ಕೊಯಮತ್ತೂರು: ಪಿಜಿ ನೀಟ್‌ಗೆ ತಯಾರಿ ನಡೆಸುತ್ತಿದ್ದ ವೈದ್ಯೆ ಗುರುವಾರ ಮೆಟ್ಟುಪಾಳ್ಯಂನಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೈದ್ಯೆ ರಾಶಿ (27) ಅವರು ಜವಳಿ ಅಂಗಡಿ ನಡೆಸುತ್ತಿರುವ ಅಭಿಷೇಕ್ (30) ಅವರನ್ನು 6 ತಿಂಗಳ ಹಿಂದೆ ವಿವಾಹವಾಗಿದ್ದರು. ರಾಸಿ 2020 ರಲ್ಲಿ ತನ್ನ MBBS ಪೂರ್ಣಗೊಳಿಸಿದ್ದರು.
ಪೊಲೀಸರ ಪ್ರಕಾರ ರಾಸಿ ಪಿಜಿ ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಕಳೆದ ಕೆಲವು ದಿನಗಳಿಂದ ಆಕೆ ಪರೀಕ್ಷೆಯ ಭಯದಲ್ಲಿದ್ದರು ಎನ್ನಲಾಗಿದೆ. ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಆಕೆಯ ತಾಯಿ ಸೆಂತಾಮರೈ ರಾಸಿಯ ಕೋಣೆಯ ಬಾಗಿಲು ತಟ್ಟಿದ್ದಾರೆ. ಅವರು ಪ್ರತಿಕ್ರಿಯಿಸದ ಕಾರಣ, ಸೆಂತಾಮರೈ ಕಿಟಕಿಯಿಂದ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಕುಟುಂಬಸ್ಥರು ಮೆಟ್ಟುಪಾಳ್ಯಂ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಮೆಟ್ಟುಪಾಳ್ಯಂ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: 15 ವರ್ಷಗಳಲ್ಲಿ ಬೆಂಗಳೂರಿಗೆ ಕೊಟ್ಟ ಅನುದಾನ : ಸಮಗ್ರ ತನಿಖೆಗೆ ಹೆಚ್ಡಿಕೆ ಒತ್ತಾಯ