ETV Bharat / bharat

ತಾಯಿಯನ್ನು ಚಾಕುವಿನಿಂದ ಇರಿದು ಕೊಂದ ಇಂಜಿನಿಯರ್‌ ಪುತ್ರ!: ಅಮಾನವೀಯ ಕೃತ್ಯದ ವಿಡಿಯೋ - ಹರಿಯಾಣದ ಗುರುಗ್ರಾಮ್​ನಲ್ಲಿ ಘಟನೆ

ಒಂಬತ್ತು ತಿಂಗಳ ಕಾಲ ಹೊಟ್ಟೆಯಲ್ಲಿ ಬಚ್ಚಿಟ್ಟುಕೊಂಡು ಮಗುವಿಗೆ ಜನ್ಮ ನೀಡಿದ ತಾಯಿಯನ್ನೇ ಕ್ರೂರಿ ಮಗನೋರ್ವ ಅಮಾನವೀಯ ರೀತಿಯಲ್ಲಿ ಕೊಲೆ ಮಾಡಿದ್ದಾನೆ

Woman stabbed to death by son
Woman stabbed to death by son
author img

By

Published : Apr 8, 2022, 4:17 PM IST

Updated : Apr 8, 2022, 4:57 PM IST

ಗುರುಗ್ರಾಮ್​(ಹರಿಯಾಣ): ಸೈಬರ್ ಸಿಟಿ ಗುರುಗ್ರಾಮ್​​ನಲ್ಲಿ ಹೃದಯ ವಿದ್ರಾವಕ ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ. 66 ವರ್ಷದ ತಾಯಿಯ ಮೇಲೆ ಸ್ವಂತ ಮಗನೋರ್ವ ಚಾಕುವಿನಿಂದ ಹಲ್ಲೆ ಮಾಡಿ, ಕೊಲೆ ಮಾಡಿದ್ದಾನೆ. ಇದರ ಸಂಪೂರ್ಣ ದೃಶ್ಯಾವಳಿ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವೃದ್ಧೆ ತಾಯಿ ಉದ್ಯಾನವನದಲ್ಲಿ ವಾಕಿಂಗ್ ಮಾಡುವ ಉದ್ದೇಶದಿಂದ ಆಗಮಿಸಿದಾಗ ಈ ಘಟನೆ ನಡೆದಿದೆ. ಆರಂಭದಲ್ಲಿ ತಾಯಿ- ಮಗನ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಆರೋಪಿ ಮಗ ಚಾಕುವಿನಿಂದ ತಾಯಿ ಮೇಲೆ ಹಲ್ಲೆ ನಡೆಸಿದ್ದಾನೆ. ರಸ್ತೆಯ ಮೇಲೆ ಬಿದ್ದ ನಂತರವೂ ಅನೇಕ ಸಲ ಚಾಕುವಿನಿಂದ ಆಕೆಯ ಮೇಲೆ ಇರಿದಿದ್ದಾನೆ.

ಮಗನಿಂದಲೇ ಚಾಕುವಿನಿಂದ ಇರಿತಕ್ಕೊಳಗಾಗಿ ಜೀವಬಿಟ್ಟ ತಾಯಿ

ಇದನ್ನೂ ಓದಿ: ಭಾನುವಾರದಿಂದ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಬೂಸ್ಟರ್​: ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯ

ರಕ್ತಸಿಕ್ತವಾಗಿ ರಸ್ತೆಯಲ್ಲಿ ಬಿದ್ದ ವೃದ್ಧೆಯನ್ನು ತಕ್ಷಣವೇ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಆರೋಪಿ ಪುತ್ರ ಇಂಜಿನಿಯರ್​ ಆಗಿದ್ದು, ಕಳೆದ ಕೆಲ ವರ್ಷಗಳಿಂದ ತಂದೆ-ತಾಯಿಯಿಂದ ಈತ ಪ್ರತ್ಯೇಕವಾಗಿ ಹೆಂಡತಿ ಜೊತೆ ವಾಸ ಮಾಡ್ತಿದ್ದ. ಕೌಟುಂಬಿಕ ಕಲಹದಿಂದಾಗಿ ಈ ಕೊಲೆ ನಡೆದಿದೆ ಎಂದು ಹೇಳಲಾಗ್ತಿದ್ದು, ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿ ಬಂಧನಕ್ಕಾಗಿ ಶೋಧಕಾರ್ಯ ಆರಂಭಿಸಿದ್ದಾರೆ.

Last Updated : Apr 8, 2022, 4:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.