ETV Bharat / bharat

Women's Day 2023: ಮಕ್ಕಳ ಭವಿಷ್ಯಕ್ಕಾಗಿ ಶಾಲೆಯನ್ನೇ ನಿರ್ಮಿಸಿದ ಗಟ್ಟಿಗಿತ್ತಿಯರು

ತಮ್ಮಂತೆ ಮಕ್ಕಳು ಕೂಡ ಕೂಲಿ ಕಾರ್ಮಿಕರು ಆಗಬಾರದು ಎಂಬ ಉದ್ದೇಶದಿಂದ ಡಿಡಬ್ಲ್ಯೂಸಿಆರ್​ಎ ಮಹಿಳೆಯರು ಶಾಲೆಯನ್ನೇ ನಿರ್ಮಿಸಿದ್ದಾರೆ. ಅವರ ಈ ಸಾಧನೆ ನಾರಿ ಶಕ್ತಿಗೆ ಸಾಕ್ಷಿಯಾಗಿದೆ.

women who built a school for child labor through DWCRA savings

author img

By

Published : Mar 8, 2023, 11:55 AM IST

ಹೈದರಾಬಾದ್(ತೆಲಂಗಾಣ)​: ಅವರೆಲ್ಲ ಬಡವರು, ನಿರ್ಗತಿಕರು ಮತ್ತು ಅವಿದ್ಯಾವಂತ ಮಹಿಳೆಯರು. ಕಷ್ಟಪಟ್ಟು ದುಡಿಮೆ ಮಾಡಿ ಜೀವನ ಸಾಗಿಸುವ ಸರಳ ಹಳ್ಳಿಗರು. ಆದರೆ, ತಮ್ಮ ಮಕ್ಕಳ ಭವಿಷ್ಯ ತಮ್ಮಂತೆ ಆಗಬಾರದು ಎಂದು ಮಾಡಿರುವ ಕೆಲಸ ಮಾತ್ರ ಪ್ರಶಂಸನೀಯ. ತಮ್ಮ ಬಳಿ ಇದ್ದ ಅಲ್ಪ ಸ್ವಲ್ಪ ಹಣವನ್ನು ಉಳಿಸಿ ಶಾಲೆಗಳನ್ನು ಕಟ್ಟಿದ್ದಾರೆ. ಈ ಮೂಲಕ ತಮ್ಮ ಮಕ್ಕಳಿಗೆ ಮಾತ್ರವಲ್ಲದೆ ಸಾವಿರಾರು ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಿದ್ದಾರೆ. ಕರ್ನೂಲ್​ ಜಿಲ್ಲೆಯ ಓರ್ವಕಲ್​ನ ಹೆಮ್ಮೆಯ ನಾರಿಯರ ಸಾಧನೆಯ ಕಥೆ ಇದು..

ಹೌದು, ಎರಡು ದಶಕಗಳ ಹಿಂದೆ ಓರ್ವಕಲ್​ ಪ್ರದೇಶದಲ್ಲಿ ಬಡತನ ಎಂಬುದು ತಾಂಡವವಾಡುತ್ತಿತ್ತು. ಈ ವೇಳೆ ಇಲ್ಲಿನ ಮಹಿಳೆಯರ ಬದುಕು ಬದಲಾಯಿಸಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ- ಡಿಡಬ್ಲ್ಯೂಸಿಆರ್​ಎ. ಸ್ಥಳೀಯ ಮಹಿಳೆಯರು ಡಿಡಬ್ಲ್ಯೂಸಿಆರ್​ಎ ಸಂಘವನ್ನು ಸೇರಿ, ಹಣವನ್ನು ಉಳಿಸಲು ಶುರು ಮಾಡಿದರು. ತೆಲುಗು ದೇಶಂ ಪಕ್ಷದ(ಟಿಡಿಪಿ) ಮುಖ್ಯಸ್ಥ, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಅವಧಿಯಲ್ಲಿ ಸ್ಥಾಪಿತವಾದವು ಈ ಸ್ವಸಹಾಯ ಸಂಘಗಳು. ಇದರ ಜೊತೆಗೆ ಈ ಡಿಡಬ್ಲ್ಯೂಸಿಆರ್​ಎ ಮಹಿಳೆಯರು ಗ್ರಾಮ ಸಂಘಗಳು ಮತ್ತು ಮಂಡಲಗಳನ್ನು ಸ್ಥಾಪಿಸಿದಾಗ ಇವು ಅವರ ಜೀವನವನ್ನು ಉತ್ತಮಗೊಳಿಸುತ್ತವೆ.

ಮಕ್ಕಳ ಭವಿಷ್ಯಕ್ಕಾಗಿ ಶಾಲೆ: ಡಿಡಬ್ಲ್ಯೂಸಿಆರ್​ಎ ಮಹಿಳೆಯರು ತಮ್ಮ ಮಕ್ಕಳ ಭವಿಷ್ಯದ ಕುರಿತು ಹೆಚ್ಚು ಕೇಂದ್ರಿಕೃತರಾಗಿದ್ದಾರೆ. ಆರಂಭದಲ್ಲಿ, ಬಾಲ ಕಾರ್ಮಿಕರಿಗೆ ಶಾಲೆಯನ್ನು ನಿರ್ಮಿಸಲಾಯಿತು. ಈ ಮೂಲಕ ಓರ್ವಕಲ್​ನಲ್ಲಿ ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಲಾಯಿತು. ಈ ನಿಟ್ಟಿನಲ್ಲಿ ಬಾಲ ಭಾರತಿ ಶಾಲೆ ಪ್ರಾರಂಭವಾಯಿತು. 2006ರಲ್ಲಿ ಉತ್ತಮ ಕಟ್ಟಡ ನಿರ್ಮಾಣಕ್ಕಾಗಿ ಏಳು ಎಕರೆ ಜಾಗ ಖರೀದಿಸಿ, ಅಡಿಗಲ್ಲು ಹಾಕಲಾಗಿತ್ತು. ಆದರೆ, ಹಣದ ಕೊರತೆಯಿಂದ ಕೆಲಕಾಲ ಕಾಮಗಾರಿ ಸ್ಥಗಿತಗೊಂಡಿತ್ತು.

