ETV Bharat / bharat

ಚಲಿಸುತ್ತಿದ್ದ ಬಸ್‌ ಡ್ರೈವರ್‌ಗೆ ಫಿಟ್ಸ್‌... ಈ ಮಹಿಳೆ ತೋರಿದ ಧೈರ್ಯಕ್ಕೆ ಎಲ್ಲ ಪ್ರಯಾಣಿಕರು ಸೇಫ್‌..!

Pune Lady Driver Save Lives: ಚಲಿಸುತ್ತಿದ್ದ ಬಸ್‌ ಚಾಲಕನಿಗೆ ಫಿಟ್ಸ್‌ ಬಂದ ಹಿನ್ನೆಲೆಯಲ್ಲಿ ಕೂಡಲೇ ಈತನ ನೆರವಿಗೆ ಧಾವಿಸಿದ ಅದೇ ಬಸ್‌ನಲ್ಲಿದ್ದ ಮಹಿಳೆಯೊಬ್ಬರು ಬಸ್‌ ಅನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಅದರಲ್ಲಿ ಎಲ್ಲ ಪ್ರಯಾಣಿಕರನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

woman drives bus for 10 km after driver suffers seizure
ಚಲಿಸುತ್ತಿದ್ದ ಬಸ್‌ ಡ್ರೈವರ್‌ಗೆ ಫಿಟ್ಸ್‌... ಈ ಮಹಿಳೆಯಿಂದ ಎಲ್ಲ ಪ್ರಯಾಣಿಕರು ಸೇಫ್‌..!
author img

By

Published : Jan 15, 2022, 11:54 PM IST

Updated : Jan 16, 2022, 6:59 AM IST

ಪುಣೆ (ಮಹಾರಾಷ್ಟ್ರ): ಚಲಿಸುತ್ತಿದ್ದ ಮಿನಿ ಬಸ್‌ ಚಾಲಕನಿಗೆ ಫಿಟ್ಸ್‌ ಬಂದ ಹಿನ್ನೆಲೆಯಲ್ಲಿ ಕೂಡಲೇ ಆತನ ನೆರವಿಗೆ ಬಂದ ಮಹಿಳೆಯೊಬ್ಬರು ಬಸ್‌ ಅನ್ನು ಚಾಲನೆ ಮಾಡಿ ಮಕ್ಕಳು ಸಹಿತ ಅದರಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಪ್ರಾಣಾಪಾಯದಿಂದ ಪಾರು ಮಾಡಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

ಬಸ್ಸಿನಲ್ಲಿದ್ದ ಮಕ್ಕಳು ಹಾಗೂ ಮಹಿಳೆಯರು ಪುಣೆ ಸಮೀಪದ ಶಿರೂರ್‌ನಲ್ಲಿ ಇರುವ ಕೃಷಿ ಪ್ರವಾಸಿ ಕೇಂದ್ರಕ್ಕೆ ಭೇಟಿ ನೀಡಿ ವಾಪಸ್‌ ಬರುತ್ತಿದ್ದಾಗ ಬಸ್‌ನ ಚಾಲಕನಿಗೆ ಮೂರ್ಛೆ ಬಂದು ಏಕಾಏಕಿ ಕೆಳಗಡೆ ಬಿದ್ದು ಹೋಗಿದ್ದಾರೆ. ಖಾಲಿ ಇದ್ದ ರಸ್ತೆಯಲ್ಲಿ ಬಸ್‌ ಅನ್ನು ನಿಲ್ಲಿಸಿ ಫಿಟ್ಸ್‌ ಬಂದಿರುವ ಬಗ್ಗೆ ಕೈ ಸನ್ನೆಯಲ್ಲೇ ತಿಳಿಸಿದ್ದಾನೆ.

ಧೈರ್ಯ ತೋರಿ ಪ್ರಯಾಣಿಕರ ಜೀವ ಉಳಿಸಿದ ಮಹಿಳೆ

ಈ ವೇಳೆ ಬಸ್‌ನಲ್ಲಿದ್ದ ಮಕ್ಕಳು ಅಳಲು ಶುರು ಮಾಡಿದ್ದಾರೆ. ಮಹಿಳೆಯರು ಕೂಡ ಕ್ಷಣಕಾಲ ಆತಂಕಕ್ಕೆ ಒಳಗಾಗಿದ್ದರು. ಅದೇ ಬಸ್ಸಿನಲ್ಲಿದ್ದ 42 ವರ್ಷದ ಯೋಗಿತಾ ಸತವ್‌ ಎಂಬ ಮಹಿಳೆ ಕೂಡಲೇ ಡ್ರೈವರ್‌ ಸೀಟಿಗೆ ಬಂದು ಬಸ್ಸನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಧೈರ್ಯದಿಂದಲೇ ಬಸ್‌ ಅನ್ನು ಚಾಲನೆ ಮಾಡುವ ಮೂಲಕ ನೇರವಾಗಿ ಆಸ್ಪತ್ರೆಗೆ ಬಂದಿದ್ದಾರೆ. ಬಳಿಕ ಎಲ್ಲ ಪ್ರಯಾಣಿಕರನ್ನು ತಮ್ಮ ತಮ್ಮ ಮನೆಗಳಿಗೆ ಸೇರಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಯೋಗಿತಾ, ನನಗೆ ಕಾರು ಚಾಲನೆ ಮಾಡುವುದು ಗೊತ್ತಿತ್ತು. ಹೀಗಾಗಿಯೇ ಆ ಸಮಯದಲ್ಲಿ ಬಸ್‌ ಅನ್ನು ನಿಯಂತ್ರಿಸಬೇಕು ಎಂದು ಅಂದುಕೊಂಡೆ. ಅಸ್ವಸ್ಥಗೊಂಡಿದ್ದ ಚಾಲಕನಿಗೆ ಮೊದಲು ವೈದ್ಯಕೀಯ ಚಿಕಿತ್ಸೆ ಕೊಡಿಬೇಕೆಂಬುದು ಮೊದಲ ಆದ್ಯತೆಯಾಗಿತ್ತು. ಕೂಡಲೇ ಸಮೀಪದಲ್ಲಿ ಇದ್ದ ಆಸ್ಪತ್ರೆಗೆ ಬಸ್‌ ಅನ್ನು ಚಾಲನೆ ಮಾಡಿಕೊಂಡು ಹೋದೆ ಎಂದು ಹೇಳಿದ್ದಾರೆ.

10 ಕಿ.ಮೀ ಮಿನಿ ಬಸ್‌ ಅನ್ನು ಯೋಗಿತಾ ಅವರು ಚಾಲನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗ್ತಿದೆ. ಮಹಿಳೆಯ ಈ ಧೈರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಸಿಮೆಂಟ್​ ಪಿಲ್ಲರ್​ಗೆ ಡಿಕ್ಕಿ ಹೊಡೆದ ಮುಂಬೈ-ದೆಹಲಿ ರಾಜಧಾನಿ ಎಕ್ಸ್​ಪ್ರೆಸ್​.. ತಪ್ಪಿತು ದೊಡ್ಡ ದುರಂತ

Last Updated : Jan 16, 2022, 6:59 AM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.