ETV Bharat / bharat

Women's reservation bill : ಮಹಿಳಾ ಮೀಸಲಾತಿ ಮಸೂದೆ ಸಾಗಿ ಬಂದ ಹಾದಿ

author img

By ETV Bharat Karnataka Team

Published : Sep 19, 2023, 8:30 PM IST

2010ರಲ್ಲಿ ರಾಜ್ಯ ಸಭೆಯಲ್ಲಿ ಅಂಗೀಕಾರ ಪಡೆದಿದ್ದ ಮಹಿಳಾ ಮೀಸಲಾತಿ ಮಸೂದೆಯನ್ನು ಸುಮಾರು 13 ವರ್ಷಗಳ ಬಳಿಕ ಲೋಕಸಭೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಮಂಡಿಸಿದೆ.

womens-reservation-bill-becomes-a-reality-at-last
Women's Reservation Bill : ಮಹಿಳಾ ಮೀಸಲಾತಿ ಮಸೂದೆ ಸಾಗಿ ಬಂದ ಹಾದಿ

ನವದೆಹಲಿ : ಇಂದು ನೂತನ ಸಂಸತ್​ ಭವನದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಲಾಗಿದೆ. ಕಾನೂನು ಸಚಿವ ಅರ್ಜುನ್​ ರಾಮ್​ ಮೇಘವಾಲ್​ ಅವರು ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸಿದರು. ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿ ನಿಗದಿ ಕುರಿತ ಈ ಸಾಂವಿಧಾನಿಕ ಮಸೂದೆಯು ಕಳೆದ 13 ವರ್ಷಗಳಿಂದ ಲೋಕಸಭೆಯಲ್ಲಿ ಅಂಗೀಕಾರ ಪಡೆದಿರಲಿಲ್ಲ. ಇದೀಗ ಮಸೂದೆ ಬಗ್ಗೆ ಸುದೀರ್ಘ ಚರ್ಚೆ ನಡೆಯಲಿದೆ.

ಕಳೆದ 27 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಹಿಳಾ ಮೀಸಲಾತಿ ಮಸೂದೆಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಂಗಳವಾರ ಮಂಡಿಸಿದೆ. ಈ ಮಸೂದೆ ಅಂಗೀಕಾರಕ್ಕೆ 1992ರಿಂದ ಪ್ರಯತ್ನ ನಡೆಯುತ್ತಿದೆಯಾದರೂ, ಇದರ ಅಂಗೀಕಾರಕ್ಕೆ ಸಂವಿಧಾನ ತಿದ್ದುಪಡಿ ಮತ್ತು ರಾಜಕೀಯ ಒಮ್ಮತದ ಕೊರತೆ ಅಂದಿನ ಸರ್ಕಾರಗಳಿಗೆ ಎದುರಾಗಿತ್ತು. ಇದಕ್ಕೂ ಮೊದಲು ಈ ಮಸೂದೆಯನ್ನು ಮಾರ್ಚ್​ 2010ರಲ್ಲಿ ರಾಜ್ಯಸಭೆಯಲ್ಲಿ ಮಂಡಿಸಲಾಗಿತ್ತು. ಆದರೆ ಲೋಕಸಭೆಯಲ್ಲಿ ಇದಕ್ಕೆ ಅಂಗೀಕಾರ ಸಿಗದ ಕಾರಣ ಕಳೆದ 13 ವರ್ಷಗಳಿಂದ ಹಾಗೆಯೇ ಉಳಿದಿತ್ತು.

ಈ ಮಸೂದೆಯ ಬಗ್ಗೆ ತಿಳಿದುಕೊಳ್ಳಬೇಕಾದರೆ ಮೂರು ದಶಕಗಳ ಹಿಂದೆ ಹೋಗಬೇಕಾಗುತ್ತದೆ. 1992ರಲ್ಲಿ ಅಂದಿನ ಪ್ರಧಾನಿ ನರಸಿಂಹರಾವ್​ ಸರ್ಕಾರದ ಆಡಳಿತಾವಧಿಯಲ್ಲಿ ಸಂವಿಧಾನದ 73 ಮತ್ತು 74ನೇ ತಿದ್ದುಪಡಿ ತರುವ ಮೂಲಕ ಪಂಚಾಯತ್​ ರಾಜ್​ ವ್ಯವಸ್ಥೆ ಜಾರಿ ಮಾಡಲಾಯಿತು. ಇದು ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳಾ ಸಶಕ್ತಿಕರಣದ ಬೇಡಿಕೆಗೆ ಬಲ ನೀಡಿತು.

