ETV Bharat / bharat

MP crime: ಮಧ್ಯಪ್ರದೇಶದಲ್ಲಿ ಮಹಿಳೆಯ ಭೀಕರ ಹತ್ಯೆ; ಕಣ್ಣು, ಮೂಗು, ಕಿವಿ, ನಾಲಿಗೆ, ಚರ್ಮ ಸುಲಿದು ಪೈಶಾಚಿಕತೆ!

Madhya Pradesh woman Murder case: ಮಧ್ಯ ಪ್ರದೇಶದಲ್ಲಿ ಮಹಿಳೆಯ ಬರ್ಬರ ಹತ್ಯೆ ನಡೆದಿದೆ. ದುಷ್ಕರ್ಮಿಗಳು ಮೃತದೇಹದ ಕಣ್ಣು, ಮೂಗು, ಕಿವಿ ಮತ್ತು ನಾಲಿಗೆಯನ್ನೂ ಕಿತ್ತು ಹಾಕಿ ಪೈಶಾಚಿಕತೆ ಮೆರೆದಿದ್ದಾರೆ.

MP mystery murder case
MP mystery murder case
author img

By

Published : Jul 31, 2023, 8:59 AM IST

Updated : Jul 31, 2023, 9:21 AM IST

ಶಹದೋಲ್ (ಮಧ್ಯಪ್ರದೇಶ): ಶಹದೋಲ್ ಜಿಲ್ಲೆಯಲ್ಲಿ ವಿಚಿತ್ರ ಹಾಗೂ ನಿಗೂಢ ರೀತಿಯಲ್ಲಿ ಮಹಿಳೆಯೊಬ್ಬರ ಮೃತದೇಹ ಸಿಕ್ಕಿದೆ. ಮಹಿಳೆಯ ತಲೆಕೂದಲುಗಳನ್ನು ಕತ್ತರಿಸಲಾಗಿದೆ. ಮೃತದೇಹದಿಂದ ಕಣ್ಣು, ಮೂಗು, ಕಿವಿ ಹಾಗು ನಾಲಿಗೆ ಕಾಣೆಯಾಗಿವೆ. ಮೃತದೇಹದ ಪ್ರಮುಖ ಅಂಗಾಂಗಳು ಕಾಣೆಯಾಗಿದ್ದರಿಂದ ಪ್ರಕರಣದ ತನಿಖೆ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ನಿಗೂಢ ಕೊಲೆ ಪ್ರಕರಣದ ಹಿಂದೆ ಬಿದ್ದಿರುವ ಪೊಲೀಸರು, ಆರೋಪಿಗಳಿಗೆ ಶೋಧ ತೀವ್ರಗೊಳಿಸಿದ್ದಾರೆ.

ಸಂಪೂರ್ಣ ವಿವರ: ಶಹದೋಲ್ ಜಿಲ್ಲೆಯ ಜೈತ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪಟಪರಿಹ ಟೋಳದ 55 ವರ್ಷದ ಜುನಿ ಬಾಯಿ ಗೊಂಡ್ ಎಂಬ ಮಹಿಳೆಯ ಮೃತದೇಹ ಇದಾಗಿದೆ. ಈ ಮಹಿಳೆ ಮನೆಯಲ್ಲಿ ಒಬ್ಬರೇ ಇರುತ್ತಿದ್ದರಂತೆ. ದುಷ್ಕರ್ಮಿಗಳು ಕಳೆದ ಎರಡು ದಿನದ ಹಿಂದೆ ಕೊಲೆಗೈದು ಪರಾರಿಯಾಗಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮೃತದೇಹ ವಿಕಾರವಾಗಿದೆ. ಕುತ್ತಿಗೆಯ ಮೇಲಿನ ಯಾವುದೇ ಅಂಗಾಂಗಗಳು ಇಲ್ಲ. ತಲೆ ಕೂದಲು ಕತ್ತರಿಸಲಾಗಿದೆ. ಕಣ್ಣು, ಮೂಗು, ಕಿವಿ, ನಾಲಿಗೆಯಲ್ಲಿ ಕಿತ್ತು ಹಾಕಿರುವ ದುರುಳರು, ಆಕೆಯ ಮುಖದ ಮೇಲ್ಮೈ ಚರ್ಮವನ್ನೂ ಸುಲಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ತಂದೆ ಕೊಲೆಗೈದು ಹೆದ್ದಾರಿ ಪಕ್ಕ ಶವ ಹೂತಿಟ್ಟ ಮಗ; ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ಪೊಲೀಸರಿಂದ ತನಿಖೆ

