ETV Bharat / bharat

ಸಂಸತ್ತಿನಲ್ಲಿ ಮೀಸಲಾತಿ ಮಸೂದೆ ಪಾಸ್​: ಮಹಿಳಾ ಸಂಸದರಿಂದ ಪ್ರಧಾನಿ ಮೋದಿಗೆ ಜೈಕಾರ

ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗಿದೆ. ದೇಶದೆಲ್ಲೆಡೆ ಐತಿಹಾಸಿಕ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ನಿನ್ನೆ ಮಹಿಳಾ ಸಂಸದರು ಪ್ರಧಾನಿ ಮೋದಿಗೆ ಹೂಗುಚ್ಛ ನೀಡಿ ಧನ್ಯವಾದ ಸಲ್ಲಿಸಿದರು.

ಮೋದಿಗೆ ಸ್ವಾಗತ
ಮೋದಿಗೆ ಸ್ವಾಗತ
author img

By ETV Bharat Karnataka Team

Published : Sep 22, 2023, 12:08 PM IST

ನವದೆಹಲಿ: 'ನಾರಿ ಶಕ್ತಿ ವಂದನ್ ಮಸೂದೆ' ಅಂಗೀಕಾರವಾದ ಹಿನ್ನೆಲೆಯಲ್ಲಿ ರಾಷ್ಟ್ರದೆಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಅದರಲ್ಲೂ ಮಹಿಳಾ ಸಂಸದರು ಪ್ರಧಾನಿ ಮೋದಿ ಪರ ಘೋಷಣೆಗಳನ್ನು ಮೊಳಗಿಸಿ ಹೂಗುಚ್ಚ ನೀಡುವ ಮೂಲಕ ಕೃತಜ್ಞತೆ ಸಲ್ಲಿಸಿದರು. ಪಿ.ಟಿ.ಉಷಾ ಮತ್ತು ಕೇಂದ್ರ ಸಚಿವರಾದ ಮೀನಾಕ್ಷಿ ಲೇಖಿ ಮತ್ತು ಸ್ಮೃತಿ ಇರಾನಿ ಸೇರಿದಂತೆ ಉಭಯ ಸದನಗಳ ಮಹಿಳಾ ಸದಸ್ಯರು ಮೋದಿ ಅವರಿಗೆ ಧನ್ಯವಾದ ಸಲ್ಲಿಸಿ ಫೋಟೋ ಕ್ಲಿಕ್ಕಿಸಿಕೊಂಡರು.

  • #WATCH | Delhi | Celebrations by BJP workers and others outside BJP Headquarters, following the passing of the Women's Reservation Bill.

    A woman says, "The Bill was awaited for 27 years...A historic era has begun. The Bill was passed in a golden era. It is a big day for… pic.twitter.com/AyulzpmLis

    — ANI (@ANI) September 22, 2023 " class="align-text-top noRightClick twitterSection" data=" ">

ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ವಿಧೇಯಕ ಗುರುವಾರ ರಾಜ್ಯಸಭೆಯಲ್ಲಿ ಅವಿರೋಧವಾಗಿ ಅಂಗೀಕಾರಗೊಂಡಿತು. 214 ಸದಸ್ಯರು ಬೆಂಬಲವಾಗಿ ಮತ ಚಲಾಯಿಸಿದರು. ಮಸೂದೆಯ ವಿರುದ್ಧ ಯಾರೂ ಮತ ಹಾಕದಿರುವುದು ವಿಶೇಷವಾಗಿತ್ತು.

'ನಾರಿ ಶಕ್ತಿ ವಂದನ್ ಮಸೂದೆ' ಮಂಗಳವಾರ ಹೊಸ ಸಂಸತ್ತಿನ ಕಟ್ಟಡಕ್ಕೆ ಸ್ಥಳಾಂತರಗೊಂಡ ನಂತರ ಸಂಸತ್ತು ಅಂಗೀಕರಿಸಿದ ಮೊದಲ ಮಸೂದೆಯಾಗಿದೆ. ಇದಕ್ಕೂ ಮೊದಲು, ಬುಧವಾರ ಮಸೂದೆ ಲೋಕಸಭೆಯಲ್ಲಿ ಅಂಗೀಕಾರಗೊಂಡಿದ್ದು, ಪರವಾಗಿ 454 ಮತಗಳು ಮತ್ತು 2 ಮತಗಳು ವಿರುದ್ಧವಾಗಿ ಬಿದ್ದಿದ್ದವು. ಮಸೂದೆ ಅಂಗೀಕಾರಕ್ಕೆ ಮಹಿಳಾ ಸಂಸದರು ಸಂತಸ ವ್ಯಕ್ತಪಡಿಸಿದರು.

