ETV Bharat / bharat

1939 - 45ರ ಅವಧಿಯಲ್ಲಿ ನಡೆದ ಎರಡನೇ ಮಹಾಯುದ್ಧದ ಒಂದು ಚಿತ್ರಣ

1939 ರಿಂದ 1945 ರವರೆಗೆ ನಡೆದ ಎರಡನೇ ಮಹಾಯುದ್ಧದ ಸಂಪೂರ್ಣ ಚಿತ್ರಣ ಇಲ್ಲಿದೆ.

author img

By

Published : Sep 2, 2021, 8:58 AM IST

World War II At a Glance
World War II At a Glance

ಹೈದರಾಬಾದ್: ಎರಡನೇ ಮಹಾಯುದ್ಧವು 1939 ರಿಂದ 1945 ರವರೆಗೆ ನಡೆದಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಇದರಲ್ಲಿ ಸುಮಾರು 70 ದೇಶಗಳ ಸೇನೆಗಳು ಭಾಗಿಯಾಗಿದ್ದವು. ಈ ಯುದ್ಧದಲ್ಲಿ ಜಗತ್ತನ್ನು ಮಿತ್ರರಾಷ್ಟ್ರಗಳು ಮತ್ತು ಶತ್ರುರಾಷ್ಟ್ರಗಳನ್ನಾಗಿ ವಿಭಜಿಸಲಾಗಿತ್ತು. ವಿವಿಧ ರಾಷ್ಟ್ರಗಳ ಸುಮಾರು 100 ಮಿಲಿಯನ್ ಸೈನಿಕರು ಯುದ್ಧದಲ್ಲಿ ಭಾಗವಹಿಸಿದ್ದರು.

ಶತ್ರು ರಾಷ್ಟ್ರಗಳು

ಜರ್ಮನಿ, ಜಪಾನ್ ಮತ್ತು ಇಟಲಿಗಳು ‘ಆಕ್ಸಿಸ್ ಪವರ್ಸ್’ ಎಂದು ಕರೆಯಲ್ಪಡುವ ಮೈತ್ರಿಕೂಟವನ್ನು ರಚಿಸಿಕೊಂಡಿದ್ದವು, ಇದರಲ್ಲಿ ಬಲ್ಗೇರಿಯಾ, ಹಂಗೇರಿ, ರೊಮೇನಿಯಾ ಮತ್ತು ಎರಡು ಜರ್ಮನ್ ನಿರ್ಮಿತ ರಾಜ್ಯಗಳಾದ ಕ್ರೊಯೇಷಿಯಾ ಮತ್ತು ಸ್ಲೋವಾಕಿಯಾ ಕೂಡ ಸೇರಿವೆ.

ಜರ್ಮನಿಯ ಅಡಾಲ್ಫ್ ಹಿಟ್ಲರ್, ಡೆರ್ ಫ್ಯೂರರ್, ಜಪಾನ್ ಪ್ರಧಾನಿ ಅಡ್ಮಿರಲ್ ಹಿಡೆಕಿ ಟೋಜೊ ಮತ್ತು ಇಟಲಿಯ ಪ್ರಧಾನಿ ಬೆನಿಟೊ ಮುಸೊಲಿನಿ ಈ ಬಣದ ಪ್ರಮುಖ ನಾಯಕರಾಗಿದ್ದರು.

ಮಿತ್ರ ರಾಷ್ಟ್ರಗಳು

ಅಮೆರಿಕ, ಬ್ರಿಟನ್​, ಫ್ರಾನ್ಸ್​​ ಹಾಗೂ ಸೋವಿಯತ್ ಒಕ್ಕೂಟಗಳನ್ನೊಳಗೊಂಡ ರಾಷ್ಟ್ರಗಳಿಗೆ ಮಿತ್ರ ರಾಷ್ಟ್ರ ಎಂದು ಕರೆಯಲಾಗಿದೆ . ಮುಂದಿನ ದಿನಗಳಲ್ಲಿ ಈ ಕೂಟಕ್ಕೆ(1939 -1944 ರ ಅವಧಿಯಲ್ಲಿ) ಸುಮಾರು 50 ರಾಷ್ಟ್ರಗಳು ಸೇರ್ಪಡೆಗೊಂಡವು.

