ETV Bharat / bharat

ವರದಕ್ಷಿಣೆ ಕಿರುಕುಳ: ಸೊಸೆಗೆ ಬೆಂಕಿ ಹಚ್ಚಿದ ಅತ್ತೆ

ಅತ್ತೆಯೊಬ್ಬಳು ವರದಕ್ಷಿಣೆಗಾಗಿ ಸೊಸೆಗೆ ಬೆಂಕಿ ಇಟ್ಟು ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

Woman set on fire for dowry in UP, dies at hospital
ವರದಕ್ಷಿಣೆ ಕಿರುಕುಳ: ಸೊಸೆಗೆ ಬೆಂಕಿ ಹಚ್ಚಿದ ಅತ್ತೆ
author img

By ETV Bharat Karnataka Team

Published : Dec 26, 2023, 8:57 AM IST

Updated : Dec 26, 2023, 9:05 AM IST

ಬರೇಲಿ( ಉತ್ತರಪ್ರದೇಶ): ಉತ್ತರಪ್ರದೇಶದ ಬರೇಲಿ ಜಿಲ್ಲೆಯಲ್ಲಿ ವರದಕ್ಷಿಣೆಗಾಗಿ 24 ವರ್ಷದ ಮಹಿಳೆಯನ್ನು ಅವಳ ಅತ್ತೆಯೇ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. ತೀವ್ರವಾಗಿ ಗಾಯಗೊಂಡ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಮಹಿಳೆಯ ಪತಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಸಂತ್ರಸ್ತೆಯ ಪತಿ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಬರೇಲಿ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಭಾಟಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಸಂತ್ರಸ್ತೆಯ ತಂದೆ ದಿನೇಶ್ ಕುಮಾರ್ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರು. ಆಕಾಂಕ್ಷಾ ಆಕೆಯ ಪತಿ ಅಶೋಕ್ ಮತ್ತು ಅವರ ಕುಟುಂಬ ಸದಸ್ಯರು ವರದಕ್ಷಿಣೆಗಾಗಿ ಪದೇ ಪದೇ ಕಿರುಕುಳ ನೀಡುತ್ತಿದ್ದರು ಮತ್ತು ಹಲ್ಲೆ ನಡೆಸುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಆಕಾಂಕ್ಷಾ 2019 ರ ನವೆಂಬರ್‌ನಲ್ಲಿ ಅಶೋಕ್ ಎಂಬುವವರನ್ನು ವಿವಾಹವಾಗಿದ್ದರು. "ಭಾನುವಾರ ಅತ್ತೆ ಶಾಂತಿ, ಸೋದರ ಮಾವ ಪ್ರದೀಪ್ ಮತ್ತು ಸೊಸೆ ಗೀತಾ, ಆಕಾಂಕ್ಷಾಗೆ ಬೆಂಕಿ ಹಚ್ಚಿದ್ದರು, ಇದರಿಂದ ತೀವ್ರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಬಳಿಕ ನಾಪತ್ತೆಯಾಗಿದ್ದಾರೆ. ಅತ್ತ ಚಿಕಿತ್ಸೆ ಫಲಕಾರಿಯಾಗದೇ ಆಕಾಂಕ್ಷಾ ಮೃತಪಟ್ಟಿದ್ದಾಳೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಇದನ್ನು ಓದಿ: ಮಾಟಗಾತಿ ಎಂದು ಶಂಕಿಸಿ ಮಕ್ಕಳೆದುರೇ ಮಹಿಳೆಗೆ ಬೆಂಕಿ ಹಚ್ಚಿ ಜೀವಂತವಾಗಿ ದಹಿಸಿದ ಕ್ರೂರಿಗಳು!

ಚೆನ್ನೈ: ತಮಿಳುನಾಡಿನ ರಾಜಧಾನಿ ಚೆನ್ನೈನ ಉಪನಗರದಲ್ಲಿ 25 ವರ್ಷದ ಮಹಿಳಾ ಟೆಕ್ಕಿಯೊಬ್ಬರನ್ನು ಸರಪಳಿಯಲ್ಲಿ ಬಂಧಿಸಿ, ಬೆಂಕಿ ಹಚ್ಚಿ ಸುಟ್ಟು ಹಾಕಿದ ಘಟನೆ ನಡೆದಿತ್ತು. ಈ ಬಗ್ಗೆ ಭಾನುವಾರ ಪೊಲೀಸರು ಮಾಹಿತಿ ನೀಡಿದ್ದರು. ಮೃತಪಟ್ಟ ಟೆಕ್ಕಿಯನ್ನು ಆರ್.ನಂದಿನಿ (25) ಎಂದು ಗುರುತಿಸಲಾಗಿದೆ. ಅರ್ಧ ದೇಹ ಸುಟ್ಟ ಸ್ಥಿತಿಯಲ್ಲಿ ಮೃತದೇಹ ಶನಿವಾರ ರಾತ್ರಿ ತಲಂಬೂರಿನಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದರು.

ಪೊಲೀಸರ ಹೇಳಿಕೆ ಪ್ರಕಾರ, ಮೃತ ಟೆಕ್ಕಿಯನ್ನು ಸರಪಳಿಯಿಂದ ಬಂಧಿಸಿ ಅವಳ ಕುತ್ತಿಗೆ, ಕೈ ಮತ್ತು ಕಾಲುಗಳ ಮೇಲೆ ಬ್ಲೇಡ್‌ ಹಲ್ಲೆ ಮಾಡಿರುವ ಸಾಧ್ಯತೆಗಳಿದ್ದು, ಬಳಿಕ ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿದೆ ಎಂದು ಶಂಕಿಸಲಾಗಿದೆ. ತನ್ನ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದಕ್ಕಾಗಿ ಮಹಿಳೆಯನ್ನು 27 ವರ್ಷದ ವ್ಯಕ್ತಿಯೊಬ್ಬನನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ನಂದಿನಿ ಹುಟ್ಟುಹಬ್ಬದ ದಿನವಾದ ಶನಿವಾರ, ಆರೋಪಿ ವೆಟ್ರಿಮಾರನ್​ ಆಕೆಗೆ ಸರ್ಪ್ರೈಸ್ ನೀಡುವುದಾಗಿ ಹೇಳಿ ಹೊರಗೆ ಕರೆದೊಯ್ದಿದ್ದ. ಬಳಿಕ ಆರೋಪಿ ಆಕೆಯನ್ನು ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಕಟ್ಟಿಹಾಕಿ ಬ್ಲೇಡ್‌ನಿಂದ ಗಾಯಗೊಳಿಸಿ ಬೆಂಕಿ ಹಚ್ಚಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದರು.

Last Updated : Dec 26, 2023, 9:05 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.