ದಿಂಡೋರಿ (ಮಧ್ಯಪ್ರದೇಶ) : ನಿರ್ಮಾಣ ಕಂಪನಿಯ ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಂಡ ನಂತರ ದಿಂಡೋರಿ ಜಿಲ್ಲೆಯ ಶಹಪುರದಲ್ಲಿನ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಕಾಜಲ್ ಜವ್ಲಾ ಅವರಿಗೆ ವಾಟ್ಸ್ಆ್ಯಪ್ನಲ್ಲಿ ಬೆದರಿಕೆ ಕರೆ ಬಂದಿವೆ.
ಬೆದರಿಕೆ ಸಂದೇಶದ ಬಗ್ಗೆ ಕಾಜಲ್ ಡಿಂಡೋರಿ ಕಲೆಕ್ಟರ್ ವಿಕಾಸ್ ಮಿಶ್ರಾ ಅವರಿಗೆ ಮಾಹಿತಿ ನೀಡಿದ್ದು, ಅವರು ನೀಡಿದ ದೂರಿನ ಆಧಾರದ ಮೇಲೆ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನ ನಂತರ ಠಾಣಾಧಿಕಾರಿ ಅಖಿಲೇಶ್ ದಹಿಯಾ ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್‌ಡಿಎಂ ಕಾಜಲ್ ಜವ್ಲಾ, ಜಬಲ್‌ಪುರ ಜಿಲ್ಲೆಯ ಕುಂಡಮ್‌ನಿಂದ ದಿಂಡೋರಿ ಜಿಲ್ಲೆಯ ಶಹಪುರ ತಹಸಿಲ್‌ವರೆಗೆ ರಾಷ್ಟ್ರೀಯ ಹೆದ್ದಾರಿಯ ನಾಲ್ಕು ಪಥಗಳ ನಿರ್ಮಾಣದ ಯೋಜನೆ ಕೈಗೊಂಡಿರುವ ನಿರ್ಮಾಣ ಕಂಪನಿಯು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದೆ. ಈ ಹಿಂದೆ ಜಬಲ್‌ಪುರ-ಅಮರಕಂಟಕ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ವೇಳೆ ಜಿಲ್ಲಾಧಿಕಾರಿಗಳ ಅನುಮತಿಯಿಲ್ಲದೇ ಕನಿಷ್ಠ 10 ರಿಂದ 12 ಮರಗಳನ್ನು ಕಡಿಯಲಾಗಿದೆ ಎಂಬ ಆರೋಪವೂ ಗುತ್ತಿಗೆದಾರರ ಮೇಲಿತ್ತು. ಇದಕ್ಕಾಗಿ ಗುತ್ತಿಗೆದಾರನಿಗೆ ಡಿಸಿ 54,000 ರೂ. ದಂಡವನ್ನು ವಿಧಿಸಿದ್ದರು. ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವ ಇಸ್ಕಾನ್ ಇನ್ಫೋಟೆಕ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಈಗಾಗಲೇ ದೂರು ಸ್ವೀಕರಿಸಿದ್ದೇವೆ ಎಂದು ಕಾಜಲ್ ಹೇಳಿದ್ದಾರೆ.
ಇದನ್ನೂ ಓದಿ : ಬಿಹಾರದ ಗಲಭೆಕೋರರ ಗಲ್ಲಿಗೇರಿಸುವ ಶಾ, ಗುಜರಾತ್ನ ಅತ್ಯಾಚಾರಿಗಳಿಗೆ ಲಡ್ಡು ತಿನ್ನಿಸುತ್ತಿದ್ದಾರೆ: ಸಂಸದೆ ಮಹುವಾ ವಾಗ್ದಾಳಿ
NOCಯಿಂದ ದಾಖಲೆಗಳನ್ನು ನೀಡಲು ವಿಫಲ: ಅವರು ಕ್ರಷರ್‌ನ ಮಾನ್ಯ ದಾಖಲೆಗಳ ಬಗ್ಗೆ ಕೇಳಿದಾಗ ಲೆಕ್ಕಪರಿಶೋಧಕ ಸಂಜು ಸಿಂಗ್ ಮತ್ತು ಪ್ರಾಜೆಕ್ಟ್ ಮ್ಯಾನೇಜರ್ ಯಾವುದೇ ಮಾನ್ಯ ದಾಖಲೆಗಳನ್ನು ತೋರಿಸಲು ವಿಫಲರಾಗಿದ್ದಾರೆ. ಅವರು ಮಧ್ಯಪ್ರದೇಶ ರಾಜ್ಯ ಪರಿಸರ ಪ್ರಭಾವ ಮೌಲ್ಯಮಾಪನ ಪ್ರಾಧಿಕಾರ (SEIAA) ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ NOC ಯಿಂದ ದಾಖಲೆಗಳನ್ನು ನೀಡಲು ವಿಫಲರಾಗಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ : ದೆಹಲಿ ಅಬಕಾರಿ ನೀತಿ ಹಗರಣ: ಮನೀಶ್ ಸಿಸೋಡಿಯಾ ಬಂಧನ 14 ದಿನ ವಿಸ್ತರಣೆ
ವಾಟ್ಸ್ಆ್ಯಪ್ಗೆ ಬೆದರಿಕೆ ಸಂದೇಶ : ಅಕ್ರಮ ಗಣಿಗಾರಿಕೆ ಸಾರಿಗೆ ಮತ್ತು ಶೇಖರಣಾ ನಿಯಮಗಳು 2022 ರ ನಿಯಮ 18 (2) ರ ಪ್ರಕಾರ, ಕಂಪನಿಗೆ 1. 20 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ ಮತ್ತು ಈ ಪ್ರಕರಣವನ್ನು ಈಗ ದಿಂಡೋರಿಯಲ್ಲಿರುವ ಖನಿಜ ಇಲಾಖೆಗೆ ವರ್ಗಾಯಿಸಲಾಗಿದೆ. ಕಂಪನಿಗೆ ದಂಡ ವಿಧಿಸಿದ ನಂತರ ನನಗೆ ಗುತ್ತಿಗೆದಾರರಿಂದ ಕರೆ ಬಂದಿತ್ತು. ಅದಕ್ಕೆ ನಾನು ಪ್ರತಿಕ್ರಿಯಿಸಲಿಲ್ಲ. ರಾತ್ರಿ 9: 15 ರ ಸುಮಾರಿಗೆ ನನಗೆ ವಾಟ್ಸ್ಆ್ಯಪ್ಗೆ ಬೆದರಿಕೆ ಸಂದೇಶ ಬಂತು ಎಂದು ಕಾಜಲ್ ಹೇಳಿದ್ದಾರೆ. ಬೆದರಿಕೆ ಸಂದೇಶದ ಬಗ್ಗೆ ಡಿಂಡೋರಿ ಕಲೆಕ್ಟರ್ ವಿಕಾಸ್ ಮಿಶ್ರಾ ಅವರಿಗೆ ತಿಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ಕೊಟಕಪುರ ಗುಂಡಿನ ದಾಳಿ ಪ್ರಕರಣ; ಜನರು ಮಾಹಿತಿ ಹಂಚಿಕೊಳ್ಳಲು ಸಮಯ ನಿಗದಿ ಮಾಡಿದ ಎಡಿಜಿಪಿ