ETV Bharat / bharat

ಅಸ್ಸೋಂನಲ್ಲಿ ಕಾಡಾನೆ ದಾಳಿಗೆ ವೃದ್ಧೆ ಸಾವು, ವರ್ಷದಲ್ಲಿ ಒಟ್ಟು 19 ಸಾವು - ಆನೆ ದಾಳಿಗೆ ವೃದ್ಧೆ ಸಾವು

ಅಸ್ಸೋಂನ ಗೋಲ್ಪಾರಾ ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಈ ವರ್ಷದಲ್ಲಿ ಒಟ್ಟು 19 ಮಂದಿ ಕಾಡಾನೆಗಳ ದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ.

ಅಸ್ಸಾಂನಲ್ಲಿ ಕಾಡಾನೆ ದಾಳಿಗೆ ವೃದ್ಧೆ ಸಾವು, ವರ್ಷದಲ್ಲಿ ಒಟ್ಟು 19 ಸಾವು
ಪ್ರಾತಿನಿಧಿಕ ಚಿತ್ರ
author img

By

Published : Oct 30, 2021, 9:02 AM IST

ಗುವಾಹಟಿ, ಅಸ್ಸೋಂ: ಕಾಡಾನೆಯ ತುಳಿತಕ್ಕೆ ಒಳಗಾಗಿ ಅಸ್ಸೋಂನ ಗೋಲ್ಪಾರ ಜಿಲ್ಲೆಯಲ್ಲಿ ಶುಕ್ರವಾರ 70 ವರ್ಷದ ವೃದ್ಧೆಯೋರ್ವಳು ಸಾವನ್ನಪ್ಪಿದ್ದಾಳೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದೊಹೆಲಾ ಬಳಿಯ ಕೊರ್ಕುಚಿ ಬಳಿಯಲ್ಲಿ ಬೆಳಗ್ಗೆ 7 ಗಂಟೆಗೆ ಘಟನೆ ನಡೆದಿದೆ ಎಂದು ಗೋಲ್ಪಾರ ವಿಭಾಗೀಯ ಅರಣ್ಯಾಧಿಕಾರಿ ಜಿತೇಂದ್ರ ಕುಮಾರ್ ಮಾಹಿತಿ ನೀಡಿದ್ದಾರೆ. ಈ ಕುರಿತು ಅರಣ್ಯಾಧಿಕಾರಿಗಳು ಮತ್ತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗೋಲ್ಪಾರಾ ಜಿಲ್ಲೆಯಲ್ಲಿ ಕಾಡಾನೆಯ ದಾಳಿ ಆಗಾಗ ನಡೆಯುತ್ತಿರುತ್ತವೆ. ಇದೇ ತಿಂಗಳಲ್ಲಿ ಇಬ್ಬರ ಸಾವನ್ನಪ್ಪಿದ್ದು, ಈ ವರ್ಷ ಒಟ್ಟು 19 ಮಂದಿ ಆನೆಯ ದಾಳಿಯಿಂದ ಮೃತಪಟ್ಟಿದ್ದಾರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಉಪಚುನಾವಣೆ ಫೈಟ್​​: ಮೂರು ಲೋಕಸಭೆ, 29 ವಿಧಾನಸಭೆ ಸ್ಥಾನಗಳಿಗೆ ಇಂದು ಮತದಾನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.