ಇದರ ಜೊತೆಗೆ, 1945 ರ ವೇಳೆಗೆ ಆಸ್ಟ್ರೇಲಿಯಾ, ಬೆಲ್ಜಿಯಂ, ಬ್ರೆಜಿಲ್, ಬ್ರಿಟಿಷ್ ಕಾಮನ್​ವೆಲ್ತ್ ರಾಷ್ಟ್ರಗಳು, ಕೆನಡಾ, ಭಾರತ, ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾ, ಜೆಕೊಸ್ಲೊವಾಕಿಯಾ, ಡೆನ್ಮಾರ್ಕ್, ಫ್ರಾನ್ಸ್, ಗ್ರೀಸ್, ನೆದರ್ಲ್ಯಾಂಡ್ಸ್, ನಾರ್ವೆ, ಪೋಲೆಂಡ್, ಫಿಲಿಪೈನ್ಸ್ ಸೇರಿದಂತೆ ಇನ್ನೂ ಹದಿಮೂರು ರಾಷ್ಟ್ರಗಳು ಸೇರಿಕೊಂಡವು.

ಅಮೆರಿಕ ಅಧ್ಯಕ್ಷ ಫ್ರಾಂಕ್ಲಿನ್ ಡಿ. ರೂಸ್ವೆಲ್ಟ್, ಬ್ರಿಟನ್ ಪ್ರಧಾನಿ ವಿನ್​ಸ್ಟನ್ ಚರ್ಚಿಲ್ ಮತ್ತು ಸೋವಿಯತ್ ಒಕ್ಕೂಟದ ಜನರಲ್ ಜೋಸೆಫ್ ಸ್ಟಾಲಿನ್ ಈ ಬಣದ ಪ್ರಮುಖ ನಾಯಕರು

ಎರಡನೇಯ ಮಹಾಯುದ್ಧದ ಸಾವು - ನೋವುಗಳು

ಎರಡನೇ ಮಹಾಯುದ್ಧವು ಇತಿಹಾಸದಲ್ಲಿ ಅತ್ಯಂತ ಮಾರಕ ಅಂತಾರಾಷ್ಟ್ರೀಯ ಸಂಘರ್ಷವಾಗಿತ್ತು. ಈ ಸಮಯದಲ್ಲಿ ಅಂದಾಜು ಆರು ಮಿಲಿಯನ್ ಯಹೂದಿಗಳನ್ನು ನಾಜಿಗಳು ಕೊಂದಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಯುದ್ಧದಲ್ಲಿ ಅಂದಾಜು 50 ರಿಂದ 55 ಮಿಲಿಯನ್​​ ಜನರು ಹಾಗೂ 21 ರಿಂದ 25 ಮಿಲಿಯನ್ ಯೋಧರು ಮೃತಪಟ್ಟರು. ಲಕ್ಷಾಂತರ ಜನರು ಗಾಯಗೊಂಡರು.

