ETV Bharat / bharat

Coach Suspended: ಹರಿಯಾಣ ಸಚಿವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಮಹಿಳಾ ಕೋಚ್ ಅಮಾನತು! - ಜೂನಿಯರ್​ ಅಥ್ಲೆಟಿಕ್ಸ್​​

Woman Coach Suspended: ಹರಿಯಾಣ ಸಚಿವ ಸಂದೀಪ್​ ಸಿಂಗ್​ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ಜೂನಿಯರ್​ ಅಥ್ಲೆಟಿಕ್ಸ್​​ ಮಹಿಳಾ ಕೋಚ್ ಅಮಾನತಾಗಿದ್ದಾರೆ.

Woman coach, who levelled sexual harassment allegations against Haryana minister, suspended
ಹರಿಯಾಣ ಸಚಿವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಮಹಿಳಾ ಕೋಚ್ ಅಮಾನತು
author img

By

Published : Aug 16, 2023, 3:59 PM IST

ಚಂಡೀಗಢ (ಹರಿಯಾಣ): ಹರಿಯಾಣ ಸಚಿವ ಸಂದೀಪ್​ ಸಿಂಗ್​ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ಜೂನಿಯರ್​ ಅಥ್ಲೆಟಿಕ್ಸ್​​ ಮಹಿಳಾ ಕೋಚ್​ವೊಬ್ಬರನ್ನು ಸೇವೆಯಿಂದ ಅಮಾನತುಗೊಳಿಸಿ ಇಂದು ಕ್ರೀಡಾ ಇಲಾಖೆ ಆದೇಶಿಸಿದೆ. ಸರ್ಕಾರದ ಈ ಕ್ರಮದ ವಿರುದ್ಧ ನ್ಯಾಯಾಲಯದ ಮೊರೆ ಹೋಗುವುದಾಗಿ ಕೋಚ್​ ತಿಳಿಸಿದ್ದಾರೆ.

ಅಶಿಸ್ತು ಮತ್ತು ಸೇವಾ ನಡವಳಿಕೆ ನಿಯಮಗಳನ್ನು ಉಲ್ಲಂಘಿಸಿದ ಆರೋಪದಡಿ ಮಹಿಳಾ ಕೋಚ್ಅನ್ನು ಅಮಾನತುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಅಧಿಕೃತ ಆದೇಶದಲ್ಲಿ ಈ ಬಗ್ಗೆ ಸ್ಪಷ್ಟವಾದ ಉಲ್ಲೇಖಗಳಿಲ್ಲ. ಆಗಸ್ಟ್ 11ರಂದು ಕ್ರೀಡಾ ಇಲಾಖೆಯ ನಿರ್ದೇಶಕ ಯಶೇಂದ್ರ ಸಿಂಗ್ ಈ ಅಮಾನತು ಆದೇಶ ಹೊರಡಿಸಿದ್ದಾರೆ. ''ಜೂನಿಯರ್ ಅಥ್ಲೆಟಿಕ್ ಕೋಚ್​ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಅಮಾನತು ಅವಧಿಯಲ್ಲಿ ಅವರು ಹರಿಯಾಣ ನಾಗರಿಕ ಸೇವೆಗಳ (ಸಾಮಾನ್ಯ) ನಿಯಮಗಳು-2016ರ ನಿಯಮ 83ರ ಅಡಿಯಲ್ಲಿ ಜೀವನಾಧಾರ ಭತ್ಯೆಗೆ ಅರ್ಹರಾಗಿರುತ್ತಾರೆ'' ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಒತ್ತಡ ಹೇರಲು ಇದು ಮತ್ತೊಂದು ಮಾರ್ಗ - ಕೋಚ್​ ಆರೋಪ: ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹಿಳಾ ಕೋಚ್​, ''ನನ್ನನ್ನು ಮೌನವಾಗಿಸಲು ಕಳೆದ ಕೆಲವು ತಿಂಗಳಿಂದ ಒತ್ತಡ ಹೇರಲಾಗುತ್ತಿದೆ'' ಎಂದು ಆರೋಪಿಸಿದ್ದಾರೆ. ಅಲ್ಲದೇ, ''ನನ್ನ ಈ ಅನ್ಯಾಯದ ಅಮಾನತಿನ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲು ಯೋಚಿಸುತ್ತಿದ್ದೇನೆ'' ಎಂದು ಹೇಳಿದ್ದಾರೆ.

