ನವದೆಹಲಿ : ವಿಕೆಟ್ ಕೀಪರ್ ಹಾಗೂ ಬ್ಯಾಟ್ಸಮನ್ ವೃದ್ಧಿಮಾನ್ ಸಾಹಾ ಕೊರೊನಾ ವೈರಸ್ ಕಾಯಿಲೆಯಿಂದ ಚೇತರಿಸಿಕೊಂಡಿದ್ದು, ಮುಂದಿನ ತಿಂಗಳ ತೆರಳುವ ಇಂಗ್ಲೆಂಡ್ ಪ್ರವಾಸಕ್ಕೆ ಫಿಟ್ ಆಗಿದ್ದಾರೆ.
ದೆಹಲಿಯ ಹೋಟೆಲೊಂದರಲ್ಲಿ 15 ದಿನಗಳ ಕಾಲ ಪ್ರತ್ಯೇಕವಾಸದಲ್ಲಿದ್ದ ಸಾಹಾ, ಸದ್ಯ ಕೋಲ್ಕತಾಗೆ ಬಂದಿದ್ದಾರೆ. ಅವರು ಮುಂದಿನ ದಿನಗಳಲ್ಲಿಯೂ ಫಿಟ್ ಆಗಿರಬೇಕೆಂಬ ಷರತ್ತಿನ ಮೇಲೆ ಅವರನ್ನು ಇಂಗ್ಲೆಂಡ್ ಪ್ರವಾಸಕ್ಕೆ ತೆರಳಲಿರುವ ಭಾರತ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
36 ವರ್ಷದ ಸಾಹಾ, ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಆಡುತ್ತಿರುವ ಸಮಯದಲ್ಲಿ ಅವರಿಗೆ ಸೋಂಕು ತಗುಲಿತ್ತು.
ಭಾರತ ಕ್ರಿಕೆಟ್ ತಂಡವು ಸೌತಾಂಪ್ಟನ್ನಲ್ಲಿ ಜೂನ್ 18ರಂದು ನ್ಯೂಜಿಲೆಂಡ್ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ನಲ್ಲಿ ಆಡಲಿದೆ. ನಂತರ ಆಗಸ್ಟ್ನಲ್ಲಿ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ.
ಅನುಭವಿ ಆಟಗಾರನಾದ ವೃದ್ಧಿಮಾನ ಸಾಹಾ ಈವರೆಗೆ ಒಟ್ಟು 38 ಟೆಸ್ಟ್ ಮ್ಯಾಚ್ ಆಡಿದ್ದು, 29.09 ಸರಾಸರಿಯಲ್ಲಿ 1251 ರನ್ ಗಳಿಸಿದ್ದಾರೆ. 52 ಇನ್ನಿಂಗ್ಸ್ಗಳಲ್ಲಿ ಮೂರು ಶತಕ ಹಾಗೂ ಐದು ಅರ್ಧ ಶತಕಗಳನ್ನು ಸಾಹಾ ಬಾರಿಸಿದ್ದಾರೆ.