ETV Bharat / bharat

WPL... ಗುಜರಾತ್​​ ಜೈಂಟ್ಸ್​ಗೆ ಬೃಹತ ಗುರಿ ನೀಡಿದ ಮುಂಬೈ - ಮೊದಲ ಮಹಿಳಾ ಪ್ರೀಮಿಯರ್​ ಲೀಗ್​ ಪಂದ್ಯ

ಇಂದಿನ ಮೊದಲ ಮಹಿಳಾ ಪ್ರಿಮೀಯರ್​ ಲೀಗ್​ ಪಂದ್ಯದಲ್ಲಿ ಮುಂಬೈ ತಂಡ ಗುಜರಾತ್​ ಟೈಟಾನ್ಸ್​ಗೆ 207 ರನ್​ಗಳ ಬೃಹತ್​ ಗುರಿಯನ್ನು ನೀಡಿದೆ. ಇದನ್ನು ಬೆನ್ನತ್ತಿರುವ ಗುಜರಾತ್​​ ಜೈಂಟ್ಸ್​ 61ಕ್ಕೆ 8 ವಿಕೆಟ್​ಗಳನ್ನು ಕಳೆದುಕೊಂಡಿದೆ.

ಗುಜರಾತ್​​ ಜೈಂಟ್ಸ್​ಗೆ ಬೃಹತ ಗುರಿ ನೀಡಿದ ಮುಂಬೈ

author img

By

Published : Mar 4, 2023, 11:04 PM IST

ಮುಂಬೈ: ಗುಜರಾತ್ ಜೈಂಟ್ಸ್ ವಿರುದ್ಧ ನಡೆದ ಮೊದಲ ಮಹಿಳಾ ಪ್ರೀಮಿಯರ್​ ಲೀಗ್​ ಪಂದ್ಯದಲ್ಲಿ ಮುಂಬೈ ತಂಡ 5 ವಿಕೆಟ್​ ನಷ್ಟಕ್ಕೆ 207 ರನ್​ಗಳ ಬೃಹತ್​ ಮೊತ್ತವನ್ನು ಕಲೆ ಹಾಕುವ ಮೂಲಕ ಮೊದಲ ಪಂದ್ಯದಲ್ಲೇ ಅಬ್ಬರಿಸಿದೆ. ಇಲ್ಲಿಯ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ಟಾಸ್​ ಗೆದ್ದ ಗುಜರಾತ್​ ಜೈಂಟ್ಸ್​ ತಂಡ ಮೊದಲಿಗೆ ಬೌಲಿಂಗ್​​​ ಆಯ್ಕೆ ಮಾಡಿಕೊಂಡಿತ್ತು. ಮುಂಬೈ ಪರ ಕ್ರೀಸ್​ಗಿಳಿದು ಮೊದಲು ಬ್ಯಾಟಿಂಗ್​ ಮಾಡಿದ ಹೇಯ್ಲಿ ಮ್ಯಾಥ್ಯೂಸ್ ಬೌಂಡರಿಗಳೊಂದಿಗೆ ಉತ್ತಮ ಆರಂಭ ಒದಗಿಸಿದರು.

ಆದರೆ ವಿಕೆಟ್​ ಕೀಪರ್​ ಮತ್ತು ಬ್ಯಾಟರ್​ ಯಾಸ್ತಿಕಾ ಭಾಟಿಯಾ 8 ಎಸೆತಗಳಲ್ಲಿ ಕೇವಲ 1 ರನ್​ ಕಲೆ ಹಾಕಿ ತನುಜಾ ಕನ್ವರ್​ಗೆ ವಿಕೆಟ್​ ಒಪ್ಪಿಸಿ ಪೆವಿಲಿಯನ್​ ಸೇರಿದರು. ಈ ಮೂಲಕ 2.3 ಓವರಗೆ ತಂಡದ ಮೊತ್ತು 15/1 ಆಗಿತ್ತು. ಬಳಿಕ ಕ್ರೀಸ್​ಗಿಳಿದ ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ನ್ಯಾಟ್-ಸಿವರ್ ಬ್ರಂಟ್, ಹೇಯ್ಲಿ ಮ್ಯಾಥ್ಯೂಸ್ 50 ರನ್​​ಗಳ ಜತೆಯಾಟವಾಡಿದರು.

