ಹೈದರಾಬಾದ್: ವಿಶ್ವದ ಅತಿ ದೊಡ್ಡ ಕ್ರಿಕೆಟ್ ಬ್ಯಾಟ್, ಗಿನ್ನಿಸ್ ವಿಶ್ವ ದಾಖಲೆ ಪ್ರಮಾಣಪತ್ರ ನೀಡಿರುವ ಕ್ರಿಕೆಟ್ ಬ್ಯಾಟ್ ಅನ್ನು ಹೈದರಾಬಾದ್ನಲ್ಲಿ ಪ್ರದರ್ಶನಕ್ಕಿಡಲಾಗಿದೆ. ಈ ಬ್ಯಾಟ್ಅನ್ನು ತೆಲಂಗಾಣ ಪುರಸಭೆಯ ವಿಶೇಷ ಮುಖ್ಯ ಕಾರ್ಯದರ್ಶಿ ಅರವಿಂದ್ ಕುಮಾರ್ ಮತ್ತು ಐಟಿ ಮುಖ್ಯ ಕಾರ್ಯದರ್ಶಿ ಜಯೇಶ್ ರಂಜನ್ ಅವರು ಟ್ಯಾಂಕ್ ಬಂಡ್ ಮೇಲೆ ಅನಾವರಣಗೊಳಿಸಿದರು.
ತೆಲಂಗಾಣ ಸರ್ಕಾರಕ್ಕೆ ಪಾನೀಯ ಕಂಪೆನಿ ಪೆರ್ನೊಡ್ ರಿಚರ್ಡ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಈ ಕ್ರಿಕೆಟ್ ಬ್ಯಾಟನ್ನು ಉಡುಗೊರೆಯಾಗಿ ನೀಡಿದೆ. ಈ ಬ್ಯಾಟ್ 56.1 ಅಡಿ ಉದ್ದ ಮತ್ತು 9 ಸಾವಿರ ಕೆಜಿ ತೂಕವಿದೆ. ನವೆಂಬರ್ 15ರವರೆಗೆ ಇದನ್ನು ಟ್ಯಾಂಕ್ ಬಂಡ್ನಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತಿದ್ದು, ಸಂಡೆ-ಫಂಡೆ ಕಾರ್ಯಕ್ರಮಕ್ಕೆ ಇದು ಅತ್ಯಾಕರ್ಷಣೆಯಾಗಿದೆ. ನಂತರ ಉಪ್ಪಲ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಪ್ರದರ್ಶನಕ್ಕಿಡಲಾಗುತ್ತದೆ.
ಇದನ್ನೂ ಓದಿ: 14 ವರ್ಷಗಳ ನಂತರ ಬೆಂಕಿ ಪೊಟ್ಟಣದ ಬೆಲೆ ಏರಿಕೆ: ದ್ವಿಗುಣಗೊಳ್ಳಲಿದೆ ಮ್ಯಾಚ್‌ಬಾಕ್ಸ್ ರೇಟ್
ಐಸಿಸಿ ಪುರುಷರ ಟಿ20 ವಿಶ್ವಕಪ್ ಸಮಯದಲ್ಲಿ ಈ ಕ್ರಿಕೆಟ್ ಬ್ಯಾಟ್ಅನ್ನು ಅನಾವರಣಗೊಳಿಸಲಾಗಿದ್ದು, ಪೆರ್ನೊಡ್ ರಿಚರ್ಡ್ ಈ ಬ್ಯಾಟ್ ಅನ್ನು ಭಾರತೀಯ ಕ್ರಿಕೆಟ್ ತಂಡಕ್ಕೆ ಸಮರ್ಪಿಸಿದರು. ಪಾಪ್ಲರ್ ಮರದಿಂದ ಇದನ್ನು ತಯಾರಿಸಲಾಗಿದ್ದು, ಒಂದು ತಿಂಗಳ ಕಾಲ ಇದನ್ನು ತಯಾರಿಸಲಾಗಿದೆ. ಸಮಾರಂಭದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಉಪಸ್ಥಿತರಿದ್ದರು.