ವಿವಿಧ ದೇಶಗಳ ಸೈನಿಕರ ಸಾವು - ನೋವುಗಳು -1939 ರಿಂದ 1945

  • ಸೋವಿಯತ್ ಒಕ್ಕೂಟ: ಸಾವು- 7,500,000, ಗಾಯಾಳುಗಳ ಸಂಖ್ಯೆ 5,000,000
  • ಅಮೆರಿಕ: ಸಾವು 405,399, ಗಾಯಾಳುಗಳ ಸಂಖ್ಯೆ 670,846
  • ಆಸ್ಟ್ರೇಲಿಯಾ: ಸಾವು 23,365, ಗಾಯಾಳುಗಳ ಸಂಖ್ಯೆ 39,803
  • ಆಸ್ಟ್ರಿಯಾ: ಸಾವು 380,000, ಗಾಯಾಳುಗಳ ಸಂಖ್ಯೆ 350,117
  • ಬೆಲ್ಜಿಯಂ: ಸಾವು 7,760, ಗಾಯಾಳುಗಳ ಸಂಖ್ಯೆ 14,500
  • ಬಲ್ಗೇರಿಯಾ: ಸಾವು 10,000, ಗಾಯಾಳುಗಳ ಸಂಖ್ಯೆ 21,878
  • ಕೆನಡಾ: ಸಾವು 37,476, ಗಾಯಾಳುಗಳ ಸಂಖ್ಯೆ 53,174
  • ಚೀನಾ: ಸಾವು 2,200,000, ಗಾಯಾಳುಗಳ ಸಂಖ್ಯೆ 1,762,000
  • ಫ್ರಾನ್ಸ್: ಸಾವು 210,671, ಗಾಯಾಳುಗಳ ಸಂಖ್ಯೆ 390,000
  • ಜರ್ಮನಿ: ಸಾವು 3,500,000, ಗಾಯಾಳುಗಳ ಸಂಖ್ಯೆ 7,250,000
  • ಬ್ರಿಟನ್: ಸಾವು 329,208, ಗಾಯಾಳುಗಳ ಸಂಖ್ಯೆ 348,403
  • ಹಂಗೇರಿ: 140,000 ಸಾವು, ಗಾಯಾಳುಗಳ ಸಂಖ್ಯೆ 89,313
  • ಇಟಲಿ: ಸಾವು 77,494, ಗಾಯಾಳುಗಳ ಸಂಖ್ಯೆ 120,000
  • ಜಪಾನ್: ಸಾವು 1,219,000 , ಗಾಯಾಳುಗಳ ಸಂಖ್ಯೆ 295,247
  • ಪೋಲೆಂಡ್: ಸಾವು 320,000 , ಗಾಯಾಳುಗಳ ಸಂಖ್ಯೆ 530,000
  • ರೊಮೇನಿಯಾ: ಸಾವು 300,000, ಗಾಯಗೊಂಡವರ ಸಂಖ್ಯೆ ತಿಳಿದಿಲ್ಲ

ಎರಡನೇ ಮಹಾಯುದ್ಧದ ಪ್ರಮುಖಾಂಶಗಳು

ಮಿತ್ರರಾಷ್ಟ್ರ ಮತ್ತು ಆಕ್ಸಿಸ್ ರಾಷ್ಟ್ರಗಳ ಸಶಸ್ತ್ರ ಪಡೆಗಳಲ್ಲಿ ಸುಮಾರು 70 ಮಿಲಿಯನ್ ಜನರು ಹೋರಾಡಿದರು. ಫಿನ್​​​ಲ್ಯಾಂಡ್ ಅಧಿಕೃತವಾಗಿ ಮಿತ್ರರಾಷ್ಟ್ರಗಳು ಅಥವಾ ಆಕ್ಸಿಸ್ ಬ್ಲಾಕ್‌ಗೆ ಸೇರಲಿಲ್ಲ.

1940ರಲ್ಲಿ ಸಹಾಯದ ಅಗತ್ಯವಿದ್ದಾಗ, ಸೋವಿಯತ್ ಒಕ್ಕೂಟವನ್ನು ಹಿಮ್ಮೆಟ್ಟಿಸಲು ಫಿನ್ಲ್ಯಾಂಡ್ ನಾಜಿ ಜರ್ಮನಿಯೊಂದಿಗೆ ಸೇರಿಕೊಂಡಿತು. 1944ರಲ್ಲಿ ಫಿನ್ ಲ್ಯಾಂಡ್ ಮತ್ತು ಸೋವಿಯತ್ ಒಕ್ಕೂಟದ ನಡುವೆ ಶಾಂತಿ ಒಪ್ಪಂದವಾದಾಗ, ಫಿನ್​​​​ಲ್ಯಾಂಡ್ ಸೋವಿಯತ್ ಒಕ್ಕೂಟವನ್ನು ಸೇರಿಕೊಂಡು ಜರ್ಮನ್​ ವಿರುದ್ಧ ಹೋರಾಡಿತು.