ಬಳಿಕ 18 ಎಸೆತಗಳಲ್ಲಿ 5 ಬೌಂಡರಿ ಸಮೇತ 23 ರನ್‌ಗಳನ್ನು ಕಲೇ ಹಾಕಿದ್ದ ಬ್ರಂಟ್, ಜಾರ್ಜಿಯಾ ವೇರ್‌ಹ್ಯಾಮ್​ಗೆ ವಿಕೆಟ್​ ಒಪ್ಪಿಸಿ ಹೊರನಡೆದರು. ಈ ಮೂಲಕ ಹೇಯ್ಲಿ ಮ್ಯಾಥ್ಯೂಸ್ ಮತ್ತು ಬ್ರಂಟ್ ಆಟಕ್ಕೆ ಬ್ರೇಕ್​ ಹಾಕಲಾಯಿತು. ಈ ವೇಳೆಗೆ ಮುಂಬೈ ತಂಡದ ಸ್ಕೋರ್​ 69/2 ಆಗಿತ್ತು. ಮತ್ತೊಂದು ಬದಿ 31 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳೊಂದಿಗೆ 47 ರನ್ ಗಳಿಸಿದ್ದ ಹೇಯ್ಲಿ ಮ್ಯಾಥ್ಯೂಸ್, ಆಶ್ಲೀಗ್ ಗಾರ್ಡ್ನಗೆ ವಿಕೆಟ್​ ಒಪ್ಪಿಸಿ ಪೆವಿಲಿಯನ್​ ಸೇರಿದರು.

ನಂತರ ಕ್ರೀಸ್​ಗಿಳಿದ ತಂಡದ ನಾಯಕಿ ಹರ್ಮನ್​ ಪ್ರೀತ್​ ಕೌರ್​ ಬಿರುಸಿನ ಆಟವಾಡಿ 30 ಎಸೆತಗಳಲ್ಲಿ 65 ರನ್​ಗಳನ್ನು ಬಾರಿಸಿಸುವ ಮೂಲಕ ಅರ್ಧಶತಕವನ್ನು ಪೂರೈಸಿದರು. ಮತ್ತೋದೆಡೆ ಅಮೆಲಿಯಾ ಕೆರ್ 24 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್​ ಸಮೇತ 45 ರನ್​ಗಳನ್ನು ಕಲೆ ಹಾಕಿ ತಂಡದ ಮೊತ್ತವನ್ನು ಹೆಚ್ಚಿಸಲು ಸಹಾಯ ಮಾಡಿದರು. ಇನ್ನು ಗುಜರಾತ್​ ಜೈಂಟ್ಸ್​ ಪರ ಗಾರ್ಡನರ್​, ತನುಜಾ ಕನ್ವಾರ್​, ವರೆಹಮ್​ ತಲಾ ಒಂದು ವಿಕೆಟ್​ ಪಡೆದರೆ ಸ್ನೇಹ ರಾಣ 2 ವಿಕೆಟ್​ಗಳನ್ನು ಪಡೆದಿದ್ದಾರೆ.

ಇನ್ನು ಬೃಹತ್​ ಗುರಯನ್ನು ಬೆನ್ನತ್ತಿರುವ ಗುಜರಾತ್​ ಜೈಂಟ್ಸ್​ 8 ವಿಕೆಟ್​ ನಷ್ಟಕ್ಕೆ 61 ರನ್​ಗಳನ್ನು ಕಲೆ ಹಾಕಿದ್ದು ಪಂದ್ಯ ನಡೆಯುತ್ತಿದೆ. ಬೃಹತ್​ ಗುರಿಯನ್ನು ಬೆನ್ನಟ್ಟಿದ ಗುಜರಾತ್​ ಜೈಂಟ್ಸ್​ ಆರಂಭಿಕ ಆಘಾತ ಎದರಿಸಿದೆ. ಗುಜರಾತ್​ ಪರ ಕ್ರೀಸ್​ಗಿಳಿದ ಸುಬ್ಬಿನೆನಿ ಮೆಘನ 2ರನ್​ಗೆ ಬ್ರಂಟ್​ಗೆ ವಿಕೆಟ್​ ಒಪ್ಪಿಸಿದರೆ, ಬೆಥ್​ ಮೂನಿ, ಹರ್ಲಿನ್​ ಡಿಯೋಲ್​, ಆಶ್ಲೀಗ್​ ಗಾರ್ಡನರ್, ತನುಜಾ ಕನ್ವರ್​​ ಶೂನ್ಯಕ್ಕೆ ಪೆವಿಲಿಯನ್​ ಸೇರಿದ್ದಾರೆ. ಉಳಿದಂತೆ ಅನ್ನೇಬೆಲ್​ (6), ವರೆಹಮ್​ (8), ಸ್ನೇಹರಾಣ (1), ಮಾನ್ಸಿ ಜೋಶಿ (6) ರನ್​ಗೆ ಪೆವಿಲಿಯನ್​ ಸೇರಿದ್ದಾರೆ.

ಇದನ್ನೂ ಓದಿ: WPL 2023: ಟಾಸ್​ ಗೆದ್ದು ಕ್ಷೇತ್ರ ರಕ್ಷಣೆ ಆಯ್ದುಕೊಂಡ ಗುಜರಾತ್ ಜೈಂಟ್ಸ್, ಅದ್ಧೂರಿ ಮನರಂಜನೆಯ ಆರಂಭ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.