  • #WATCH | On the Women's Reservation Bill (Nari Shakti Vandan Adhiniyam), MoS for State for Agriculture & Farmers' Welfare, Shobha Karandlaje says, "...We waited for many years for reservations for women in Parliament. Women have a large population and to have justice was a wish… pic.twitter.com/NaUaNGKE3D

ಪ್ರತಿಪಕ್ಷಕ್ಕೂ ಧನ್ಯವಾದ-ಶೋಭಾ ಕರಂದ್ಲಾಜೆ: ಕೃಷಿ ಮತ್ತು ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, "ಸಂಸತ್ತಿನಲ್ಲಿ ಮಹಿಳೆಯರ ಮೀಸಲಾತಿಗಾಗಿ ನಾವು ಹಲವು ವರ್ಷಗಳಿಂದ ಕಾಯುತ್ತಿದ್ದೆವು. ಇದು ಹಲವು ವರ್ಷಗಳ ಆಶಯವಾಗಿತ್ತು. ಈ ಸಂದರ್ಭದಲ್ಲಿ ನಾನು ಪ್ರತಿಪಕ್ಷಕ್ಕೂ ಧನ್ಯವಾದ ಹೇಳುತ್ತೇನೆ" ಎಂದರು.

  • #WATCH | On the Women's Reservation Bill (Nari Shakti Vandan Adhiniyam), MoS for Railways and Textile, Darshana Jardosh says, "The voice of the women has been heard by PM Narendra Modi...He has been working for years to bring women from every section of society here. We have the… pic.twitter.com/iz0kHuPRGm

ಸಚಿವೆ ದರ್ಶನಾ ಜರ್ದೋಶ್ ಅಭಿನಂದನೆ: ರೈಲ್ವೆ ಖಾತೆ ರಾಜ್ಯ ಸಚಿವೆ ದರ್ಶನಾ ಜರ್ದೋಶ್ ಮಾತನಾಡಿ, "ಇದು ಮಹಿಳೆಯರಿಗೆ ಪ್ರಧಾನಿ ನರೇಂದ್ರ ಮೋದಿಯವರಿಂದ ದೊಡ್ಡ ಕೊಡುಗೆ. ದೇಶದ ಅರ್ಧದಷ್ಟು ಜನಸಂಖ್ಯೆಗೆ ಅವರು ನೀಡಿದ ಗೌರವಕ್ಕಾಗಿ ನಾನು ಧನ್ಯವಾದ ಅರ್ಪಿಸುತ್ತೇನೆ" ಎಂದು ಹೇಳಿದರು.

  • #WATCH | On the Women's Reservation Bill (Nari Shakti Vandan Adhiniyam), MoS for Railways and Textile, Darshana Jardosh says, "This is a big present from PM Narendra Modi to women. I congratulate him today on his birthday (as per the Hindu Calendar). And I thank him for the… pic.twitter.com/nm4fwXehp4

ಬಿಜೆಪಿ ಸಂಸದೆ ದಿಯಾ ಕುಮಾರಿ ಪ್ರತಿಕ್ರಿಯೆ: "ಈ ಮಸೂದೆ ಅಂಗೀಕಾರದಿಂದ ನಮಗೆ ತುಂಬಾ ಸಂತೋಷವಾಗಿದೆ. ಪ್ರಧಾನಿ ಮೋದಿ ಅಂತಿಮವಾಗಿ ನಮ್ಮ ಕನಸು ನನಸಾಗಿಸಿದ್ದಾರೆ" ಎಂದು ಹೇಳಿದರು.

ಇದನ್ನೂ ಓದಿ: 'ಮೋದಿ ಹೇ ತೋ ಮುಮ್ಕಿನ್‌ ಹೇ...': ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ ಸಚಿವೆ ಸ್ಮೃತಿ ಇರಾನಿ ಮೆಚ್ಚುಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.