ETV Bharat / bharat

ಲಿವಿಂಗ್ ಟುಗೆದರ್‌ನಲ್ಲಿದ್ದ ಯುವತಿಯನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದ ಟೆಕ್ಕಿ! - ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ ಎಂಜಿನಿಯರ್

ಯುವತಿಯೋರ್ವಳ ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿರುವ ಅಮಾನವೀಯ ಘಟನೆ ಒಡಿಶಾದ ಪ್ರತಾಪುರ್​ ಗ್ರಾಮದಲ್ಲಿ ನಡೆದಿದೆ.

Woman set ablaze
Woman set ablaze
author img

By

Published : Jul 29, 2021, 3:14 PM IST

ಬೆರ್ಹಾಂಪುರ್​(ಒಡಿಶಾ): ತನ್ನೊಡನೆ ವಾಸಿಸುತ್ತಿದ್ದ 24 ವರ್ಷದ ಮಹಿಳಾ ಲ್ಯಾಬ್​​ ಟೆಕ್ನಿಷಿಯನ್​ ಜೊತೆ ಜಗಳ ಮಾಡಿರುವ ಸಾಫ್ಟ್‌ವೇರ್​ ಎಂಜಿನಿಯರ್ ಒಬ್ಬ ಆಕೆಯ ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ್ದಾನೆ. ಒಡಿಶಾದ ಪ್ರತಾಪುರ್​​​ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಕಳೆದ ಕೆಲವು ತಿಂಗಳಿಂದ ಈ ಯುವತಿ ಹಾಗೂ ವೃತ್ತಿಯಲ್ಲಿ ಸಾಫ್ಟ್‌ವೇರ್​ ಎಂಜಿನಿಯರ್ ಆಗಿದ್ದ ಯುವಕನ​ ಜೊತೆ​ ವಾಸಿಸುತ್ತಿದ್ದರು. ಇಬ್ಬರ ನಡುವೆ ದೈಹಿಕ ಸಂಪರ್ಕವೂ ಇತ್ತು ಎಂದು ತಿಳಿದು ಬಂದಿದೆ. ಕಳೆದ ರಾತ್ರಿ ಯಾವುದೋ ವಿಷಯಕ್ಕೆ ಜಗಳವಾಗಿದ್ದು, ಯುವಕ ಆಕೆಯ ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ್ದಾನೆ.

Woman set ablaze
ಯುವತಿಯ ಮೃತದೇಹ

ದೇಹದ ಶೇ. 90ರಷ್ಟು ಭಾಗ ಗಾಯಗೊಂಡಿದ್ದ ಯುವತಿಯನ್ನು ತಕ್ಷಣವೇ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಗಿದೆ. ಆದರೆ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಕಾರಣ ಬೆರ್ಹಾಂಪುರ್​ನಲ್ಲಿರುವ MKCG ವೈದ್ಯಕೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.

Woman set ablaze
ಘಟನೆಯಲ್ಲಿ ಮೃತಪಟ್ಟ ಯುವತಿ ಹಾಗೂ ಆರೋಪಿ ​

ಇದನ್ನೂ ಓದಿ: ಆಟವಾಡುವ ವೇಳೆ 3 ಬಟನ್ ಶೆಲ್ ನುಂಗಿದ ಬಾಲಕ: ಯಶಸ್ವಿ ಚಿಕಿತ್ಸೆ ಮೂಲಕ ಹೊರ ತೆಗೆದ ವೈದ್ಯರು

ಮಹಿಳೆ ಸಾವನ್ನಪ್ಪುವುದಕ್ಕೂ ಮುಂಚಿತವಾಗಿ ಪೊಲೀಸರ ಮುಂದೆ ತನ್ನ ಹೇಳಿಕೆ ದಾಖಲಿಸಿದ್ದಾಳೆ. ತಾನು ಆತನೊಂದಿಗೆ ಉಳಿದುಕೊಂಡು ಜೀವನ ನಡೆಸುತ್ತಿದ್ದುದಾಗಿ ತಿಳಿಸಿದ್ದಾಳೆ. ಇದಕ್ಕೆ ಸಂಬಂಧಿಸಿದಂತೆ ಬೆರ್ಹಾಂಪುರ್​ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಸೂರ್ಯಮಣಿ ಪ್ರಧಾನ್ ಮಾಹಿತಿ ನೀಡಿದ್ದಾರೆ. ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿದ ನಂತರ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.