ಈ ಎರಡು ಸಾಂವಿಧಾನಿಕ ತಿದ್ದುಪಡಿಗಳು ಪಂಚಾಯತ್​ ರಾಜ್​ ವ್ಯವಸ್ಥೆಯಲ್ಲಿ ಮೂರನೇ ಒಂದು ಭಾಗದಷ್ಟು ಮಹಿಳಾ ಮೀಸಲಾತಿಗೆ ಕಾರಣವಾದವು. ಆದರೆ ಕಾನೂನು ಸಚಿವಾಲಯವು ರಾಜ್ಯಸಭೆಯ ಸಂಸದೀಯ ಸ್ಥಾಯಿ ಸಮಿತಿಗೆ ಸಲ್ಲಿಸಿದ ಟಿಪ್ಪಣಿಯ ಪ್ರಕಾರ, 1996, 1998 ಮತ್ತು 1999ರಲ್ಲಿ ಕ್ರಮವಾಗಿ ಈ ಮೂರು ಮಸೂದೆಗಳನ್ನು ಸಂಸತ್ತಿನಲ್ಲಿ ಮಂಡಿಸಲಾಯಿತು. ಆದರೆ ಕಾರಣಾಂತರಗಳಿಂದ ಮಸೂದೆಗಳು ಅಂಗೀಕಾರವಾಗಲಿಲ್ಲ.

ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ಒದಗಿಸುವ ವಿಷಯವು ಮೊದಲ ಬಾರಿಗೆ 11ನೇ ಲೋಕಸಭೆಯಲ್ಲಿ ಚರ್ಚೆಯಾಯಿತು. 1996ರ ಸೆಪ್ಟೆಂಬರ್ 12ರಂದು ಸಂವಿಧಾನ 89ಕ್ಕೆ ತಿದ್ದುಪಡಿ ತಂದು ಮಹಿಳಾ ಮೀಸಲಾತಿ ಬಗ್ಗೆ ಚರ್ಚೆ ನಡೆಸಲಾಯಿತು. ಈ ವೇಳೆ ಈ ಮಸೂದೆಯು ಸೂಕ್ಷ್ಮವಾದ ರಾಜಕೀಯ ಸ್ವರೂಪ ಪಡೆಯಿತು. ಇದರಿಂದ ಅಂದಿನ ಪಶ್ಚಿಮ ಬಂಗಾಳದ ಲೋಕಸಭೆ ಸದಸ್ಯರಾಗಿದ್ದ ಗೀತಾ ಮುಖರ್ಜಿ ಅವರ ಅಧ್ಯಕ್ಷತೆಯಲ್ಲಿ ರಚಿಸಿದ್ದ ಸಂಸತ್ತಿನ ಉಭಯ ಸದನಗಳ ಜಂಟಿ ಸಮಿತಿಗೆ ಇದನ್ನು ವಹಿಸಲಾಯಿತು.

ನಂತರ 1996ರ ಡಿಸೆಂಬರ್​ನಲ್ಲಿ ಗೀತಾ ಮುಖರ್ಜಿ ನೇತೃತ್ವದ ಜಂಟಿ ಸಂಸದೀಯ ಸಮಿತಿಯು ಹಲವಾರು ಶಿಫಾರಸ್ಸುಗಳೊಂದಿಗೆ ತನ್ನ ವರದಿಯನ್ನು ಸಲ್ಲಿಸಿದರೂ, ಮಸೂದೆ ಅಂಗೀಕರಿಸಲಾಗಲಿಲ್ಲ. ಜೊತೆಗೆ 11ನೇ ಲೋಕಸಭೆಯ ವಿಸರ್ಜನೆಯೊಂದಿಗೆ ಈ ಮಸೂದೆಯು ಲ್ಯಾಪ್ಸ್​ ಆಗಿತ್ತು. ಬಳಿಕ 12 ನೇ ಲೋಕಸಭೆಯಲ್ಲಿ ಮತ್ತೊಮ್ಮೆ ಮಸೂದೆ ತರುವ ಪ್ರಯತ್ನ ನಡೆಯಿತು. 1998ರಲ್ಲಿ ಸಂವಿಧಾನಕ್ಕೆ 84ನೇ ತಿದ್ದುಪಡಿ ತಂದು ಮಸೂದೆ ಲೋಕಸಭೆಯಲ್ಲಿ ತರಲಾಯಿತು. ಆದರೆ ಇದು ಕೂಡ 12 ನೇ ಲೋಕಸಭೆಯ ವಿಸರ್ಜನೆಯೊಂದಿಗೆ ರದ್ದುಗೊಂಡಿತು.

