ETV Bharat / bharat

ನಿಂಬೆಹಣ್ಣಿಗಾಗಿ ಸೊಸೆ ಜೊತೆ ಅತ್ತೆ- ನಾದಿನಿಯರ ಹೊಡೆದಾಟ.. ಕೊಲೆಯಲ್ಲಿ ಅಂತ್ಯಕಂಡ ಜಗಳ!

author img

By

Published : Apr 28, 2022, 9:40 AM IST

Updated : Apr 28, 2022, 10:12 AM IST

ಹಣದುಬ್ಬರದ ಈ ಯುಗದಲ್ಲಿ ನಿಂಬೆಗಿಂತ ಜೀವದ ಬೆಲೆಯೇ ಅಗ್ಗವಾಗಿದೆ. ಒಂದು ನಿಂಬೆ ಹಣ್ಣಿಗಾಗಿ ಅತ್ತೆ - ಸೊಸೆ ಹೊಡೆದಾಡಿಕೊಂಡಿದ್ದು, ಕೊಲೆಯಲ್ಲಿ ಇವರ ಜಗಳ ಅಂತ್ಯ ಕಂಡಿರುವ ಘಟನೆ ಬಿಹಾರದ ಪೂರ್ವ ಚಂಪಾರಣ್​ ಜಿಲ್ಲೆಯಲ್ಲಿ ನಡೆದಿದೆ.

dispute of plucking lemons in Bihar  woman killed by strangulation in motihari  murder case in Chhaudadano Police Station  ಬಿಹಾರದಲ್ಲಿ ನಿಂಬೆಹಣ್ಣಿಗಾಗಿ ಸೊಸೆ ಜೊತೆ ಅತ್ತೆ-ನಾದಿನಿಯರ ಹೊಡೆದಾಟ  ಪೂರ್ವ ಚಂಪಾರಣ್​ನಲ್ಲಿ ಕೊಲೆಯಲ್ಲಿ ಅಂತ್ಯಕಂಡ ಅತ್ತೆ ಮತ್ತು ಸೊಸೆ ಜಗಳ  ಬಿಹಾರ ಅಪರಾಧ ಸುದ್ದಿ
ನಿಂಬೆಹಣ್ಣಿಗಾಗಿ ಸೊಸೆ ಜೊತೆ ಅತ್ತೆ-ನಾದಿನಿಯರ ಹೊಡೆದಾಟ

ಪೂರ್ವ ಚಂಪಾರಣ್: ಬೇಸಿಗೆ ವೇಳೆ ನಿಂಬೆಗೆ ಎಲ್ಲಿಲ್ಲದ ಬೇಡಿಕೆ ಇರುತ್ತೆ. ಈಗ ಬೇಸಿಗೆಕಾಲ ಇರುವುದರಿಂದ ಮಾರುಕಟ್ಟೆಯಲ್ಲಿ ನಿಂಬೆ ಬೆಲೆ ಅಧಿಕವಾಗಿದೆ. ಬೆಲೆ ಏರಿಕೆ ಮತ್ತು ಸರಕು - ಸಾಗಣೆ ಕಡಿಮೆಯಾಗಿರುವುದರಿಂದ ಮನೆಯಲ್ಲಿ ಇದ್ದ ನಿಂಬೆಯನ್ನೇ ಸದುಪಯೋಗ ತಕ್ಕಂತೆ ಬಳಸಬೇಕಾಗುತ್ತದೆ. ಇದೇ ನಿಂಬೆ ವಿಚಾರವಾಗಿ ಅತ್ತೆ- ಸೊಸೆ ನಡುವೆ ಜಗಳವಾಗಿ ಕೊಲೆಯಲ್ಲಿ ಅಂತ್ಯ ಕಂಡಿದೆ. ಈ ಘಟನೆ ಛೌಡಾದನೋ ಪೊಲೀಸ್ ಠಾಣೆ ವ್ಯಾಪ್ತಿಯ ಚೈನ್‌ಪುರ ಗ್ರಾಮದಲ್ಲಿ ನಡೆದಿದೆ.

ಏನಿದು ಘಟನೆ: ಚೈನ್‌ಪುರ ಗ್ರಾಮದ ನಿವಾಸಿ ಸುನಿಲ್ ಬೈತಾ ಕುಟುಂಬ ವಾಸಿಸುತ್ತಿದೆ. ಸುನಿಲ್ ಬೈತಾ ಮತ್ತು ಆತನ ತಂದೆ ಬೇರೆ ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಮನೆಯಲ್ಲಿ ಸುನಿಲ್​ ಬೈತಾ ಪತ್ನಿ ಕಾಜಲ್ ದೇವಿ (28), ಆತನ ತಾಯಿ ಮತ್ತು ಅಕ್ಕ - ತಂಗಿಯರು ವಾಸಿಸುತ್ತಿದ್ದಾರೆ.

