ನವದೆಹಲಿ: ಅತ್ಯಂತ ಕಳಪೆ ವಾಯು ಗುಣಮಟ್ಟ ಸೂಚ್ಯಂಕ (AQI) ಹೊಂದಿರುವ ಗಾಳಿಯನ್ನು ಉಸಿರಾಡುತ್ತಿರುವ ಕಾರಣದಿಂದ ದೆಹಲಿ ಮತ್ತು ಎನ್ಸಿಆರ್ ಪ್ರದೇಶದಲ್ಲಿ (NCR) ವಾಸಿಸುವ ಜನ ಉಸಿರಾಟದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ದೆಹಲಿಯಲ್ಲಿನ ಗಾಳಿಯ ಗುಣಮಟ್ಟ ಉತ್ತಮವಾಗುವವರೆಗೂ ಜನ ಮನೆಯೊಳಗೇ ಇರುವುದು ಸೂಕ್ತ ಎಂದು ಶಿಫಾರಸು ಮಾಡಲಾಗಿದೆ. ಇಂಥ ಪರಿಸ್ಥಿತಿಯಲ್ಲಿ, ತಜ್ಞರು ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಯೋಗ ಸಲಹೆಗಳನ್ನು ಶಿಫಾರಸು ಮಾಡಿದ್ದಾರೆ.
ಯೋಗ ತಜ್ಞೆ ರಿಚಾ ಸೂದ್ ಅವರು ಕೆಲ ಪ್ರಮುಖ ಫಿಟ್ನೆಸ್ ಸಲಹೆಗಳನ್ನು ನೀಡಿದ್ದಾರೆ. ಭಸ್ತ್ರಿಕಾ, ಕಪಾಲ್ ಭಾತಿ, ಬೈಹ್ಯ ಮತ್ತು ಅನುಲೋಮ್ ವಿಲೋಮ್ ಭಂಗಿಗಳನ್ನು ಅಭ್ಯಾಸ ಮಾಡುವುದು ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಭಸ್ತ್ರಿಕಾ ಯೋಗಾಸನ ಮಾಡುವುದರಿಂದ ಶ್ವಾಸಕೋಶದ ಸಾಮರ್ಥ್ಯ ಬಲಗೊಳ್ಳುತ್ತದೆ.
ವಿಷ ಹೆಚ್ಚುವರಿ ದ್ರವ ತೆಗೆದು ಹಾಕುತ್ತದೆ: ಅನುಲೋಮ ವಿಲೋಮದ ಸಕಾರಾತ್ಮಕ ಪರಿಣಾಮಗಳ ಕುರಿತು ಮಾತನಾಡಿದ ಸೂದ್, ಈ ಯೋಗಾಸನವು ಶ್ವಾಸಕೋಶದಲ್ಲಿ ಸಂಗ್ರಹವಾಗಿರುವ ವಿಷ ಮತ್ತು ಹೆಚ್ಚುವರಿ ದ್ರವವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಜೊತೆಗೆ, ಶ್ವಾಸಕೋಶಕ್ಕೆ ಆಮ್ಲಜನಕಯುಕ್ತ ರಕ್ತದ ಹರಿವನ್ನು ಕಾಪಾಡಿಕೊಳ್ಳಲು ಅನುಲೋಮ ವಿಲೋಮ ಸಾಕಷ್ಟು ಪರಿಣಾಮಕಾರಿಯಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ ಎನ್ನುತ್ತಾರೆ.
ಬಾಹ್ಯ ಪ್ರಾಣಾಯಾಮ ಶ್ವಾಸಕೋಶಗಳಿಗೂ ಪ್ರಯೋಜನಕಾರಿ. ಬಾಹ್ಯ ಪ್ರಾಣಾಯಾಮವನ್ನು ನಿಯಮಿತವಾಗಿ ಮಾಡಿದಲ್ಲಿ ಶ್ವಾಸಕೋಶದಲ್ಲಿ ಆಮ್ಲಜನಕದ ಮಟ್ಟ ಹೆಚ್ಚಾಗುತ್ತದೆ.
ಯೋಗಾಸನ ಮಾಡುವುದರಿಂದ ಪ್ರಯೋಜನವುಂಟು: ಬ್ರಿಟಿಷ್ ವೈದ್ಯಕೀಯ ಮಂಡಳಿಯ ಮಾಜಿ ಸಂಶೋಧಕ ಮತ್ತು ಸ್ವೀಡನ್‌ನ ಉಪ್ಸಲಾ ವಿಶ್ವವಿದ್ಯಾಲಯದ ಪ್ರೊಫೆಸರ್ ಡಾ. ರಾಮ್ ಎಸ್ ಉಪಾಧ್ಯಾಯ ಅವರು ದೆಹಲಿ ಮತ್ತು ಎನ್‌ಸಿಆರ್‌ನಲ್ಲಿ ವಾಯು ಮಾಲಿನ್ಯದ ಬಗ್ಗೆ ಮಾತನಾಡುತ್ತಾ, ವಾಯುಮಾಲಿನ್ಯ ಬಹಳ ಕಳವಳಕಾರಿಯಾಗಿದೆ. ಪ್ರಸ್ತುತ, ದೆಹಲಿಯ ಪಿಎಂ 2.5 ಸಾಂದ್ರತೆಯ ಮಟ್ಟ 25 ಪಟ್ಟು ಹೆಚ್ಚಾಗಿದೆ. ಆದ್ದರಿಂದ, ಯೋಗ ಆಸನಗಳನ್ನು ಮಾಡುವುದರಿಂದ ದೆಹಲಿಯಲ್ಲಿ ವಾಯು ಮಾಲಿನ್ಯದ ವಿರುದ್ಧ ಹೋರಾಡಲು ಪ್ರಯೋಜನಕಾರಿಯಾಗಲಿದೆ ಎಂದರು.