ಶ್ರೀನಗರ (ಜಮ್ಮು ಕಾಶ್ಮೀರ): ಕಣಿವೆ ನಾಡಿನ ಹಲವೆಡೆ ಹಿಮಪಾತದ ಸೂಚನೆ ಸಿಕ್ಕಿದ್ದು, ವಿಪತ್ತು ನಿರ್ವಹಣಾ ಪ್ರಾಧಿಕಾರ ಕೆಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿ ಎಚ್ಚರಿಕೆ ನೀಡಿದೆ.
ರಜೌರಿ, ರಾಮ್ಬನ್, ಕಿಶ್ತ್ವಾರ್, ಬಾರಾಮುಲ್ಲಾ, ಕುಪ್ವಾರಾ, ಬಂಡಿಪೋರಾ ಮತ್ತು ಗಂದೇರ್ಬಲ್ ಜಿಲ್ಲೆಗಳಲ್ಲಿ ಎಚ್ಚರಿಕೆ ನೀಡಲಾಗಿದ್ದು, ಮುಂದಿನ ಕೆಲವು ದಿನಗಳಲ್ಲಿ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಹಾಗೂ ಹಿಮ ಸುರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಓದಿ: ಹೆಚ್ಚುತ್ತಿರುವ ಜಾಗತಿಕ ಉಷ್ಣಾಂಶ: ಸಾವುಗಳಿಗೆ ಹವಾಮಾನ ಬದಲಾವಣೆ ಕಾರಣವೇ?
ಡಿಸೆಂಬರ್ 7ರಿಂದ 9ರವರೆಗೆ ಲಡಾಖ್, ಗಿಲ್ಗಿಟ್-ಬಾಲ್ಟಿಸ್ತಾನ, ಮುಝಾಫ್ಪರ್ಬಾದ್ ಮುಂತಾದ ಸ್ಥಳಗಳಲ್ಲಿ ಪಶ್ಚಿಮ ಭಾಗದಲ್ಲಿ ವಾತಾವರಣದ ಏರುಪೇರಿನಿಂದಾಗಿ ಭಾರಿ ಮಳೆ ಅಥವಾ ಹಿಮ ಸುರಿಯುವ ಸಾಧ್ಯತೆ ಇದೆ ಎಂದು ಇಲಾಖೆ ಟ್ವೀಟ್ ಮಾಡಿದೆ.
ನವೆಂಬರ್ 9ರಂದು ಝೋಜಿಲಾ ಕಣಿವೆಯಲ್ಲಿ ಹಿಮಪಾತವಾಗಿ ಐದು ಮಂದಿ ಸಿಲುಕಿದ್ದು, ಗಡಿ ರಸ್ತೆಗಳ ಸಂಘಟನೆ (ಬಾರ್ಡರ್ ರೋಡ್ ಆರ್ಗನೈಸೇನ್ ) ಅವರನ್ನ ರಕ್ಷಿಸಿತ್ತು. ಈಗ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಸೈನಿಕರು ಹಾಗೂ ಅಲ್ಲಿನ ನಾಗರಿಕರಿಗೆ ಪ್ರತಿಕೂಲವಾಗಿ ಪರಿಣಮಿಸಲಿದೆ.