ಯುದ್ಧದ ಸಮಯದಲ್ಲಿ ಸ್ವಿಟ್ಜರ್ಲೆಂಡ್, ಸ್ಪೇನ್, ಪೋರ್ಚುಗಲ್ ಮತ್ತು ಸ್ವೀಡನ್ ರಾಷ್ಟ್ರಗಳು ತಟಸ್ಥವಾಗಿದ್ದವು. ಯುದ್ಧದ ಭೀಕರತೆ ಎಷ್ಟಿತ್ತೆಂದರೆ ಸೋವಿಯತ್ ಒಕ್ಕೂಟವು ತನ್ನ ಏಳು ಮಿಲಿಯನ್ ಸೈನಿಕರನ್ನು ಕಳೆದುಕೊಂಡಿತು.

ಎರಡನೇ ಮಹಾಯುದ್ಧದಲ್ಲಿ ನಾಗರಿಕ ಸಾವು- ನೋವುಗಳ ಸಂಖ್ಯೆ ಎಂದಿಗೂ ತಿಳಿದಿಲ್ಲದಿರಬಹುದು. ಈ ಸಮಯದಲ್ಲಿ ಹಸಿವು, ನರಮೇಧ, ಸರಣಿ ಬಾಂಬ್ ಸ್ಫೋಟಗಳಿಂದಲೂ ಹೆಚ್ಚಿನ ಸಾವು - ನೋವುಗಳು ಸಂಭವಿಸಿದವು. ಯುದ್ಧದ ಸಮಯದಲ್ಲಿ ಸುಮಾರು ಆರು ಮಿಲಿಯನ್​ ಯಹೂದಿಗಳನ್ನು ನಾಜಿ ಪಡೆ ಕೊಂದಿದೆ ಎನ್ನಲಾಗಿದೆ.

ಲೆಂಡ್ - ಲೀಸ್ ಆಕ್ಟ್ ಜಾರಿಗೆ

ಶತ್ರುರಾಷ್ಟ್ರಗಳ ವಿರುದ್ಧ ಹೋರಾಡುವ ಯಾವುದೇ ದೇಶಕ್ಕೆ ಶಸ್ತ್ರಾಸ್ತ್ರಗಳು, ಸಲಕರಣೆಗಳು ಅಥವಾ ಕಚ್ಚಾ ವಸ್ತುಗಳನ್ನು ಸಾಲ ನೀಡಲು ಅಮೆರಿಕ ಲೆಂಡ್-ಲೀಸ್ ಆಕ್ಟ್​ ಅನ್ನು ಜಾರಿಗೆ ತಂದಿತು. ಈ ಕಾಯ್ದೆ ಜಾರಿ ಬಳಿಕ 38 ರಾಷ್ಟ್ರಗಳು ಅಮೆರಿಕದಿಂದ 50 ಬಿಲಿಯನ್​ ಸಾಲ ಪಡೆದವು.

1948 ರಲ್ಲಿ ಅಮೆರಿಕ, ಯುದ್ಧ - ಹಾನಿಗೊಳಗಾದ ಯುರೋಪ್​ ಅನ್ನು ಪುನರ್​​ನಿರ್ಮಾಣ ಮಾಡಲು ಮಾರ್ಷಲ್ ಯೋಜನೆಯನ್ನು ರಚಿಸಿತು. ಇದರಡಿ, 18 ದೇಶಗಳು13 ಬಿಲಿಯನ್ ಡಾಲರ್​ ಮೊತ್ತದ ಆಹಾರ, ಯಂತ್ರೋಪಕರಣಗಳು ಮತ್ತು ಇತರ ಸರಕುಗಳನ್ನು ಪಡೆದುಕೊಂಡವು.

