ETV Bharat / bharat

ಜಮ್ಮು-ಕಾಶ್ಮೀರದ ಯುವಕನಿಂದ 6 ಸೀಟುಗಳ ವಿಮಾನಯಾನ ಸಂಸ್ಥೆ ಆರಂಭ

ರೈನಾ ಅವರು ಇದೀಗ ಜಮ್ಮು ಮತ್ತು ಕಾಶ್ಮೀರದಲ್ಲಿ ಪೂರ್ಣ ಪ್ರಮಾಣದ ಏರ್ ಆ್ಯಂಬುಲೆನ್ಸ್ ಸೇವೆಯನ್ನು ಪ್ರಾರಂಭಿಸಲು ಯೋಜಿಸಿದ್ದಾರೆ. ಆದರೆ, ಕಣಿವೆ ರಾಜ್ಯದಲ್ಲಿ ಕಳಪೆ ಹವಾಮಾನ ಕಾರಣದಿಂದ ಅದು ವಿಳಂಬವಾಗುತ್ತಿದೆಯಂತೆ..

aircraft
ವಿಮಾನಯಾನ
author img

By

Published : Jan 28, 2022, 3:21 PM IST

ಜಮ್ಮು(ಜಮ್ಮು-ಕಾಶ್ಮೀರ) : ಕಣಿವೆ ರಾಜ್ಯದ ಯುವಕನೊಬ್ಬ ತನ್ನದೇ ಆದ ಚಿಕ್ಕ ವಿಮಾನಸಂಸ್ಥೆ ಆರಂಭಿಸಲು ಮುಂದಾಗಿದ್ದಾನೆ. 6 ಸೀಟುಗಳ ಏರ್​ ಆ್ಯಂಬುಲೆನ್ಸ್​ ನಡೆಸಲು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದಿಂದ ನಿಗದಿತವಲ್ಲದ ಪರವಾನಿಗೆ ಕೂಡ ಪಡೆದಿದ್ದಾನೆ.

ಜಮ್ಮುವಿನ ದಲ್ಪತಿಯ ಮೊಹಲ್ಲಾ ನಿವಾಸಿಯಾದ ಕ್ಯಾಪ್ಟನ್​ ರೋಹನೀತ್​ ಸಿಂಗ್​ ರೈನಾ ಸ್ವತಃ ವಿಮಾನ ಹೊಂದಲು ಬಯಸಿದ ಯುವಕ. ರೋಹನೀತ್​ ಕೆನಡಾದ ವ್ಯಾಂಕೋವರ್‌ನಲ್ಲಿರುವ ಫ್ಲೈಟ್ ಸ್ಕೂಲ್‌ನಲ್ಲಿ ಅಧ್ಯಯನ ಮಾಡಿದ್ದಾರೆ. ಇವರು ತರಬೇತಿ ವೇಳೆ ಒಬ್ಬರೇ 17 ಗಂಟೆ ಕಾಲ ವಿಮಾನ ಹಾರಾಟ ನಡೆಸಿ ಅತ್ಯುತ್ತಮ ಪೈಲಟ್​ ಆಗಿ ಹೊರಹೊಮ್ಮಿದ್ದಾರೆ.

ಓದಿ: ಹೈದರಾಬಾದ್​ನಲ್ಲಿ ಉದ್ಘಾಟನೆಗೆ ಸಿದ್ಧವಾದ ಅತಿ ದೊಡ್ಡ ವಸತಿ ಯೋಜನೆ

ರೈನಾ ಅವರು ಇದೀಗ ಜಮ್ಮು ಮತ್ತು ಕಾಶ್ಮೀರದಲ್ಲಿ ಪೂರ್ಣ ಪ್ರಮಾಣದ ಏರ್ ಆ್ಯಂಬುಲೆನ್ಸ್ ಸೇವೆಯನ್ನು ಪ್ರಾರಂಭಿಸಲು ಯೋಜಿಸಿದ್ದಾರೆ. ಆದರೆ, ಕಣಿವೆ ರಾಜ್ಯದಲ್ಲಿ ಕಳಪೆ ಹವಾಮಾನ ಕಾರಣದಿಂದ ಅದು ವಿಳಂಬವಾಗುತ್ತಿದೆಯಂತೆ.

ಈ ಕುರಿತು 'ಈಟಿವಿ ಭಾರತ'ದ ಜೊತೆ ಮಾತನಾಡಿರುವ ರೈನಾ, ಕೇಂದ್ರ ಸರ್ಕಾರದಿಂದ ವಿಮಾನಯಾನ ಸಂಸ್ಥೆ ನಡೆಸಲು ಪರವಾನಿಗೆ ಲಭ್ಯವಾಗಿದೆ. ಈ ಮೊದಲು ನಾನು 10 ಆಸನಗಳ ವಿಮಾನವನ್ನು ಆರಂಭಿಸಲು ಮುಂದಾಗಿದ್ದೆ. ಆದರೆ, ಅದು ಭಾರತದಲ್ಲಿ ಲಭ್ಯವಿಲ್ಲದ ಕಾರಣ 6 ಆಸನಗಳ ವಿಮಾನ ಸೇವೆಯನ್ನು ಆಯ್ದುಕೊಂಡೆ ಎಂದು ಹೇಳಿದ್ದಾರೆ.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.