ETV Bharat / bharat

'ಪದ್ಮಶ್ರೀ' ಪಡೆದು ರಾಷ್ಟ್ರಪತಿ, ಪ್ರಧಾನಿ ಪಾದಗಳಿಗೆ ವಂದಿಸಿದ 125 ವರ್ಷದ ಸ್ವಾಮಿ ಶಿವಾನಂದರು!: ವಿಡಿಯೋ - ಪ್ರಧಾನಿ ಮೋದಿ ಕಾಲಿಗೆ ನಮಸ್ಕರಿಸಿದ ಸ್ವಾಮಿ ಶಿವಾನಂದ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ದೇಶದಲ್ಲಿ ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಗಳು ಸಲ್ಲುತ್ತಿವೆ. ಅಂಥವರ ಸಾಲಿನಲ್ಲಿ ದೇಶದ ಅತ್ಯಂತ ಹಿರಿಯ ವ್ಯಕ್ತಿ ಸ್ವಾಮಿ ಶಿವಾನಂದ ಕೂಡಾ ಒಬ್ಬರು. ಇಂದು ರಾಷ್ಟ್ರಪತಿ ಭವನದಲ್ಲಿ ನಡೆದ ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾದ ಅವರು ಪ್ರಶಸ್ತಿ ಪಡೆಯುವುದಕ್ಕೂ ಮುನ್ನ ರಾಷ್ಟ್ರಪತಿಗಳಿಗೆ ಹಾಗು ಪ್ರಶಸ್ತಿ ಪಡೆದ ನಂತರ ಪ್ರಧಾನಿ ಮೋದಿ ಕಾಲಿಗೆ ನಮಸ್ಕರಿಸಿದರು.

Yoga Legend Swami Sivananda Receiving Padma Shri

author img

By

Published : Mar 21, 2022, 7:28 PM IST

ನವದೆಹಲಿ: 2022ನೇ ಸಾಲಿನ ದೇಶದ ಅತ್ಯುನ್ನತ ಪದ್ಮ ಪ್ರಶಸ್ತಿಗಳನ್ನು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ರಾಷ್ಟ್ರಪತಿ ಭವನದಲ್ಲಿ ಪ್ರದಾನ ಮಾಡಿದರು. ಈ ವೇಳೆ ಪ್ರಶಸ್ತಿ ಸ್ವೀಕಾರ ಮಾಡಿರುವ 125 ವರ್ಷದ ಸ್ವಾಮಿ ಶಿವಾನಂದರ ಹೃದಯಸ್ಪರ್ಶಿ ವಿಡಿಯೋ ಎಲ್ಲರ ಮನಗೆದ್ದಿದೆ.

ಪದ್ಮಶ್ರೀ ಪಡೆದು ನಮೋ ಕಾಲಿಗೆ ನಮಸ್ಕರಿಸಿದ 125 ವರ್ಷದ ಸ್ವಾಮಿ ಶಿವಾನಂದರು.

ಎಲೆಮರೆ ಕಾಯಿಯಂತಿದ್ದ 125 ವರ್ಷದ ಸ್ವಾಮಿ ಶಿವಾನಂದ ಉತ್ತರ ಪ್ರದೇಶದವರಾಗಿದ್ದು, ಯೋಗದಲ್ಲಿ ಇವರ ಮೇರು ಸಾಧನೆ ಗುರುತಿಸಿ ಮೋದಿ ಸರ್ಕಾರ ಪದ್ಮಶ್ರೀ ಘೋಷಣೆ ಮಾಡಿತ್ತು. ಇಂದು ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆದುಕೊಳ್ಳಲು ಬಂದಿದ್ದ ಅವರು, ಎಲ್ಲರ ಹೃದಯ ಗೆದ್ದರು.

ಇದನ್ನೂ ಓದಿ: ಪದ್ಮ ಪ್ರಶಸ್ತಿ 2022 : ಸಿಡಿಎಸ್‌ ಜ.ಬಿಪಿನ್‌ ರಾವತ್‌ಗೆ ಮರಣೋತ್ತರ ಪದ್ಮ ವಿಭೂಷಣ ; ಪುತ್ರಿಯರಿಗೆ ಪ್ರಶಸ್ತಿ ಪ್ರದಾನ

ಪ್ರಶಸ್ತಿ ಪಡೆದುಕೊಳ್ಳಲು ಅವರ ಹೆಸರು ಘೋಷಣೆ ಮಾಡುತ್ತಿದ್ದಂತೆ ಎದ್ದು ನಿಂತು ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್​ ಅವರಿಗೆ ನಮಸ್ಕರಿಸಿರುವ ದೇಶದ ಅತ್ಯಂತ ಹಿರಿಯ ವ್ಯಕ್ತಿ, ಪ್ರಶಸ್ತಿ ಪಡೆದುಕೊಂಡ ನಂತರ ಸಹ ಸಿಬ್ಬಂದಿಯನ್ನು ಲೆಕ್ಕಿಸದೇ ಮೋದಿ ಅವರ ಬಳಿ ತೆರಳಿ ಅವರಿಗೆ ನಮಸ್ಕಾರ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಮೋದಿ ಕೂಡಾ ನಮಸ್ಕಾರ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.