ಎರಡನೇ ಮಹಾಯುದ್ಧದ ಸಂಕ್ಷಿಪ್ತ ಘಟನೆಗಳು

ಸೆಪ್ಟೆಂಬರ್ 1, 1939 - ಪೋಲೆಂಡ್ ಮೇಲೆ ಜರ್ಮನಿ ದಾಳಿ. ಡೆನ್ಮಾರ್ಕ್, ಲಕ್ಸೆಂಬರ್ಗ್, ನೆದರ್ಲ್ಯಾಂಡ್ಸ್, ನಾರ್ವೆ, ಬೆಲ್ಜಿಯಂ ಮತ್ತು ಫ್ರಾನ್ಸ್ ಶೀಘ್ರದಲ್ಲೇ ಜರ್ಮನ್ ನಿಯಂತ್ರಣಕ್ಕೆ ಬಂದವು.

ಜೂನ್ 10, 1940 - ಬ್ರಿಟನ್ ಮತ್ತು ಫ್ರಾನ್ಸ್ ವಿರುದ್ಧ ಯುದ್ಧ ಘೋಷಿಸುವ ಮೂಲಕ ಇಟಲಿ ಜರ್ಮನಿಯ ಬಣ ಸೇರಿತು. ಈ ಮಧ್ಯೆ ಹೋರಾಟವು ಗ್ರೀಸ್ ಮತ್ತು ಉತ್ತರ ಆಫ್ರಿಕಾಕ್ಕೆ ಹರಡಿತು.

ಜೂನ್ 14, 1940 - ಜರ್ಮನ್ ಪಡೆಗಳು ಪ್ಯಾರಿಸ್‌ಗೆ ತೆರಳಿದವು.

ಜುಲೈ 1940 ರಿಂದ ಸೆಪ್ಟೆಂಬರ್ 1940 - ಜರ್ಮನಿ ಮತ್ತು ಬ್ರಿಟನ್ ಆಂಗ್ಲ ಕರಾವಳಿಯಲ್ಲಿ ವೈಮಾನಿಕ ಯುದ್ಧ

ಸೆಪ್ಟೆಂಬರ್ 7, 1940 ರಿಂದ ಮೇ 1941 - ಲಂಡನ್ ಮೇಲೆ ವಾಯುದಾಳಿಗೆ ಪ್ರತಿಕ್ರಿಯೆಯಾಗಿ, ಜರ್ಮನ್ನರು ಬ್ಲಿಟ್ಜ್ ಬಾಂಬ್ ದಾಳಿ ನಡೆಸಿದರು.

ಜೂನ್ 22, 1941 - ಜರ್ಮನಿ ಸೋವಿಯತ್ ಒಕ್ಕೂಟವನ್ನು ಆಕ್ರಮಿಸಿತು.

ಡಿಸೆಂಬರ್ 7, 1941 - ಜಪಾನ್ ಹವಾಯಿಯ ಪರ್ಲ್ ಹಾರ್ಬರ್​​ನಲ್ಲಿ ಅಮೆರಿಕ ನೌಕಾಪಡೆಯ ನೆಲೆಯ ಮೇಲೆ ದಾಳಿ ಮಾಡಿ, ಅದರ ಅರ್ಧಕ್ಕಿಂತ ಹೆಚ್ಚು ವಿಮಾನಗಳನ್ನು ನಾಶಮಾಡಿತು. ಎಲ್ಲ ಎಂಟು ಯುದ್ಧನೌಕೆಗಳನ್ನು ಹಾನಿಗೊಳಿಸಿತು. ಜಪಾನ್ ಫಿಲಿಪೈನ್ಸ್‌ನ ಕ್ಲಾರ್ಕ್ ಮತ್ತು ಇಬಾ ವಾಯುನೆಲೆಗಳ ಮೇಲೆ ದಾಳಿ ಮಾಡಿ, ಅಲ್ಲಿನ ಅರ್ಧಕ್ಕಿಂತಲೂ ಹೆಚ್ಚಿನ ಅಮೆರಿಕ ಮಿಲಿಟರಿ ವಿಮಾನಗಳನ್ನು ನಾಶಪಡಿಸಿತು.

