ETV Bharat / bharat

ಭಾರೀ ಮಳೆ.. ನವದೆಹಲಿಯ ರೈಲ್ವೆ ಫ್ಲಾಟ್​ಫಾರ್ಮ್​ನಲ್ಲಿ ವಿದ್ಯುತ್ ಕಂಬ ಸ್ಪರ್ಶಿಸಿ ಮಹಿಳೆ ಸಾವು - ನವದೆಹಲಿಯ ರೈಲು ನಿಲ್ದಾಣ

ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಮಹಿಳೆಯೊಬ್ಬರು ವಿದ್ಯುತ್ ಕಂಬವನ್ನು ಸ್ಪರ್ಶಿಸಿ ಮೃತಪಟ್ಟಿರುವ ಘಟನೆ ನಡೆದಿದೆ.

ಸಾಕ್ಷಿ ಅಹುಜಾ
ಸಾಕ್ಷಿ ಅಹುಜಾ
author img

By

Published : Jun 25, 2023, 5:46 PM IST

ನವದೆಹಲಿ: ಶನಿವಾರ ರಾತ್ರಿಯಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನವದೆಹಲಿಯ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ಗೆ ಮಳೆ ನೀರು ನುಗ್ಗಿದೆ. ಈ ವೇಳೆ ಮಹಿಳೆಯೊಬ್ಬರು ವಿದ್ಯುತ್ ಕಂಬವನ್ನು ಸ್ಪರ್ಶಿಸಿ ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ಪೂರ್ವ ದೆಹಲಿಯ ಪ್ರೀತ್ ವಿಹಾರ್ ನಿವಾಸಿ ಸಾಕ್ಷಿ ಅಹುಜಾ ಎಂದು ಗುರುತಿಸಲಾಗಿದೆ.

ಸಾಕ್ಷಿ ಅಹುಜಾ ಅವರು ತಮ್ಮ ಕುಟುಂಬ ಸದಸ್ಯರು ಮತ್ತು ಮೂವರು ಮಕ್ಕಳೊಂದಿಗೆ ಬೆಳಗ್ಗೆ 5.30 ಕ್ಕೆ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾರೆ. ನೀರಿನಿಂದ ತುಂಬಿದ ಪ್ಲಾಟ್‌ಫಾರ್ಮ್‌ನಲ್ಲಿ ನಡೆಯಲು ಆಸರೆಯಾಗಿ ವಿದ್ಯುತ್ ಕಂಬವನ್ನು ಹಿಡಿದಿದ್ದಾರೆ. ತಕ್ಷಣ ಅವರು ವಿದ್ಯುತ್ ಆಘಾತಕ್ಕೆ ಒಳಗಾಗಿದ್ದಾರೆ. ನಂತರ ಅದು ಸಾಕ್ಷಿ ಸಾವಿಗೆ ಕಾರಣವಾಗಿದೆ.

ನವದೆಹಲಿಯ ರೈಲು ನಿಲ್ದಾಣದ ನಿರ್ಗಮನ ಸಂಖ್ಯೆ ಒಂದರ ಬಳಿ ಈ ದುರ್ಘಟನೆ ಸಂಭವಿಸಿದೆ. ವಿಷಯ ತಿಳಿದು ಕುಟುಂಬಸ್ಥರು ಸ್ಥಳಕ್ಕಾಗಮಿಸಿದಾಗ ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದನ್ನು ಕಂಡುಕೊಂಡಿದ್ದಾರೆ. "ತಕ್ಷಣ ಅವರ ಸಹೋದರಿ ಮಾಧ್ವಿ ಚೋಪ್ರಾ ಗಾಯಗೊಂಡ ಸಾಕ್ಷಿ ಅಹುಜಾ ಅವರನ್ನು ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು" ಎಂದು ಪೊಲೀಸರು ತಿಳಿಸಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದಿರುವ ಮೃತಳ ತಂದೆ: ಸಂತ್ರಸ್ತೆಯ ಸಹೋದರಿ ಮಾಧ್ವಿ ಚೋಪ್ರಾ ಅವರು ಘಟನೆಗೆ ಸಂಬಂಧಪಟ್ಟಂತೆ ಅಧಿಕಾರಿಗಳ ನಿರ್ಲಕ್ಷ್ಯವನ್ನು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಮ್ಮ ಮಗಳ ಸಾವಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸಾಕ್ಷಿ ಅಹುಜಾ ತಂದೆ ಲೋಕೇಶ್ ಕುಮಾರ್ ಚೋಪ್ರಾ ಆರೋಪಿಸಿದ್ದಾರೆ.

