ETV Bharat / bharat

17 ಬಾರಿ ಚಾಕುವಿನಿಂದ ಇರಿದು ಪ್ರೇಯಸಿ ಕೊಂದ ಯುವಕ.. - ಕೇರಳ ಕ್ರೈಂ ಸುದ್ದಿ

ತನ್ನನ್ನು ಪ್ರೀತಿಸಿ ಬೇರೊಬ್ಬನನ್ನು ಮದುವೆಯಾಗಿದ್ದ ಪ್ರೇಯಸಿಯನ್ನು ಪ್ರಿಯಕರ 17 ಬಾರಿ ಚಾಕುವಿನಿಂದ ಇರಿದಿದ್ದು, ಚಿಕಿತ್ಸೆ ಫಲಿಸದೇ ಆಕೆ ಮೃತಪಟ್ಟಿದ್ದಾಳೆ.

Woman stabbed 17 times by youth passes away in Thiruvananthapuram
17 ಬಾರಿ ಚಾಕುವಿನಿಂದ ಇರಿದು ಪ್ರೇಯಸಿಯನ್ನ ಕೊಂದ ಯುವಕ
author img

By

Published : Aug 31, 2021, 5:06 PM IST

ತಿರುವನಂತಪುರಂ (ಕೇರಳ): ಬೇರೆ ಯುವಕನೊಂದಿಗೆ ಮದುವೆಯಾದ ಪ್ರೇಯಸಿಯನ್ನು ಪ್ರಿಯಕರ 17 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಕೇರಳ ತಿರುವನಂತಪುರಂನ ನೆದುಮಂಗಡ್ ಎಂಬಲ್ಲಿ ನಡೆದಿದೆ.

ಚಿರಕೋಣಂ ನಿವಾಸಿ ಅರುಣ್​ ಹಾಗೂ ನೆದುಮಂಗಡ್ ನಿವಾಸಿ ಸೂರ್ಯಗಾಯತ್ರಿ (20) ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಸೂರ್ಯಗಾಯತ್ರಿ ಬೇರೊಬ್ಬನೊಂದಿಗೆ ಮದುವೆಯಾಗಿದ್ದಾಳೆ. ಅಲ್ಲಿ ಅವಳ ಜೀವನ ಸುಖಕರವಾಗಿರಲಿಲ್ಲ. ಗಂಡನೊಂದಿಗೆ ಜಗಳವಾಡಿಕೊಂಡು ತವರು ಮನೆಗೆ ಬಂದು ವಾಸಿಸುತ್ತಿದ್ದಳು. ಆ ನಂತರ ಅರುಣ್ ಹಾಗೂ ಸೂರ್ಯಗಾಯತ್ರಿ ಮುಖಾಮುಖಿಯಾದಾಗೆಲ್ಲಾ ಜಗಳಕ್ಕೆ ಇಳಿಯುತ್ತಿದ್ದರು ಎಂದು ಹೇಳಲಾಗಿದೆ.

ಇದನ್ನೂ ಓದಿ: ಉಡುಪಿ: ಪ್ರೇಯಸಿಗೆ ಚಾಕು ಇರಿದು ತಾನೂ ಕತ್ತು ಕುಯ್ದುಕೊಂಡಿದ್ದ ಯುವಕ - ಇಬ್ಬರೂ ಸಾವು

ಇದೇ ವಿಚಾರಕ್ಕೆ ನಿನ್ನೆ ಮಧ್ಯಾಹ್ನ ಅರುಣ್ ಆಕೆ ಮೇಲೆ ದಾಳಿ ನಡೆಸಿದ್ದಾನೆ. ಎದೆ ಮತ್ತು ಕುತ್ತಿಗೆಗೆ 17 ಬಾರಿ ಚಾಕುವಿನಿಂದ ಇರಿದಿದ್ದಾನೆ. ಘಟನೆ ಕಂಡ ಸೂರ್ಯಗಾಯತ್ರಿ ಪೋಷಕರು ಜೋರಾಗಿ ಕಿರುಚಿದ್ದು, ನೆರೆಹೊರೆಯವರು ಸ್ಥಳಕ್ಕೆ ಧಾವಿಸಿದ್ದಾರೆ. ಕೃತ್ಯ ಎಸಗಿ ಮನೆಯೊಂದರ ಶೌಚಾಲಯದಲ್ಲಿ ಅಡಗಿಕೊಂಡಿದ್ದ ಆರೋಪಿ ಅರುಣ್​ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಸೂರ್ಯಗಾಯತ್ರಿಯನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ ಮೃತಪಟ್ಟಿದ್ದಾಳೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.