ಇದೇ ವೇಳೆ, ನಿಮ್ಮ ಮೇಲೆ ಯಾರು ಒತ್ತಡ ಹಾಕುತ್ತಿದ್ದಾರೆ ಎಂಬ ಪ್ರಶ್ನೆಗೆ ಕೋಚ್​ ಪ್ರತಿಕ್ರಿಯಿಸಿ, "ಈ ಬಗ್ಗೆ ಮಾಧ್ಯಮಗಳಿಗೆ ಎಲ್ಲವೂ ತಿಳಿದಿದೆ. ಅವರು ನನ್ನನ್ನು ಅಮಾನತುಗೊಳಿಸಿದ್ದಾರೆ. ಆದರೆ, ಅದಕ್ಕೆ ಯಾವುದೇ ಕಾರಣವನ್ನು ನೀಡಿಲ್ಲ. ನನ್ನ ಮೇಲೆ ತಿಂಗಳಿಂದಲೂ ಒತ್ತಡವಿದೆ. ಈಗ ಸರ್ಕಾರದಿಂದ ನನ್ನ ಮೇಲೆ ಒತ್ತಡ ಹೇರಲು ಇದು ಮತ್ತೊಂದು ಮಾರ್ಗವಾಗಿದೆ" ಎಂದು ಯಾರ ಹೆಸರನ್ನೂ ಉಲ್ಲೇಖಿಸದೆ ದೂರಿದರು.

"ನನ್ನನ್ನು ಅಮಾನತುಗೊಳಿಸಿರುವ ಕಾರಣ ನನಗೆ ಗೊತ್ತಿದೆ. ಏಕೆಂದರೆ, ನಾನು ಈ ಪ್ರಕರಣದಿಂದ ಹಿಂದೆ ಸರಿಯುವುದಿಲ್ಲ. ನನ್ನ ಸೇವೆಯನ್ನು ಕೊನೆಗೊಳಿಸಲಿ. ಆದರೆ, ನಾನು ನನ್ನ ಹಕ್ಕುಗಳಿಗಾಗಿ ಹೋರಾಡುತ್ತೇನೆ. ನಾನು ನ್ಯಾಯಾಲಯದಿಂದ ನ್ಯಾಯವನ್ನು ಪಡೆಯುತ್ತೇನೆ. ಯಾರನ್ನಾದರೂ ಅಮಾನತುಗೊಳಿಸುವ ಮುನ್ನ ನಿಯಮಗಳ ಅಡಿಯಲ್ಲಿ ಎಚ್ಚರಿಕೆ ನೀಡಲಾಗುತ್ತದೆ. ಆದರೆ, ನೇರವಾಗಿ ಅಮಾನತು ಆದೇಶವನ್ನು ಹಸ್ತಾಂತರಿಸಿದ್ದಾರೆ. ಅಲ್ಲದೇ, ನನ್ನನ್ನು ಅಮಾನತು ಮಾಡಲಾಗಿದೆ ಎಂದು ಕ್ರೀಡಾ ಇಲಾಖೆಯ ಯಾವೊಬ್ಬ ಅಧಿಕಾರಿಯೂ ಹೇಳಿಲ್ಲ. ಸೋಮವಾರ ಸಂಜೆ ನನ್ನ ನಿವಾಸಕ್ಕೆ ಬಂದು ಅಮಾನತು ಪತ್ರವನ್ನು ಕೊಡಲಾಗಿದೆ'' ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪ: ಹರಿಯಾಣ ಕ್ರೀಡಾ ಸಚಿವ ಸಂದೀಪ್ ಸಿಂಗ್ ವಿರುದ್ಧ FIR

ಸಂದೀಪ್ ಸಿಂಗ್ ಪ್ರಸ್ತುತ ಮುದ್ರಣ ಮತ್ತು ಲೇಖನ ಸಾಮಗ್ರಿಗಳ ಸಚಿವರಾಗಿರುವ ಸಂದೀಪ್ ಸಿಂಗ್, ಭಾರತದ ಹಾಕಿ ತಂಡದ ಮಾಜಿ ನಾಯಕರಾಗಿದ್ದಾರೆ. ಇದೇ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕಳೆದ ವರ್ಷ ಮಹಿಳಾ ಕೋಚ್ ದೂರಿನ ಮೇಲೆ ಲೈಂಗಿಕ ಕಿರುಕುಳ, ಬೆದರಿಕೆ ಸೇರಿ ವಿವಿಧ ಕಾಯ್ದೆಗಳಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಕುರಿತ ತನಿಖೆಗೆ ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿದ್ದರು. ಮತ್ತೊಂದೆಡೆ, ಈ ಆರೋಪ ಬಂದ ಬಳಿಕ ಅವರು ಕ್ರೀಡಾ ಖಾತೆಯನ್ನು ತ್ಯಜಿಸಿದ್ದರು. ಮಹಿಳಾ ಕೋಚ್ ತನ್ನ ವಿರುದ್ಧ ಹೊರಿಸಿರುವ ಆರೋಪ ನಿರಾಧಾರ ಎಂದು ಅವರು ಹೇಳಿದ್ದರು. ಕ್ರೀಡಾ ಖಾತೆಯು ಪ್ರಸ್ತುತ ಮುಖ್ಯಮಂತ್ರಿ ಬಳಿ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.