ಅಪಘಾತದ ಬಗ್ಗೆ ರೈಲ್ವೆ ಮತ್ತು ಪೊಲೀಸರು ತನಿಖೆ : ಸಂತ್ರಸ್ತೆಯ ತಂದೆ ಲೋಕೇಶ್ ಕುಮಾರ್ ಚೋಪ್ರಾ ಅವರು ಪ್ರತಿಕ್ರಿಯಿಸಿದ್ದು,"ನಾವು ಚಂಡೀಗಢದ ಕಡೆಗೆ ಹೋಗುತ್ತಿದ್ದೆವು. ಈ ವೇಳೆ ನನ್ನ ಮಗಳು ಸಾಕ್ಷಿ ಅಹುಜಾಗೆ ವಿದ್ಯುತ್ ಸ್ಪರ್ಶವಾಗಿದೆ ಎಂಬ ಮಾಹಿತಿ ತಿಳಿದು ಬಂದಾಗ ನಾನು ಪಾರ್ಕಿಂಗ್ ಸ್ಥಳದಲ್ಲಿದ್ದೆ" ಎಂದು ಹೇಳಿದ್ದಾರೆ. ಕಂಬದಲ್ಲಿ ವಿದ್ಯುತ್ ತಂತಿಗಳು ತೆರೆದಿರುವುದು ಸಿಸಿಟಿವಿಯಲ್ಲಿ ಕಂಡುಬಂದಿದೆ. ಇದು ಕೆಲವೊಮ್ಮೆ ವಿಚಿತ್ರ ಅಪಘಾತಕ್ಕೆ ಕಾರಣವಾಗಬಹುದು. ಅಪಘಾತದ ಬಗ್ಗೆ ರೈಲ್ವೆ ಮತ್ತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದಿದ್ದಾರೆ.

ಸ್ಕೂಟಿ ಸ್ಕಿಡ್ ಆಗಿ ದುರ್ಘಟನೆ : ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ 23ರ ಹರೆಯದ ಮಹಿಳೆಯೊಬ್ಬರು ವಿದ್ಯುತ್ ಕಂಬಕ್ಕೆ ತಗುಲಿ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದರು. ಮೃತರನ್ನು ಅಖಿಲಾ ಎಂದು ಗುರುತಿಸಲಾಗಿದೆ. ಕಚೇರಿಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ನೀರಿನಿಂದ ತುಂಬಿದ ರಸ್ತೆಯನ್ನು ದಾಟುವಾಗ ಅವರ ಸ್ಕೂಟಿ ಸ್ಕಿಡ್ ಆಗಿ ದುರ್ಘಟನೆ ಸಂಭವಿಸಿತ್ತು.

ಇದನ್ನೂ ಓದಿ: Mumbai crime: ಚಾಕು, ಬ್ಲೇಡ್​ನಿಂದ ಯುವತಿಯ ಮೇಲೆ ಹಲ್ಲೆ, 46ಕ್ಕೂ ಹೆಚ್ಚು ಹೊಲಿಗೆ: ನಾಯಿಗಳಿಗೆ ಆಹಾರ ಹಾಕಿದ್ದಕ್ಕೆ ಅಟ್ಯಾಕ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.