ETV Bharat / bharat

ವಿಶ್ವದ 6.3 ಕೋಟಿ ಕೊರೊನಾ ಸೋಂಕಿತರಲ್ಲಿ 4.4 ಕೋಟಿ ಮಂದಿ ಗುಣಮುಖ

author img

By

Published : Dec 1, 2020, 4:04 PM IST

ಪ್ರಪಂಚದಲ್ಲಿ ಈಗಾಗಲೇ 14,74,213 ಜನರು ಕೋವಿಡ್​ಗೆ ಬಲಿಯಾಗಿದ್ದಾರೆ. ಇದೀಗ ಎಲ್ಲರೂ ಕೋವಿಡ್​ ಲಸಿಕೆಯ ನಿರೀಕ್ಷೆಯಲ್ಲಿದ್ದಾರೆ. ಇನ್ನು ಕೆಲವೇ ವಾರಗಳಲ್ಲಿ ಕೊರೊನಾ ಲಸಿಕೆ ಲಭ್ಯವಾಗಲಿದೆ ಎಂದು ಬ್ರಿಟನ್​ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ..

Worldover corona cases and deaths
ವಿಶ್ವದ 6.3 ಕೋಟಿ ಕೊರೊನಾ ಸೋಂಕಿತರಲ್ಲಿ 4.4 ಕೋಟಿ ಮಂದಿ ಗುಣಮುಖ

ಹೈದರಾಬಾದ್​ : ಜಗತ್ತಿನಲ್ಲಿ ಬರೋಬ್ಬರಿ 6,36,07,081 ಜನರಿಗೆ ಕಿಲ್ಲರ್​ ಕೊರೊನಾ ವೈರಸ್​ ಅಂಟಿದ್ದು, 14,74,213 ಸೋಂಕಿತರು ಮೃತಪಟ್ಟಿದ್ದಾರೆ. ಆದರೆ, ಸೋಂಕಿತರ ಪೈಕಿ 4,40,00,766 ಮಂದಿ ಗುಣಮುಖರಾಗಿದ್ದಾರೆ.

ಇಂಗ್ಲೆಂಡ್​​​ನಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಔಷಧ ತಯಾರಿಕೆ ಸಂಸ್ಥೆ ಅಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿರುವ ಕೋವಿಡ್​-19 ಲಸಿಕೆ ಇನ್ನು ಕೆಲವೇ ವಾರಗಳಲ್ಲಿ ಲಭ್ಯವಾಗಲಿದೆ ಎಂದು ಬ್ರಿಟನ್​ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.

ಕೊರೊನಾ ಪ್ರಕರಣ ಹಾಗೂ ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 1,39,20,038 ಇದ್ದು, ಮೃತರ ಸಂಖ್ಯೆ 2,74,332ಕ್ಕೆ ಏರಿದೆ. ಕೇಸ್​ಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಈವರೆಗೆ 94,63,254 ಕೇಸ್‌ ಪತ್ತೆಯಾಗಿವೆ. 1,37,659 ಜನರು ವೈರಸ್​ಗೆ ಬಲಿಯಾಗಿದ್ದಾರೆ. ಮೂರನೇ ಸ್ಥಾನದಲ್ಲಿರುವ ಬ್ರೆಜಿಲ್​​ನಲ್ಲಿ 63,36,278 ಪ್ರಕರಣ ಹಾಗೂ 1,73,165 ಸಾವು ವರದಿಯಾಗಿವೆ.

4ನೇ ಸ್ಥಾನದಲ್ಲಿರುವ ರಷ್ಯಾದಲ್ಲಿ 22,95,654 ಕೇಸ್​​ಗಳಿದ್ದು, 39,895 ಜನರು ಸಾವನ್ನಪ್ಪಿದ್ದಾರೆ. ಒಟ್ಟು 218 ರಾಷ್ಟ್ರಗಳು ಕೋವಿಡ್​ ಹೊಡೆತಕ್ಕೆ ಸಿಲುಕಿದ್ದು, ಕೊರೊನಾ​ ಪೀಡಿತ ವಿಶ್ವದ ಟಾಪ್​ 10 ರಾಷ್ಟ್ರಗಳ ಮಾಹಿತಿ ಇಲ್ಲಿದೆ.

Worldover corona cases and deaths
ಗ್ಲೋಬಲ್​ ಕೋವಿಡ್​ 19 ಟ್ರ್ಯಾಕರ್​

ಕೋವಿಡ್​ ಮೊಟ್ಟ ಮೊದಲು ಕಾಣಿಸಿಕೊಂಡು ಅದರಿಂದ ಚೇತರಿಸಿಕೊಂಡಿದ್ದ ಚೀನಾದಲ್ಲಿ ಬೆರಳೆಣಿಕೆಯಷ್ಟು ಕೇಸ್​ ಪತ್ತೆಯಾಗುತ್ತಿವೆ. 2019ರ ಡಿಸೆಂಬರ್​ನಿಂದ ಈವರೆಗೆ ಚೀನಾದಲ್ಲಿ 86,542 ಪ್ರಕರಣ ಹಾಗೂ 4,634 ಸಾವು ವರದಿಯಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.