ETV Bharat / bharat

ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ನವವಿವಾಹಿತೆ - ಆತ್ಮಹತ್ಯೆಗೆ ಶರಣಾದ ಮಹಿಳೆ

ಗಂಡನ ಮನೆಯವರ ವರದಕ್ಷಿಣೆ ಕಿರುಕುಳದಿಂದ ನವವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

WOMAN DEAD BODY FOUND HANGING
WOMAN DEAD BODY FOUND HANGING
author img

By

Published : Sep 30, 2021, 5:15 PM IST

ಸಿದ್ಧಾರ್ಥ​ನಗರ(ಉತ್ತರ ಪ್ರದೇಶ): ನವವಿವಾಹಿತೆಯೋರ್ವಳ ಮೃತದೇಹ ಮನೆಯಲ್ಲಿನ ಫ್ಯಾನ್​ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ವರದಕ್ಷಿಣೆ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

ಉತ್ತರ ಪ್ರದೇಶದ ಸಿದ್ಧಾರ್ಥನಗರದಲ್ಲಿ ಈ ಘಟನೆ ನಡೆದಿದ್ದು, ಕಳೆದ ಕೆಲ ದಿನಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ 21 ವರ್ಷದ ರಿಮಾ ಈ ನಿರ್ಧಾರ ಕೈಗೊಂಡಿದ್ದಾಳೆ.

ಇದನ್ನೂ ಓದಿ: ನಾನವನಲ್ಲ.. ನನಗೆ ಟ್ಯಾಗ್​ ಮಾಡುವುದು ದಯವಿಟ್ಟು ನಿಲ್ಲಿಸಿ: ಗೋಲ್​​ಕೀಪರ್​​ 'ಅಮರೀಂದರ್​ ಸಿಂಗ್​' ಮನವಿ

21 ವರ್ಷದ ರೀಮಾ ಸಿದ್ಧಾರ್ಥನಗರ ಜಿಲ್ಲೆಯ ನಿವಾಸಿಯಾಗಿದ್ದು, 2020ರ ಜೂನ್ ತಿಂಗಳಳ್ಲಿ ಸದರ್​ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ನಿವಾಸಿ ಸುಭಾಷ್​​ ಯಾದವ್ ಜೊತೆ ಮದುವೆ ಮಾಡಿಸಲಾಗಿತ್ತು. ಈ ವೇಳೆ ಹೆಚ್ಚಿನ ವರದಕ್ಷಿಣೆ ನೀಡಿದ್ದರು. ಬರುವ ದಿನಗಳಲ್ಲಿ ಚಿನ್ನದ ಚೈನ್​ ನೀಡುವ ಭರವಸೆ ಸಹ ನೀಡಿದ್ದರು. ಆದರೆ ಬಡತನದಿಂದಾಗಿ ಇದು ಸಾಧ್ಯವಾಗಿರಲಿಲ್ಲ.

ಈ ವಿಷಯವನ್ನಿಟ್ಟುಕೊಂಡು ರಿಮಾಗೆ ಆಕೆಯ ಅತ್ತೆ ಹಾಗೂ ಗಂಡನ ಮನೆಯವರು ಪ್ರತಿದಿನ ಕಿರುಕುಳ ನೀಡಲು ಶುರು ಮಾಡಿದ್ದಾರೆ. ಇದರ ಬೆನ್ನಲ್ಲೇ ವಿವಾಹಿತೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದಕ್ಕೆ ಸಂಬಂಧಿಸಿದಂತೆ ಯುವತಿಯ ಪೋಷಕರು ದೂರು ದಾಖಲು ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.