ಮಹಿಳೆಯರೆಲ್ಲರೂ ಒಗ್ಗೂಡಿ ನಿಧಿ ಸಂಗ್ರಹಿಸಿ, ಕಷ್ಟಕಟ್ಟು ಕೆಲಸ ನಿರ್ಮಸಿ ಸುಮಾರು 7 ಕೋಟಿ ರೂ.ಗಳಲ್ಲಿ ಭವ್ಯ ಕಟ್ಟಡ ನಿರ್ಮಿಸಿದರು. ಚಂದ್ರಬಾಬು ನಾಯ್ಡು ಸರ್ಕಾರದಲ್ಲಿ ಪ್ರಾರಂಭವಾದ ಈ ಕಟ್ಟಡ 2017 ರಲ್ಲಿ ಪೂರ್ಣಗೊಂಡಿತು. ಓರ್ವಕಲ್​ ಮಂಡಲದಲ್ಲಿ ಸಾವಿರಾರು ಡಿಡಬ್ಲ್ಯೂಸಿಆರ್​ಎ ಉಳಿತಾಯ ಸಂಘಗಳಿವೆ. ಒಟ್ಟು ಹತ್ತು ಸಾವಿರ ಮಹಿಳೆಯರು ಮತ್ತು ಅವರ ಕುಟುಂಬ ಸದಸ್ಯರು ಈ ಕಟ್ಟಡವನ್ನು ಪೂರ್ಣಗೊಳಿಸಿದರು.

ಗುಣಮಟ್ಟದ ಶಿಕ್ಷಣ: ಸುಮಾರು 700 ಮಕ್ಕಳು ಈ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಕಲಿಯುತ್ತಿದ್ದಾರೆ. ಅವರಿಗೆಲ್ಲಾ ಇಂಗ್ಲಿಷ್​ ಮಾಧ್ಯಮದಲ್ಲಿ ಕಾರ್ಪೋರೆಟ್​ ಶಾಲೆಯ ರೀತಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. 31 ಸುಶಿಕ್ಷತ ಜನರು ಇಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 10 ಮಂದಿ ಶಿಕ್ಷಕೇತರ ಸಿಬ್ಬಂದಿ ಇದ್ದಾರೆ. ಕಡಿಮೆ ಶುಲ್ಕದಲ್ಲಿ ಇಲ್ಲಿ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದು, ಅನಾಥರಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ.

ಡಿಡಬ್ಲ್ಯೂಸಿಆರ್​ಎ ಮಹಿಳಾ ಶಾಲೆಯಲ್ಲಿ ನೂರಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ದಾಖಲಾತಿ ನೀಡಲಾಗಿದೆ. ಇಲ್ಲಿನ 27 ಗ್ರಾಮಗಳಿಂದ ಮಕ್ಕಳನ್ನು ಕರೆತಂದು ಬಿಡುವುದಕ್ಕಾಗಿ 9 ಬಸ್​ಗಳಿವೆ. ಪ್ರತಿ ವರ್ಷ ಇಲ್ಲಿನ ಮಕ್ಕಳ 10ನೇ ತರಗತಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಪಡೆಯುವ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸಬೇಕಿದೆ.

ಈ ದಿನಗಳ ಕುರಿತು ಮಾತನಾಡಿದ ಸಂಘದ ವಿಜಯಲಕ್ಷಿ, ಬಾಲ ಕಾರ್ಮಿಕರಿಗಾಗಿ ನಾವು ಮೊದಲು ಶಾಲೆ ಆರಂಭಿಸಿ, ಅದರಿಂದ ಯಶಸ್ಸು ಪಡೆದೆವು. ಇದರಿಂದ ನಾವು ಬಾಲ ಭಾರತಿ ಶಾಲೆ ನಿರ್ಮಿಸಿದೆವು. ನಾನು ಈ ಶಾಲೆಯ ಭಾಗವಾಗಿರುವುದಕ್ಕೆ ಹೆಮ್ಮೆ ಇದೆ. ಇದು ಈಗ ಶಾಲೆ ಎಂಬುದಕ್ಕಿಂತ ವಿಶ್ವವಿದ್ಯಾಲಯವಾಗಿದೆ. ಭವಿಷ್ಯದಲ್ಲಿ ನಾವು ವಿಶ್ವವಿದ್ಯಾಲಯವನ್ನು ನಿರ್ಮಿಸುತ್ತೇವೆ ಎಂಬ ಬಲವಾದ ನಂಬಿಕೆ ಇದೆ ಎಂದು ಆತ್ಮವಿಶ್ವಾಸದ ಮಾತುಗಳನ್ನಾಡಿದರು.

ಇದನ್ನೂ ಓದಿ: 20 ಚಕ್ರದ ವಾಹನವನ್ನೂ ಲೀಲಾಜಾಲವಾಗಿ ಓಡಿಸಬಲ್ಲರು ಹಾವೇರಿಯ ಶೋಭಾ ತೋಟದ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.