: ಶಂಕಿತ ವಶಕ್ಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.