ಡಿಸೆಂಬರ್ 8, 1941 - ಅಮೆರಿಕ ಜಪಾನ್ ಮೇಲೆ ಯುದ್ಧ ಘೋಷಿಸಿತು. ಹಾಂಕಾಂಗ್, ಗುವಾಮ್, ವೇಕ್ ದ್ವೀಪಗಳು, ಸಿಂಗಾಪುರ್ ಮತ್ತು ಬ್ರಿಟನ್​ನ ಕೆಲವು ಪ್ರದೇಶಗಳನ್ನು ಜಪಾನ್ ಆಕ್ರಮಿಸಿತು.

ಡಿಸೆಂಬರ್ 11, 1941 - ಜರ್ಮನಿ ಮತ್ತು ಇಟಲಿ ಅಮೆರಿಕ ವಿರುದ್ಧ ಯುದ್ಧ ಘೋಷಿಸಿತು.

ಫೆಬ್ರವರಿ 1942 - ಜಪಾನ್ ಮಲಯ ಪರ್ಯಾಯ ದ್ವೀಪವನ್ನು ಆಕ್ರಮಿಸಿತು. ಒಂದು ವಾರದೊಳಗೆ ಸಿಂಗಾಪುರ ಶರಣಾಯಿತು.

ಜೂನ್ 1942 - ಹವಾಯಿಯನ್ ದ್ವೀಪಗಳನ್ನು ಆಕ್ರಮಿಸುವ ಜಪಾನ್‌ನ ಯೋಜನೆ ಮಿಡ್ವೇ ದ್ವೀಪದಲ್ಲಿ ಆರಂಭವಾಯಿತು, ಆದರೆ, ಅಮೆರಿಕ ಮಿಷನ್ ಕೋಡ್ ಅನ್ನು ಮುರಿಯಿತು. ಜಪಾನ್ ಮಿಡ್ವೇ ಮೇಲೆ ದಾಳಿ ಮಾಡಿತು. ಯುನೈಟೆಡ್ ಸ್ಟೇಟ್ಸ್​​ನ ಮೊದಲ ವಿಜಯದಲ್ಲಿ ನಾಲ್ಕು ವಿಮಾನವಾಹಕ ನೌಕೆಗಳು ಮತ್ತು 200 ಕ್ಕೂ ಹೆಚ್ಚು ವಿಮಾನಗಳು ಮತ್ತು ಪೈಲಟ್​ಗಳನ್ನು ಕಳೆದುಕೊಂಡಿತು.

ಆಗಸ್ಟ್ 19, 1942 - ಸ್ಟಾಲಿನ್​ಗ್ರೇಡ್ ಯುದ್ಧ ಪ್ರಾರಂಭ.

ಆಗಸ್ಟ್ 1942 ರಿಂದ ಫೆಬ್ರವರಿ 1943 - ಅಮೆರಿಕದ ಪಡೆಗಳು ಪೆಸಿಫಿಕ್ ದ್ವೀಪವಾದ ಗ್ವಾಡಾಲ್ಕಾನಲ್‌ಗಾಗಿ ಹೋರಾಡುತ್ತವೆ.

ಫೆಬ್ರವರಿ 1, 1943 - ಜರ್ಮನಿಯ ಸೈನ್ಯವು ಸ್ಟಾಲಿನ್‌ಗ್ರಾಡ್‌ನಲ್ಲಿ ಶರಣಾಯಿತು.

ಜುಲೈ 10, 1943 - ಮಿತ್ರ ಪಡೆಗಳು ಇಟಲಿಯಲ್ಲಿ ಬಂದಿಳಿದವು.

