ETV Bharat / bharat

ಇದು ನನ್ನ ಕೊನೆ ಫೇಸ್​ಬುಕ್​​​ ಪೋಸ್ಟ್​​... ಪತಿ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ 24ರ ಯುವತಿ - ಕೇರಳ ವಿವಾಹಿತ ಮಹಿಳೆ

ಗಂಡನ ಮನೆಯವರ ವರದಕ್ಷಿಣೆ ಭೂತಕ್ಕೆ 24 ವರ್ಷದ ಯುವತಿಯೊಬ್ಬಳು ನೇಣಿಗೆ ಶರಣಾಗಿದ್ದು, ಅದಕ್ಕೂ ಮುಂಚಿತವಾಗಿ ಗಂಡನ ಮನೆಯವರು ನೀಡಿರುವ ಚಿತ್ರಹಿಂಸೆ ಬಗ್ಗೆ ಮಾಹಿತಿ ಶೇರ್​ ಮಾಡಿದ್ದಾಳೆ.

Young Kerala woman found dead
Young Kerala woman found dead
author img

By

Published : Jun 21, 2021, 10:55 PM IST

Updated : Jun 21, 2021, 11:04 PM IST

ಕೊಲ್ಲಂ(ಕೇರಳ): ಗಂಡನ ಮನೆಯವರ ವರದಕ್ಷಿಣೆ ಕಿರುಕುಳದಿಂದಾಗಿ 24 ವರ್ಷದ ವಿವಾಹಿತ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕೇರಳದ ಕೊಲ್ಲಂನ ಗಂಡನ ಮನೆಯಲ್ಲಿ ಈ ಘಟನೆ ನಡೆದಿದೆ. ಸೋಮವಾರ ಬೆಳಗ್ಗೆ ಯುವತಿ ನೇಣಿಗೆ ಶರಣಾಗಿದ್ದು, ಈಗಾಗಲೇ ಗಂಡ ಕಿರಣಕುಮಾರ್​​ ನನ್ನ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಪತಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ 24ರ ಯುವತಿ

ವರದಕ್ಷಿಣೆ ರೂಪದಲ್ಲಿ ಕಾರು ನೀಡುವಂತೆ ಮೇಲಿಂದ ಮೇಲೆ ಗಂಡ ಕಿರಣಕುಮಾರ್​ ತನಗೆ ಕಿರುಕುಳ ನೀಡುತ್ತಿದ್ದಾನೆ ಎಂದು ವಿಸ್ಮಯ ಸೋದರ ಸಂಬಂಧಿಗೆ ಸಂದೇಶ ರವಾನೆ ಮಾಡಿದ್ದಳು. ಅದರ ಫೇಸ್​ಬುಕ್​​ ಚಾಟ್​ ಕೂಡ ಇದೀಗ ವೈರಲ್​​ ಆಗಿದೆ.

ಈ ವೇಳೆ ಇದು ನನ್ನ ಕೊನೆ ಫೋಸ್ಟ್ ಕೂಡ ಆಗಬಹುದು ಎಂದು ಹೇಳಿಕೊಂಡಿದ್ದಾಳೆ. ಈ ಹಿಂದೆ ಕೂಡ ಅನೇಕ ಸಲ ಕ್ರೂರವಾಗಿ ಥಳಿಸಿದ್ದಾನೆಂದು ವಿಸ್ಮಯ ತಿಳಿಸಿದ್ದಾಳೆ. ಆಯುರ್ವೇದ ಔಷಧ ಮತ್ತು ಶಸ್ತ್ರಚಿಕಿತ್ಸೆ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದಳು. 2020ರಲ್ಲಿ ಮೋಟಾರು ವಾಹನ ವಿಭಾಗದ ಅಧಿಕಾರಿಯಾಗಿದ್ದ ಎಸ್​. ಕಿರಣಕುಮಾರ್​​ ಜೊತೆ ಸಪ್ತಪದಿ ತುಳಿದಿದ್ದರು.

Young Kerala woman found dead
ಆತ್ಮಹತ್ಯೆಗೆ ಶರಣಾಗಿರುವ ವಿಸ್ಮಯ

ಇದನ್ನೂ ಓದಿರಿ: ಗಂಡನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ..ಇದೊಂದು ಕೊಲೆ ಎಂದ ಕುಟುಂಬಸ್ಥರು

ವಿಸ್ಮಯ ಇಂದು ಬೆಳಗ್ಗೆ ನೇಣಿಗೆ ಶರಣಾಗಿದ್ದಾಳೆ. ಇದರ ಹಿಂದೆ ಗಂಡನ ಮನೆಯವರ ಕೈವಾಡವಿದೆ ಹಾಗೂ ಅವರು ನೀಡಿರುವ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮಹಿಳೆ ಕುಟುಂಬಸ್ಥರು ಆರೋಪಿಸಿದ್ದಾರೆ. ಜತೆಗೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಮದುವೆ ಸಂದರ್ಭದಲ್ಲಿ 1 ಎಕರೆ ಜಮೀನು ಹಾಗೂ ಕಾರು ವರದಕ್ಷಿಣೆ ರೂಪದಲ್ಲಿ ನೀಡಲಾಗಿತ್ತು. ಆದರೆ ಇದರಿಂದ ತೃಪ್ತಿಯಾಗದ ಕಿರಣಕುಮಾರ್​ ತನಗೆ ಕಾರಿನ ಬದಲಿಗೆ ಹಣ ನೀಡುವಂತೆ ಮೇಲಿಂದ ಮೇಲೆ ಕಿರುಕುಳ ನೀಡುತ್ತಿದ್ದನು ಎಂಬ ಆರೋಪ ಕೇಳಿ ಬಂದಿದೆ. ಮಹಿಳೆ ಮೇಲೆ ಹಲ್ಲೆ ನಡೆಸಲಾಗಿರುವ ಫೋಟೋ ಸಹ ವೈರಲ್​ ಆಗಿದ್ದು, ಮಹಿಳಾ ಆಯೋಗ ಕೂಡ ಪ್ರಕರಣ ದಾಖಲು ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

Young Kerala woman found dead
ವಿಸ್ಮಯ ಕುಟುಂಬಸ್ಥರ ಗಂಭೀರ ಆರೋಪ

Last Updated : Jun 21, 2021, 11:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.