ಮಹಿಳೆಯ ತಲೆಭಾಗದ ಹೊರತಾಗಿ ಬೇರಾವುದೇ ಭಾಗದಲ್ಲಿ ಗಾಯದ ಗುರುತುಗಳಿಲ್ಲ. ಮನೆಯ ಮಂಚದ ಕೆಳಗೆ ಶವ ದೊರೆತಿದೆ. ಮೃತದೇಹದ ಬಳಿ ಕಿತ್ತು ಹಾಕಿದ ಹುಲ್ಲುಗಳು ಪತ್ತೆಯಾಗಿವೆ. ಪ್ರಕರಣ ಜಟಿಲವಾಗಿದ್ದದಿಂದ ಶಹದೋಲ್ ಹೆಚ್ಚುವರಿ ಎಸ್ಪಿ ಮುಖೇಶ್ ವೈಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಕೂಡ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

''ನಿಗೂಢ ರೀತಿಯಲ್ಲಿ ಮಹಿಳೆಯ ಮೃತದೇಹ ಕಂಡುಬಂದಿದೆ. ಆಕೆಯ ಮನೆಯಲ್ಲಿ ಮಲಗುವ ಮಂಚದ ಕೆಳಗಡೆ ಮೃತದೇಹ ಸಿಕ್ಕಿದೆ. ಕೊಲೆ ನಡೆದು ಎರಡು ದಿನಗಳಾಗಿರಬಹುದು. ಕಾರಣ ಗೊತ್ತಿಲ್ಲ. ಮುಖದ ಮೇಲಿನ ಪ್ರಮುಖ ಅಂಗಾಂಗಗಳು ಕಾಣೆಯಾಗಿವೆ. ಚರ್ಮವನ್ನೂ ಸುಲಿದಿದ್ದಾರೆ. ಘಟನೆ ಬೀಭತ್ಸವಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ'' ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಭೀಕರ ಹತ್ಯೆ ಘಟನೆಯಿಂದ ಸ್ಥಳೀಯರು ಭಯಭೀತರಾಗಿದ್ದಾರೆ.

ರೈಲಿನಲ್ಲಿ ಗುಂಡು ಹಾರಿಸಿದ ಆರ್‌ಪಿಎಫ್ ಯೋಧ: ಜೈಪುರ-ಮುಂಬೈ ರೈಲು ಮಾರ್ಗದಲ್ಲಿ ಆರ್‌ಪಿಎಫ್ ಕಾನ್ಸ್‌ಟೇಬಲ್‌ವೊಬ್ಬ ಗುಂಡಿನ ದಾಳಿ ನಡೆಸಿದ ಆಘಾತಕಾರಿ ಘಟನೆ ಇಂದು ಬೆಳಗ್ಗೆ ನಡೆದಿದೆ. ಈ ದಾಳಿಯಲ್ಲಿ ಓರ್ವ ಆರ್‌ಪಿಎಫ್ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ಸಹಿತ ನಾಲ್ವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಸದ್ಯಕ್ಕೆ ಘಟನೆಗೆ ಕಾರಣ ತಿಳಿದುಬಂದಿಲ್ಲ. ರೈಲ್ವೇ ಅಧಿಕಾರಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು ಘಟನೆ ನಡೆದ ರೈಲು ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ಕೆಲ ತಿಂಗಳ ಹಿಂದಷ್ಟೇ ಕೇರಳದಲ್ಲಿ ಸಂಚರಿಸುತ್ತಿದ್ದ ರೈಲಿನಲ್ಲಿ ವ್ಯಕ್ತಿಯೊಬ್ಬ ಇತರ ಪ್ರಯಾಣಿಕರ ಮೇಲೆ ದಾಳಿ ನಡೆಸಿ ವಿಕೃತಿ ಮೆರೆದ ಘಟನೆ ಸಂಚಲನ ಸೃಷ್ಟಿಸಿತ್ತು.

ಇದನ್ನೂ ಓದಿ: ಯುವಕನೊಂದಿಗೆ ಓಡಿ ಹೋಗಿದ್ದ ತಂಗಿ.. ಸಹೋದರಿಯ ರುಂಡ ಕತ್ತರಿಸಿ, ಪೊಲೀಸ್​ ಠಾಣೆಗೆ ಒಯ್ಯುತ್ತಿದ್ದ ಅಣ್ಣ.. ಮುಂದೆ..?

Last Updated : Jul 31, 2023, 9:21 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.