ಜುಲೈ 25, 1943 - ಇಟಲಿಯ ರಾಜನನ್ನು ಸಂಪೂರ್ಣ ಅಧಿಕಾರಕ್ಕೆ ತರಲಾಯಿತು ಮತ್ತು ಮುಸೊಲಿನಿಯನ್ನು ಪದಚ್ಯುತಗೊಳಿಸಿ, ಬಂಧಿಸಲಾಯಿತು.

ನವೆಂಬರ್ 1943 ರಿಂದ ಮಾರ್ಚ್ 1944 - ಜಪಾನೀಯರಿಂದ ತಮ್ಮ ನೌಕಾಪಡೆಗಳನ್ನು ಹಿಂತೆಗೆದುಕೊಳ್ಳಲು ಅಮೆರಿಕನ್ನರು ಬೌಗೆನ್ವಿಲ್ಲೆಯ ಸೊಲೊಮನ್ ದ್ವೀಪಗಳನ್ನು ಆಕ್ರಮಿಸಿದರು.

ಆಗಸ್ಟ್ 25, 1944 - ಅಮೆರಿಕ ಮತ್ತು ಫ್ರೆಂಚ್ ಪಡೆಗಳು ಪ್ಯಾರಿಸ್ ಅನ್ನು ಸ್ವತಂತ್ರಗೊಳಿಸಿದವು.

ಜನವರಿ 27, 1945 - ಸೋವಿಯತ್ ಪಡೆಗಳು ಪೋಲೆಂಡ್‌ನ ಕ್ರಾಕೋವ್ ಬಳಿಯ ಆಶ್ವಿಟ್ಜ್ ಕ್ಯಾಂಪ್ ಸಂಕೀರ್ಣವನ್ನು ಮುಕ್ತಗೊಳಿಸಿದವು.

ಫೆಬ್ರವರಿ 19 ರಿಂದ ಮಾರ್ಚ್ 26, 1945 - ಅಮೆರಿಕನ್ ಸೈನ್ಯವು ಐವೊ ಜಿಮಾ ದ್ವೀಪಕ್ಕಾಗಿ ಜಪಾನಿಯರ ವಿರುದ್ಧ ಹೋರಾಡುತ್ತದೆ.

ಏಪ್ರಿಲ್ 12, 1945 - ವಾರ್ಮ್ ಸ್ಪ್ರಿಂಗ್ಸ್ ನಲ್ಲಿ ರೂಸ್ವೆಲ್ಟ್ ಜಾರ್ಜಿಯಾ ನಿಧನ. ಉಪಾಧ್ಯಕ್ಷ ಹ್ಯಾರಿ ಟ್ರೂಮನ್ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕಾರ

ಏಪ್ರಿಲ್ 25, 1945 - ಸೋವಿಯತ್ ಪಡೆಗಳು ಬರ್ಲಿನ್​ಗೆ ಮುತ್ತಿಗೆ ಹಾಕಿದವು.

ಏಪ್ರಿಲ್ 28, 1945 - ಮುಸೊಲಿನಿ ಸ್ವಿಟ್ಜರ್​ಲ್ಯಾಂಡ್‌ಗೆ ಪರಾರಿಯಾಗಲು ಪ್ರಯತ್ನಿಸುವಾಗ ಹತ್ಯೆ

ಏಪ್ರಿಲ್ 29, 1945 - ಜರ್ಮನಿಯ ಮ್ಯೂನಿಚ್ ಹೊರಗೆ ಡಚೌ ಸೆರೆ ಶಿಬಿರವನ್ನು ಅಮೆರಿಕದ ಪಡೆಗಳು ಮುಕ್ತಗೊಳಿಸಿದವು.

ಏಪ್ರಿಲ್ 30, 1945 - ಹಿಟ್ಲರ್ ಮತ್ತು ಅವನ ಪತ್ನಿ ಇವಾ ಬ್ರೌನ್ ಆತ್ಮಹತ್ಯೆ ಮಾಡಿಕೊಂಡರು.