ನಿಂಬೆಗಾಗಿ ಕೊಲೆ: ಆದರೆ, ಮನೆಯಲ್ಲಿ ನಿಂಬೆಹಣ್ಣಿನ ವಿಚಾರಕ್ಕಾಗಿ ಅತ್ತೆ- ಸೊಸೆ ಮಧ್ಯೆ ಜಗಳವಾಗಿದೆ. ಈ ಜಗಳಕ್ಕೆ ಅತ್ತೆ ಜೊತೆ ನಾದಿನಿಯರಿಬ್ಬರು ಸೇರಿದ್ದಾರೆ. ಇವರ ಮಧ್ಯೆ ಮಾತಿಗೆ ಮಾತು ಬೆಳೆದಿದ್ದು, ಜಗಳ ವಿಕೋಪಕ್ಕೆ ತಿರುಗಿದೆ. ಅತ್ತೆ- ನಾದಿನಿಯರು ಸೇರಿ ಸೊಸೆಯನ್ನು ತೀವ್ರವಾಗಿ ಥಳಿಸಿ, ನಂತರ ಹಗ್ಗದಿಂದ ಕಾಜಲ್​ನ ಕತ್ತಿಗೆ ಗಟ್ಟಿಯಾಗಿ ಬಿಗಿದು ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಬಳಿಕ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಓದಿ: ವಿಡಿಯೋ: ನಿಂಬೆಗೂ ಬಂತು ಬಂಗಾರದ ಬೆಲೆ; 50 ಕೆಜಿ ಕದ್ದು ಪರಾರಿಯಾದ ಕಳ್ಳ

ಕುತ್ತಿಗೆಯಲ್ಲಿ ಹಗ್ಗದ ಗುರುತು: ನೆರೆಹೊರೆಯವರ ಮಾಹಿತಿಯಿಂದ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ತನಿಖೆ ಕೈಗೊಂಡರು. ಕಾಜಲ್ ದೇವಿ ತಲೆಯ ಮೇಲೆ ಗಾಯ ಮತ್ತು ಕುತ್ತಿಗೆಗೆ ಹಗ್ಗದ ಗುರುತು ಪತ್ತೆಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮೋತಿಹಾರಿಯ ಆಸ್ಪತ್ರೆಗೆ ಕಳುಹಿಸಲಾಗಿದೆ. ಮೃತ ಮಹಿಳೆಯ ಪತಿ ಮತ್ತು ಮಾವ ಬೇರೆ ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದು, ಘಟನೆಯ ಸಮಯದಲ್ಲಿ ಅವರು ಮನೆಯಲ್ಲಿ ಇರಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅತ್ತೆ- ನಾದಿನಿಯರು ಮನೆ ಬಿಟ್ಟು ಪರಾರಿ: ಕೊಲೆ ಬಳಿಕ ಆರೋಪಿ ಅತ್ತೆ ಹಾಗೂ ನಾದಿಯರಿಬ್ಬರೂ ಕೂಡ ಮನೆ ಬಿಟ್ಟು ತಲೆಮರೆಸಿಕೊಂಡಿದ್ದಾರೆ. ಮೃತ ಮಹಿಳೆಯ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿತ್ತು. ನಂತರ ಮಹಿಳೆಯ ಕುಟುಂಬಸ್ಥರು ಸ್ಥಳಕ್ಕೆ ತಲುಪಿದ್ದಾರೆ. ಘಟನೆಯಿಂದ ಗ್ರಾಮದಲ್ಲಿ ಭಯ ಮೂಡಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ಘಟನೆ ಕುರಿತು ಛೌಡಾದನೋ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಪೊಲೀಸರು ಪ್ರಕರಣದ ತನಿಖೆಯಲ್ಲಿ ತೊಡಗಿದ್ದಾರೆ.

ಓದಿ: ಮದುವೆ ಮನೆಯಲ್ಲಿ ಲಡ್ಡುಗಾಗಿ ಹೊಡೆದಾಟ.. ಠಾಣೆ ಮೆಟ್ಟಿಲೇರಿದ ವಧು - ವರನ ಕುಟುಂಬಸ್ಥರು!

Last Updated : Apr 28, 2022, 10:12 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.