ETV Bharat / bharat

Army Day: ಪ್ರಪಂಚದ ಅತಿ ದೊಡ್ಡ 'ಖಾದಿ ತ್ರಿವರ್ಣ ಧ್ವಜ' ಪ್ರದರ್ಶಿಸಿದ ಭಾರತೀಯ ಸೇನೆ - ಪ್ರಪಂಚದ ಅತಿ ದೊಡ್ಡ ತ್ರಿವರ್ಣ ಧ್ವಜ

ರಾಷ್ಟ್ರೀಯ ಸೇನಾ ದಿನದ ಅಂಗವಾಗಿ ಶನಿವಾರ (ಜ.15)ರಂದು ಜಗತ್ತಿನ ಅತಿ ದೊಡ್ಡ ಭಾರತದ ಖಾದಿ ತ್ರಿವರ್ಣ ಧ್ವಜ ಹಾರಾಡಿದೆ. ಇದರ ಒಟ್ಟು ತೂಕ 1 ಟನ್​​ ಆಗಿದೆ ಎಂಬುದು ಗಮನಾರ್ಹ ಸಂಗತಿ.

World largest national flag
World largest national flag
author img

By

Published : Jan 15, 2022, 10:23 PM IST

ಜೈಸಲ್ಮೇರ್(ರಾಜಸ್ಥಾನ): ಇಂದು 74ನೇ ರಾಷ್ಟ್ರೀಯ ಸೇನಾ ದಿನ. ಈ ಅಂಗವಾಗಿ ಸಂಪೂರ್ಣವಾಗಿ ಖಾದಿಯಿಂದ ತಯಾರಿಸಲ್ಪಟ್ಟಿರುವ ಜಗತ್ತಿನ ಅತಿದೊಡ್ಡ ತ್ರಿವರ್ಣ ಧ್ವಜ ಭಾರತೀಯ ಸೇನೆಯಿಂದ ಅನಾವರಣಗೊಂಡಿದೆ. ರಾಜಸ್ಥಾನದ ಜೈಸಲ್ಮೇರ್​​ ಯುದ್ಧ ವಸ್ತು ಸಂಗ್ರಹಾಲಯದಲ್ಲಿ ಇದನ್ನು ಹಾರಿಸಲಾಗಿದೆ.

ಆರೋಹಣಗೊಂಡಿರುವ ತ್ರಿವರ್ಣ ಧ್ವಜ ಒಟ್ಟು 225 ಅಡಿ ಉದ್ದ, 150 ಅಡಿ ಅಗಲವಿದ್ದು, ಒಂದು ಟನ್​ ತೂಕವಿದೆ. ಈ ಧ್ವಜ ಸುಮಾರು 37 ಸಾವಿರದ 500 ಚದರ್​ ಅಡಿ ವಿಸ್ತಾರ ಹೊಂದಿದೆ. ಖಾದಿ ಗ್ರಾಮೋದ್ಯೋಗ ಆಯೋಗ(Khadi Village Industries Commission) ಇದನ್ನ ನಿರ್ಮಾಣ ಮಾಡಿದೆ ಎಂದು ತಿಳಿದುಬಂದಿದೆ.

ಪ್ರಪಂಚದ ಅತಿ ದೊಡ್ಡ ತ್ರಿವರ್ಣ ಧ್ವಜ ಪ್ರದರ್ಶಿಸಿದ ಭಾರತೀಯ ಸೇನೆ

ರಾಜಸ್ಥಾನದ ಜೈಸಲ್ಮೇರ್​​ ರೈಲು ನಿಲ್ದಾಣ ಮತ್ತು ವಾರ್​ ಮ್ಯೂಸಿಯಂನಲ್ಲಿ ಈಗಾಗಲೇ ಭಾರತದ ಅತಿದೊಡ್ಡ ತ್ರಿವರ್ಣ ಧ್ವಜಗಳು ಹಾರಾಟ ನಡೆಸಿವೆ. ಆದರೆ, ವಾರ್​ ಮ್ಯೂಸಿಯಂನಲ್ಲಿ ಅನಾವರಣಗೊಂಡಿರುವ ವಿಶ್ವದ ಅತಿದೊಡ್ಡ ತ್ರಿವರ್ಣ ಧ್ವಜ ಇದಾಗಿದೆ.

ಇದನ್ನೂ ಓದಿರಿ: ಲೇಹ್​ನಲ್ಲಿ 2 ಸಾವಿರ ಅಡಿ ಎತ್ತರದಲ್ಲಿ ವಿಶ್ವದ ಅತಿದೊಡ್ಡ ಭಾರತದ ತ್ರಿವರ್ಣ ಧ್ವಜ- ವಿಡಿಯೋ

ಲಡಾಖ್​ನ ಲೇಹ್​​ ಪ್ರದೇಶದಲ್ಲಿ ಮಹಾತ್ಮ ಗಾಂಧಿ ಅವರ 152ನೇ ಜನ್ಮದಿನದಂದು ಖಾದಿ ಬಟ್ಟೆಯಿಂದ ತಯಾರಿಸಿದ್ದ ವಿಶ್ವದ ಅತಿದೊಡ್ಡ ತ್ರಿವರ್ಣ ಧ್ವಜವನ್ನು ಹಾರಿಸಲಾಗಿತ್ತು. ಲೇಹ್ ಮತ್ತು ಮುಂಬೈನ ಗೇಟ್ ವೇ ಆಫ್​ ಇಂಡಿಯಾ ಬಳಿಕ ಅತಿದೊಡ್ಡ ಖಾದಿ ತ್ರಿವರ್ಣ ಧ್ವಜ ಹೊಂದಿರುವ ಶ್ರೇಯ ಇದೀಗ ಜೈಸಲ್ಮೇರ್​ಗೆ ಸಲ್ಲುತ್ತದೆ.

75ನೇ ಸ್ವಾತಂತ್ರ್ಯೋತ್ಸವ ಸಂಭ್ರಮ ಹಾಗೂ ಗಾಂಧಿ ಜಯಂತಿ ಆಚರಣೆ ಅಂಗವಾಗಿ ಲಡಾಖ್​ನ ಲೇಹ್​ನಲ್ಲಿ ವಿಶ್ವದ ಅತಿದೊಡ್ಡ ಭಾರತದ ತ್ರಿವರ್ಣ ಧ್ವಜವನ್ನು ಈ ಹಿಂದೆ ಅನಾವರಣಗೊಳಿಸಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.