ಮೇ 7, 1945 - ಐಸೆನ್‌ಹೋವರ್‌ನ ಪ್ರಧಾನ ಕಚೇರಿಯಲ್ಲಿರುವ ಕೆಂಪು ಶಾಲೆಯ ಮನೆಯಲ್ಲಿ ಜರ್ಮನಿ ಶರಣಾಯಿತು.

ಮೇ 8, 1945 - ಯುರೋಪಿನಲ್ಲಿ ಯುದ್ಧ ಅಧಿಕೃತವಾಗಿ ಮುಗಿಯಿತು. ಈ ದಿನವನ್ನು ಯುರೋಪಿನಲ್ಲಿ ವಿಜಯದ ದಿನವನ್ನಾಗಿ ಆಚರಿಸಲಾಗುತ್ತದೆ. ಏಕೆಂದರೆ ಇದು ಕದನವಿರಾಮ ಜಾರಿಗೆ ಬಂದ ದಿನವಾಗಿದೆ.

ಜುಲೈ 16, 1945 - ನ್ಯೂ ಮೆಕ್ಸಿಕೋದ ಅಲಮೊಗೊರ್ಡೊದಲ್ಲಿ ಪರಮಾಣು ಬಾಂಬ್‌ನ ಮೊದಲ ಪರೀಕ್ಷೆ ಯಶಸ್ವಿ

ಜುಲೈ 29, 1945 - ಜಪಾನ್ ಬೇಷರತ್ತಾಗಿ ಶರಣಾಗದಿದ್ದರೆ, ದೇಶ (ಜಪಾನ್) ನಾಶವಾಗುತ್ತದೆ ಎಂದು ಟ್ರೂಮನ್ ಎಚ್ಚರಿಸಿದರು.

ಆಗಸ್ಟ್ 6, 1945 - ಯುದ್ಧದ ಮೊದಲ ಪರಮಾಣು ಬಾಂಬ್ ಲಿಟಲ್ ಬಾಯ್ ಅನ್ನು ಜಪಾನಿನ ಹಿರೋಷಿಮಾ ನಗರದ ಮೇಲೆ ಎಸೆದು 140,000 ಜನರನ್ನು ಕೊಂದರು.

ಆಗಸ್ಟ್ 9, 1945 - ಹಿರೋಶಿಮಾ ಬಾಂಬ್ ಸ್ಫೋಟದ ನಂತರ ಜಪಾನ್ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಇಲ್ಲ. ನಂತರ ಎರಡನೇ ಪರಮಾಣು ಬಾಂಬ್ ಫ್ಯಾಟ್ ಮ್ಯಾನ್ ನಾಗಸಾಕಿಯ ಮೇಲೆ ಎಸೆದು 80,000 ಜನರನ್ನು ಬಲಿ ತೆಗೆದುಕೊಂಡಿತು.

ಆಗಸ್ಟ್ 14, 1945 - ಪಾಟ್ಸ್‌ಡ್ಯಾಮ್ ಘೋಷಣೆಯ ನಿಯಮಗಳನ್ನು ಒಪ್ಪಿಕೊಳ್ಳಲು ಮತ್ತು ಯುದ್ಧವನ್ನು ಕೊನೆಗೊಳಿಸಲು ಜಪಾನ್ ಅಧಿಕೃತವಾಗಿ ಒಪ್ಪುತ್ತದೆ.

ಸೆಪ್ಟೆಂಬರ್ 2, 1945 - ಟೋಕಿಯೊ ಕೊಲ್ಲಿಯಲ್ಲಿ ಅಮೆರಿಕದ ಮಿಸೌರಿಯಲ್ಲಿ ಜಪಾನ್ ಔಪಚಾರಿಕ ಶರಣಾಗತಿಗೆ ಸಹಿ ಹಾಕಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.