ETV Bharat / bharat

ಹಿರಿಯ ಮಗನಿಗಾಗಿ 12 ವರ್ಷದ ಮಗಳನ್ನು ಬಲಿ ಪಡೆದ ತಾಯಿ! - woman sacrifices daughter for son

ಮಗನ ಆರೋಗ್ಯದ ಬಗ್ಗೆ ಚಿಂತಿಸುತ್ತಿದ್ದ ತಾಯಿ, ಯಾರನ್ನಾದರೂ ಬಲಿ ಕೊಟ್ಟರೆ ಮಗ ಚೆನ್ನಾಗಿರುತ್ತಾನೆ ಎಂಬ ಮೂಢನಂಬಿಕೆಯಿಂದ ಮಗಳನ್ನೇ ಕೊಲೆ ಮಾಡಿರುವ ಘಟನೆ ರಾಜಸ್ಥಾನದಲ್ಲಿ ಜರುಗಿದೆ.

woman-sacrifices-12-year-old-daughter-for-sons-well-being
ಹಿರಿಯ ಮಗನಿಗಾಗಿ 12 ವರ್ಷದ ಮಗಳನ್ನು ಬಲಿ ಪಡೆದ ತಾಯಿ!
author img

By

Published : Nov 6, 2022, 8:52 PM IST

ಬರಾನ್ (ರಾಜಸ್ಥಾನ): ರಾಜಸ್ಥಾನದ ಬರಾನ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬರು ಯಾರನ್ನಾದರೂ ಬಲಿ ಕೊಟ್ಟರೆ ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ಮಗ ಚೇತರಿಸಿಕೊಳ್ಳುತ್ತಾನೆ ಎಂಬ ಕನಸು ಕಂಡು, ಅದೇ ಭ್ರಮೆಯಲ್ಲಿ ಮಗಳನ್ನು ಬಲಿ ಕೊಟ್ಟಿದ್ದಾಳೆ.

ರೇಖಾ ಎಂಬಾಕೆಯೇ ಮಗಳನ್ನು ಕೊಂದ ಪಾಪಿ ತಾಯಿಯಾಗಿದ್ದು, 12 ವರ್ಷದ ಸಂಜನಾ ಎಂಬ ಬಾಲಕಿ ತಾಯಿಯಿಂದ ಕೊಲೆಯಾದ ನತದೃಷ್ಟೆ. ಈ ಪ್ರಕರಣದ ಸಂಬಂಧ ಆರೋಪಿ ರೇಖಾಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಬೆಚ್ಚಿಬೀಳಿಸುವ ವಿಷಯ ಬೆಳಕಿಗೆ ಬಂದಿದೆ.

ರೇಖಾ ತನ್ನ 16 ವರ್ಷದ ಹಿರಿಯ ಮಗ ನಿಕೇಂದ್ರ ಸಿಂಗ್‌ನನ್ನು ತುಂಬಾ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದಳು. ಆದರೆ, ಮಗನ ಹೃದಯದಲ್ಲಿ ರಂಧ್ರ ಇತ್ತು. ಹೀಗಾಗಿಯೇ ಮಗನ ಆರೋಗ್ಯದ ಬಗ್ಗೆ ಯಾವಾಗಲೂ ಚಿಂತಿತಳಾಗಿದ್ದಳು. ಇದರಿಂದಾಗಿ ಆಕೆಯ ಮಾನಸಿಕ ಸ್ಥಿತಿಯೂ ಚೆನ್ನಾಗಿರಲಿಲ್ಲ ಎಂದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದರ ನಡುವೆ ಯಾರನ್ನಾದರೂ ಬಲಿ ಕೊಟ್ಟರೆ ಮಗ ಆರೋಗ್ಯವಾಗಿರುತ್ತಾನೆ ಎಂದು ರೇಖಾ ಕನಸು ಕಾಣುತ್ತಿದ್ದಳು. ಹೀಗಿರುವಾಗ ಕೆಲ ದಿನಗಳ ಹಿಂದೆ ಮಲಗಿದ್ದಾಗ ಪತಿ ಶಿವರಾಜ್ ಮೇಲೆಯೇ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದು, ಈ ವೇಳೆ ಆತ ಎಚ್ಚರಗೊಂಡು ಬದುಕುಳಿದಿದ್ದಾನೆ. ಆದರೆ, ಶನಿವಾರ 12 ವರ್ಷದ ಮಗಳು ಸಂಜನಾ ಮತ್ತು 7 ವರ್ಷದ ಕಿರಿಯ ಮಗ ಸಿಂಗಂ ಮೇಲೆ ದಾಳಿ ಮಾಡಿದ್ದಾಳೆ. ಆಗ ಸಿಂಗಂ ತಪ್ಪಿಸಿಕೊಂಡಿದ್ದಾನೆ. ಮಗಳು ಸಂಜನಾ ಕೈಗೆ ಸಿಕ್ಕಿಬಿದ್ದು ಕತ್ತು ಹಿಸುಕಿ ಕೊಂದಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ತಾಯಿ, ಸಹೋದರಿ ಸೇರಿ ಕುಟುಂಬದ ನಾಲ್ವರ ಕೊಚ್ಚಿ ಕೊಲೆಗೈದ 15 ವರ್ಷದ ಬಾಲಕ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.