ETV Bharat / bharat

ಒಟ್ಟಿಗಿದ್ದು ಮದುವೆಗೆ ನಿರಾಕರಿಸಿದ ಪ್ರಿಯಕರ; ಕತ್ತು ಸೀಳಿ ಸೂಟ್​​ಕೇಸ್‌ಗೆ ತುಂಬಿದ ಪ್ರಿಯತಮೆ

ಜತೆಗೆ ವಾಸವಿದ್ದು ಮದುವೆ ಮಾಡಿಕೊಳ್ಳಲು ನಿರಾಕರಿಸಿದ ಯುವಕನ ಕತ್ತು ಸೀಳಿ ಕೊಲೆಗೈದ ಯುವತಿ ಆತನ ಮೃತದೇಹವನ್ನು ಸಾಗಿಸುವಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ.

author img

By

Published : Aug 8, 2022, 3:55 PM IST

woman killed her boyfriend by slitting his throat

ನವದೆಹಲಿ/ಗಾಜಿಯಾಬಾದ್​: ಮದುವೆಯಾಗಲು ನಿರಾಕರಿಸಿದ ಪ್ರೇಮಿಯನ್ನು ಪ್ರಿಯತಮೆಯೋರ್ವಳು ಕತ್ತು ಕುಯ್ದು ಸೂಟ್​​ಕೇಸ್​​ನಲ್ಲಿ ತುಂಬಿರುವ ಘಟನೆ ಗಾಜಿಯಾಬಾದ್​​ನಲ್ಲಿ ನಡೆದಿದೆ. ಕೃತ್ಯವೆಸಗಿರುವ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.

Women killed her boyfriend
ಕತ್ತು ಕೊಯ್ದು ಸೂಟ್​​ಕೇಸ್​​ನಲ್ಲಿ ತುಂಬಿದ ಪ್ರಿಯತಮೆ

ದೆಹಲಿಯ ತಿಲಾ ಮೋರ್ ಪೊಲೀಸ್ ಠಾಣಾ ವ್ಯಾಪ್ತಿಯ ತುಳಸಿ ನಿಕೇತನ ಪ್ರದೇಶದಲ್ಲಿ ಘಟನೆ ನಡೆದಿದೆ. ಕಳೆದ ನಾಲ್ಕು ವರ್ಷಗಳಿಂದ ಹಿಂದೂ ಸಮುದಾಯದ ಮಹಿಳೆ ಹಾಗೂ ಫಿರೋಜ್​​​ ಎಂಬಾತ ಲಿವ್​ ಇನ್ ರಿಲೇಶನ್​ಶಿಪ್​​ನಲ್ಲಿದ್ದರು. ಕೆಲವು ದಿನಗಳ ಹಿಂದೆ ತನ್ನನ್ನು ಮದುವೆಯಾಗುವಂತೆ ಯುವತಿ ಆತನ ಮೇಲೆ ಒತ್ತಡ ಹಾಕಿದ್ದಾಳೆ. ಇದಕ್ಕೆ ಯುವಕ ನಿರಾಕರಿಸಿದ್ದ. ಇದರಿಂದ ಕೋಪಗೊಂಡ ಯುವತಿ ಬ್ಲೇಡ್‌ನಿಂದ ಆತನ ಕತ್ತು ಸೀಳಿ, ಹತ್ಯೆ ಮಾಡಿದ್ದಾಳೆ. ಮೃತದೇಹವನ್ನು ಹೊರಗಡೆ ಸಾಗಿಸಲು ದೊಡ್ಡ ಸೂಟ್​ಕೇಸ್​ ಖರೀದಿಸಿದ್ದಳು. ಸೂಟ್​ಕೇಸ್​​ನಲ್ಲಿ ಮೃತದೇಹ ತುಂಬಿಕೊಂಡು ಹೊರಹೋಗುತ್ತಿದ್ದಾಗ ಪೊಲೀಸರಿಗೆ ಅನುಮಾನ ಬಂದಿದೆ. ವಿಚಾರಣೆ ನಡೆಸಿ ಸೂಟ್​​ಕೇಸ್ ತಪಾಸಣೆ ನಡೆಸಿದಾಗ ಪ್ರಕರಣ ಬಯಲಾಗಿದೆ.

ಇದನ್ನೂ ಓದಿ: ಮಹಿಳೆಯರೆದುರು ಅಶ್ಲೀಲ ವರ್ತನೆ: ದುರುಳನ ಖಾಸಗಿ ಅಂಗಕ್ಕೆ ಬೆಂಕಿ ಹಚ್ಚಿದ ಗ್ರಾಮಸ್ಥರು

ಆರೋಪಿ ಮಹಿಳೆ ಕಳೆದ ನಾಲ್ಕು ವರ್ಷಗಳ ಹಿಂದೆ ಪತಿಯನ್ನು ಬಿಟ್ಟು ಈ ಯುವಕನೊಂದಿಗೆ ಲಿವ್​ ಇನ್ ರಿಲೇಶನ್​ಶಿಪ್​​ನಲ್ಲಿ ವಾಸವಿದ್ದಳಂತೆ. ಯುವಕ ದೆಹಲಿಯಲ್ಲಿ ಹೇರ್ ಡ್ರೆಸ್ಸರ್​ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಈ ನಡುವೆ ಪ್ರಕರಣವನ್ನು 'ಲವ್​ ಜಿಹಾದ್'​ ಎಂದೂ ಹೇಳಲಾಗ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.