ಕೊಟ್ಟಾಯಂ(ಕೇರಳ): ರಾಜ್ಯದಲ್ಲಿ ದುರಂತವೊಂದು ನಡೆದಿದೆ. 12 ವರ್ಷದ ಮಗಳನ್ನು ಕತ್ತು ಹಿಸುಕಿ ಕೊಂದ ತಾಯಿವೋರ್ವಳು ಬಾವಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೇರಳದ ಕೊಟ್ಟಾಯಂನಲ್ಲಿ ನಡೆದಿದೆ. ಮಹಿಳೆಯನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ.
ಕೊಟ್ಟಾಯಂ ಜಿಲ್ಲೆಯ ಮುಂಡಕ್ಕಾಯಂ ಬಳಿ ಘಟನೆ ನಡೆದಿದ್ದು, ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಲೈಜೀನಾ ಎಂದು ಗುರ್ತಿಸಲಾಗಿದೆ. ಆಕೆ ತನ್ನ ಮಗಳು ಶಮ್ನಾಳನ್ನು ಕತ್ತು ಹಿಸುಕಿ ಕೊಂದಿದ್ದಾಳೆ.
ಭಾನುವಾರ ಬೆಳ್ಳಂಬೆಳಗ್ಗೆ ಈ ಘಟನೆ ನಡೆದಿದ್ದು, ಲೈಜೀನಾ ಬಾವಿಗೆ ಬಿದ್ದ ನಂತರ ಕಿರುಚಾಡುತ್ತಿರುವ ಶಬ್ದ ಕೇಳಿ ನೆರೆಹೊರೆಯವರು ಸಹಾಯಕ್ಕೆ ಧಾವಿಸಿ, ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ಆಕೆಯನ್ನು ರಕ್ಷಿಸಿದ್ದಾರೆ.
ಇದನ್ನೂ ಓದಿ: ಬಾಲಿವುಡ್ ನಕಲು ಮಾಡುವುದನ್ನು ನಿಲ್ಲಿಸಿ: ನಿರ್ಮಾಪಕರಿಗೆ ಪಾಕ್ ಪ್ರಧಾನಿ ಕರೆ
ನಂತರ ಮಗಳನ್ನು ಕೊಂದಿರುವ ಬಗ್ಗೆ ಮಹಿಳೆ ಸ್ವತಃ ತಾನೇ ಪೊಲೀಸರೆದುರು ಒಪ್ಪಿಕೊಂಡಿದ್ದಾಳೆ. ಲೈಜೀನಾ ಪತಿ ಶಿಮೀರ್ ವಿದೇಶದಲ್ಲಿ ಕೆಲಸ ಮಾಡುತ್ತಿದ್ದು, ಘಟನೆಗೆ ಕಾರಣ ಏನು ಎಂಬುದನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.