1999ರ ಡಿಸೆಂಬರ್​ನಲ್ಲಿ 13ನೇ ಲೋಕಸಭೆಯಲ್ಲಿ ಸಂವಿಧಾನ 85ನೇ ತಿದ್ದುಪಡಿ ಮೂಲಕ ಮಸೂದೆಯನ್ನು ಮಂಡಿಸಲಾಯಿತು. ಆದರೆ ರಾಜಕೀಯ ಒಮ್ಮತದ ಕೊರತೆಯಿಂದಾಗಿ ಮಸೂದೆ ಅಂಗೀಕಾರವಾಗಿರಲಿಲ್ಲ. 13ನೇ ಲೋಕಸಭೆ ವಿಸರ್ಜನೆಯೊಂದಿಗೆ ಮಸೂದೆ ರದ್ದುಗೊಂಡಿತು. 2002 -2003ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರವು ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಲು ಪ್ರಯತ್ನಪಟ್ಟಿತು. ಆದರೆ ರಾಜಕೀಯ ಒಮ್ಮತದ ಕೊರತೆಯಿಂದಾಗಿ ಮಸೂದೆ ಮಂಡಿಸಲು ಸಾಧ್ಯವಾಗಲಿಲ್ಲ.

ಬಳಿಕ 2008ರ ಮೇ 06ರಂದು ಸಂವಿಧಾನದ 108ನೇ ತಿದ್ದುಪಡಿ ಮೂಲಕ ಯುಪಿಎ ಸರ್ಕಾರವು ಮಸೂದೆಯನ್ನು ಮಂಡಿಸಿತ್ತು. ಬಳಿಕ ಈ ಮಸೂದೆಯನ್ನು ರಾಜ್ಯಸಭೆಯ ಸಂಸದೀಯ ಸ್ಥಾಯಿ ಸಮಿತಿಗೆ ನೀಡಲಾಗಿತ್ತು. 2009ರ ಡಿಸೆಂಬರ್​ನಲ್ಲಿ ಸ್ಥಾಯಿ ಸಮಿತಿಯ ಅಧ್ಯಕ್ಷೆ ಜಯಂತಿ ನಟರಾಜನ್​ ಅವರು ರಾಜ್ಯಸಭೆ ಮತ್ತು ಲೋಕಸಭೆಗೆ ವರದಿ ಸಲ್ಲಿಸಿದರು. 2010ರ ಮಾರ್ಚ್​ 9ರಂದು ರಾಜ್ಯಸಭೆಯಲ್ಲಿ ಮಸೂದೆಗೆ ಅಂಗೀಕಾರ ಸಿಕ್ಕಿತು.

ಇದೀಗ ಲೋಕಸಭೆಯಲ್ಲಿ ಪೂರ್ಣ ಬಹುಮತ ಪಡೆದಿರುವ ಎನ್​ಡಿಎ ಸರ್ಕಾರ ಇದೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ಎರಡನೇ ಅಧಿಕಾರಾವಧಿಯಲ್ಲಿ ಈ ಮಸೂದೆಯನ್ನು ಜಾರಿಗೆ ತರಲು ಪ್ರಯತ್ನ ಪಡುತ್ತಿದ್ದಾರೆ. 2014 ಮತ್ತು 2019ರ ಎರಡೂ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ತರುವುದಾಗಿ ಹೇಳಿತ್ತು.

ಇದನ್ನೂ ಓದಿ : Women's reservation bill: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದ ಕೇಂದ್ರ ಸರ್ಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.