ETV Bharat / bharat

ಹಳೆ ದ್ವೇಷ: ಯುವಕನ ಖಾಸಗಿ ಅಂಗಕ್ಕೆ ರಾಡ್​​​ನಿದ ಹೊಡೆದ ಕ್ರೂರಿಗಳು

ಇಲ್ಲಿನ ಟಿಕುನಿಯಾ ಪೊಲೀಸ್ ಠಾಣೆ ಪ್ರದೇಶದಲ್ಲಿ ಹಳೆಯ ದ್ವೇಷಯಿಂದ ಆರೋಪಿಗಳು ಯುವಕನನ್ನು ಬರ್ಬರವಾಗಿ ಥಳಿಸಿರುವ ಘಟನೆ ನಡೆದಿದೆ. ಗಾಯಾಳು ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಯುವಕನನ್ನು ಥಳಿಸಿದ ಕ್ರೂರಿಗಳು
Young Man Brutally Beaten Rod
author img

By

Published : Apr 1, 2021, 7:56 AM IST

ಲಖಿಂಪುರ ಖೇರಿ( ಉತ್ತರಪ್ರದೇಶ): ಇಲ್ಲಿನ ಟಿಕುನಿಯಾ ಪೊಲೀಸ್ ಠಾಣೆ ಪ್ರದೇಶದಲ್ಲಿ ಹಳೆಯ ದ್ವೇಷ ಹಿಂಸೆಗೆ ತಿರುಗುವಂತೆ ಮಾಡಿದೆ. ಯುವಕನೊಬ್ಬನನ್ನು ಆರೋಪಿಗಳು ಅತ್ಯಂತ ಬರ್ಬರವಾಗಿ ಥಳಿಸಿದ್ದಾರೆ.

ಯುವಕನ ಮೇಲಿನ ದ್ವೇಷದಿಂದ ಅವನ ವಿರೋಧಿಗಳು ದಾಳಿ ನಡೆಸಿದ್ದು, ಆತನ ಖಾಸಗಿ ಭಾಗಕ್ಕೆ ಕಬ್ಬಿಣದ ರಾಡ್​​​​​​​​​ನಿಂದ ಹಲ್ಲೆ ಮಾಡಿ ಅಮಾನುಷವಾಗಿ ಗಾಯಗೊಳಿಸಿದ್ದಾರೆ. ದಾಳಿಗೊಳಗಾದ ಯುವಕನ ಸ್ಥಿತಿ ಗಂಭೀರವಾಗಿದ್ದು, ಆತನನ್ನು ಸ್ಥಳೀಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಕರಣ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದು, ಆರೋಪಿಗಳನ್ನ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಯುವಕನಿಗೆ ಇಷ್ಟೊಂದು ಅಮಾನವೀಯವಾಗಿ ಥಳಿಸಿದ್ದಕ್ಕೆ ಹಳೆಯ ದ್ವೇಷವೇ ಕಾರಣ ಎಂದು ಹೇಳಲಾಗುತ್ತಿದೆ.

ಓದಿ: ಪಶ್ಚಿಮ ಬಂಗಾಳ, ಅಸ್ಸೋಂನಲ್ಲಿ 2ನೇ ಹಂತದ ಮತದಾನ ಆರಂಭ

ಈ ಘಟನೆ ಬಗ್ಗೆ ಮಾತನಾಡಿರುವ ಎಎಸ್​​​​ಪಿ, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದೇ ವೇಳೆ ಆತನ ಖಾಸಗಿ ಅಂಗಕ್ಕೆ ರಾಡ್​ ಹಾಕಿರುವ ಸುದ್ದಿ ಸುಳ್ಳು ಎಂದೂ ಅವರು ಸ್ಪಷ್ಟನೆ ನೀಡಿದ್ದಾರೆ. ಗಾಯಾಳುವಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.