ETV Bharat / bharat

ಪೋಲಿಯೋ ಲಸಿಕೆ ಬದಲಿಗೆ ಸ್ಯಾನಿಟೈಸರ್ ಹಾಕಿದ್ದ ಅಧಿಕಾರಿಗಳ ವಿರುದ್ಧ ಮಹಾ ಆರೋಗ್ಯ ಸಚಿವ ಗರಂ - ಪೋಲಿಯೋ ಲಸಿಕೆ ಬದಲಿಗೆ ಸ್ಯಾನಿಟೈಸರ್ ಹಾಕಿದ್ದ ಅಧಿಕಾರಿಗಳ ವಿರುದ್ಧ ಮಹಾ ಆರೋಗ್ಯ ಸಚಿವ ಗರಂ

ರಾಷ್ಟ್ರೀಯ ಪಲ್ಸ್​ ಪೋಲಿಯೋ ಕಾರ್ಯಕ್ರಮದ ಚಾಲನೆಯ ನಿಮಿತ್ತ ಭಾನುವಾರ ಬೆಳಗ್ಗೆ ಗ್ರಾಮ ಪಂಚಾಯತ್ ಪ್ರದೇಶದ ಮಕ್ಕಳಿಗೆ ಪೋಲಿಯೋ ಹನಿ ಹಾಕಬೇಕಿತ್ತು. ಅಲ್ಲಿ 12 ಮಕ್ಕಳಿಗೆ ಪೊಲೀಯೋ ಹನಿ ಹಾಕುವ ಬದಲಿಗೆ ಹ್ಯಾಂಡ್​ ಸ್ಯಾನಿಟೈಸರ್ ಹನಿಯನ್ನು ಹಾಕಿಲಾಗಿದೆ.

Yavatmal sanitiser incident 'unforgivable mistake', says Maharashtra health minister
ಪೋಲಿಯೋ ಲಸಿಕೆ ಬದಲಿಗೆ ಸ್ಯಾನಿಟೈಸರ್ ಹಾಕಿದ್ದ ಅಧಿಕಾರಿಗಳ ವಿರುದ್ಧ ಮಹಾ ಆರೋಗ್ಯ ಸಚಿವ ಗರಂ
author img

By

Published : Feb 3, 2021, 12:00 PM IST

ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರದ ಯಾವತ್ಮಾಲ್​​​ ಪ್ರದೇಶದಲ್ಲಿ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಬದಲಿಗೆ ಹ್ಯಾಂಡ್ ಸ್ಯಾನಿಟೈಸರ್ ಹಾಕಲಾಗಿತ್ತು. ಇದರಿಂದ ಮಕ್ಕಳು ಅಸ್ತವ್ಯಸ್ತಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಒಟ್ಟು 12 ಮಕ್ಕಳಿಗೆ ಸ್ಯಾನಿಟೈಸರ್​ ಅನ್ನು ಪೋಲಿಯೋ ಹನಿ ರೀತಿಯಲ್ಲಿ ಹಾಕಲಾಗಿತ್ತು.

ಈ ಘಟನೆಯನ್ನ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಖಂಡಿಸಿದ್ದಾರೆ. "ಪೋಲಿಯೊ ಹನಿಗಳ ಬದಲಿಗೆ ಮಕ್ಕಳಿಗೆ ಸ್ಯಾನಿಟೈಸರ್ ನೀಡುವುದು ಕ್ಷಮಿಸಲಾಗದ ತಪ್ಪು. ಸಂಬಂಧಪಟ್ಟ ಅಂಗನವಾಡಿ ಕಾರ್ಮಿಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ" ಎಂದು ಹೇಳಿದರು.

ರಾಷ್ಟ್ರೀಯ ಪಲ್ಸ್​ ಪೋಲಿಯೋ ಕಾರ್ಯಕ್ರಮದ ಚಾಲನೆಯ ನಿಮಿತ್ತ ಭಾನುವಾರ ಬೆಳಗ್ಗೆ ಗ್ರಾಮ ಪಂಚಾಯತ್ ಪ್ರದೇಶದ ಮಕ್ಕಳಿಗೆ ಪೋಲಿಯೋ ಹನಿ ಹಾಕಬೇಕಿತ್ತು. ಅಲ್ಲಿ 12 ಮಕ್ಕಳಿಗೆ ಪೊಲೀಯೋ ಹನಿ ಹಾಕುವ ಬದಲಿಗೆ ಹ್ಯಾಂಡ್​ ಸ್ಯಾನಿಟೈಸರ್ ಹನಿಯನ್ನು ಹಾಕಿಲಾಗಿದೆ. ಹೀಗೆ ಹ್ಯಾಂಡ್ ಸ್ಯಾನಿಟೈಸರ್ ಸೇವಿಸಿದ ಮಕ್ಕಳು ತಡರಾತ್ರಿ ವಾಂತಿ ಮಾಡಿಕೊಳ್ಳಲು ಶುರು ಮಾಡಿದವು. ಆಗ ಗಾಬರಿಗೊಂಡ ಪೋಷಕರು ಕೂಡಲೇ ಆ ಮಕ್ಕಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಸದ್ಯ ಮಕ್ಕಳ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.

ಸೋಮವಾರ ನಡೆದ ಘಟನೆಗೆ ಸಂಬಂಧಿಸಿದಂತೆ ಆರೋಗ್ಯ ಕಾರ್ಯಕರ್ತ, ವೈದ್ಯ, ಆಶಾ ಕಾರ್ಯಕರ್ತ ಸೇರಿದಂತೆ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ಓದಿ : 'ಮಯನ್ಮಾರ್​ನಲ್ಲಿ ಭಾರತದ ರಾಯಭಾರಿ ಸುರಕ್ಷಿತ'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.